ಆಗಾಗ ನಮ್ಮ ಮನೆಯಲ್ಲಿ ಹಿರಿಯವರು ಚಪ್ಪಲಿಯನ್ನು ತಲೆಕೆಳಗಾಗಿ ಯಾಕೆ ಹಾಕುತ್ತೀರಿ ಎಂಬುದಾಗಿ ನಮಗೆ ಬಯುತ್ತಲೇ ಇರುತ್ತಾರೆ. ಹಿರಿಯರು ಏನಾದರೂ ಹೇಳುತ್ತಾರೆ ಎಂದರೆ ಅದಕ್ಕೆ ಒಂದು ಕಾರಣ ಅಥವಾ ಅದರ ಹಿಂದೆ ಒಂದು ಮಹತ್ವ ಇರುತ್ತದೆ ಎಂಬುದಾಗಿಯೇ ಅರ್ಥವಾಗಿರುತ್ತದೆ. ನಿನ್ನ ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಚಪ್ಪಲಿಯನ್ನು ತಲೆಕೆಳಗಾಗಿ ಹಾಕಿದರೆ ಅದರಿಂದಾಗಿ ಸಾಕಷ್ಟು ಆರ್ಥಿಕ ಸಂಕಷ್ಟಗಳು ಉಂಟಾಗುತ್ತವೆ ಎಂಬ ಉಲ್ಲೇಖವನ್ನು ಮಾಡಲಾಗಿದೆ.
ಮನೆಯ ಮುಂದೆ ಚಪ್ಪಲಿ ತಲೆಕೆಳಗಾಗಿ ಬಿದ್ದರೆ ಮನೆಯವರ ನಡುವೆ ಜಗಳ ಹೆಚ್ಚಾಗುತ್ತದೆ ಹಾಗೂ ಮನೆಯಲ್ಲಿ ನೆಲೆಸಿರುವ ಲಕ್ಷ್ಮಿ ತಾಯಿ ಕೋಪಗೊಳ್ಳುತ್ತಾಳೆ ಎಂಬ ಮಾತಿದೆ. ಕೇವಲ ಎಷ್ಟು ಮಾತ್ರವಲ್ಲದೆ ಮನೆಯ ಮುಂದೆ ಚಪ್ಪಲಿ ಬೂಟುಗಳು ತಲೆಕೆಳಗಾಗಿ ಇರುವುದು ಮನೆಯ ಸದಸ್ಯರಲ್ಲಿ ಯಾರಿಗಾದರೂ ಗಂಭೀರ ಆರೋಗ್ಯ ಸಮಸ್ಯೆಯನ್ನು ತರುವಂತಹ ಲಕ್ಷಣಗಳು ಕೂಡ ಇರುತ್ತವೆ. ಹೀಗಾಗಿ ಎಲ್ಲಿ ಕೂಡ ಚಪ್ಪಲಿ ತಲೆಕೆಳಗಾಗಿ ಬಿದ್ದಿರುವುದು ಕಂಡು ಬಂದರೆ ಕೂಡಲು ಸರಿ ಮಾಡಿ.
ತಲೆಕೆಳಗಾಗಿ ಬಿದ್ದಿರುವ ಚಪ್ಪಲಿ ಹಾಗೂ ಬೂಟುಗಳು ಆ ಮನೆಯ ಒಳಗೆ ನಕಾರಾತ್ಮಕತೆ ಹೆಚ್ಚಾಗುವಂತೆ ಮಾಡುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ. ಮನೆಯಲ್ಲಿ ಸಂಪತ್ತು ನೆಲಸಲು ಮುಖ್ಯವಾಗಿ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸಿರುವುದು ಪ್ರಮುಖವಾಗಿರುತ್ತದೆ. ಒಂದು ವೇಳೆ ನೀವು ಹೀಗೆ ಮಾಡಿದರೆ ಖಂಡಿತವಾಗಿ ಆಕೆ ಮುನಿಸಿಕೊಂಡು ಮನೆ ಬಿಟ್ಟು ಹೋಗುತ್ತಾಳೆ. ಹೀಗಾಗಿ ಯಾವತ್ತೂ ಕೂಡ ನೀವು ಮನೆ ಒಳಗೆ ಹೋಗುವಾಗ ಚಪ್ಪಲಿಗಳನ್ನು ತಲೆಕೆಳಗಾಗಿ ಹಾಕಿ ಹೋಗಬೇಡಿ.
ಇದು ಅಶುಭ ಸೂಚಕವಾಗಿದ್ದು ಮನೆಯಲ್ಲಿ ನಡೆಯಬೇಕಾಗಿರುವ ಸಂತೋಷ ಕಾರ್ಯಗಳು ಕೂಡ ನಿಲ್ಲುವಂತೆ ಮಾಡುತ್ತದೆ. ಸನಿಯಾ ಪ್ರಕೋಪಕ್ಕೆ ಕಾರಣವಾಗುತ್ತದೆ ಹಾಗೂ ಮನೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಒಟ್ಟಾರೆಯಾಗಿ ಮನೆಯ ಮುಂದೆ ಚಪ್ಪಲಿ ಹಾಗೂ ಪಾದರಕ್ಷೆಗಳನ್ನು ತಲೆಕೆಳಗಾಗಿ ಇಡುವುದು ಆ ಮನೆಯ ಕೆಟ್ಟದ್ದಕ್ಕೆ ಕಾರಣವಾಗುತ್ತದೆ ಎಂದು ಹೇಳಬಹುದಾಗಿದೆ. ಹೀಗಾಗಿ ಇಂದಿನಿಂದ ಇದರ ಕುರಿತಂತೆ ಜಾಗೃತೆ ವಹಿಸಿ.