ಕೆಲವು ಹಳೆಯ ಸಂಪ್ರದಾಯಗಳನ್ನಾಗಲಿ ಪದ್ಧತಿಯನ್ನಾಗಲಿ ಈಗ ಆಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ನಾವು ಆಧುನಿಕ ಬದಲಾವಣೆಗೆ ಒಗ್ಗಿಕೊಂಡಿದ್ದೇವೆ. ಕೆಲವು ಹುಡುಗಿಯರಂತೂ ಮಾಡ್ರನ್ ಯುಗಕ್ಕೆ ತಕ್ಕ ಹಾಗೆ ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ ಎನ್ನಬಹುದು. ಇಂದು ಸೋಶಿಯಲ್ ಮೀಡಿಯಾವನ್ನು ತೆರೆದು ನೋಡಿದರೆ ಸಾಕು ಅದರಲ್ಲಿ ಸಾಕಷ್ಟು ಹುಡುಗಿಯರು ಫಾಸ್ಟ್ ಲೈಫ್ ಅನುಸರಿಸುತ್ತಿರುವುದು ಕಂಡುಬರುತ್ತದೆ.
ಹುಡುಗಿಯರು ಬದುಕುವ ರೀತಿಯಲ್ಲಿ, ತೊಡುವ ಬಟ್ಟೆಯಲ್ಲಿ ಎಲ್ಲದರಲ್ಲಿಯೂ ಸಾಕಷ್ಟು ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಹಾಗಂದ ಮಾತ್ರಕ್ಕೆ ಇದು ತಪ್ಪೇನು ಅಲ್ಲ ಕಾಲಕ್ಕೆ ತಕ್ಕ ಹಾಗೆ ನಾವು ಕೂಡ ಬದಲಾಗುವುದು ಜೊತೆಗೆ ಅಭಿವೃದ್ಧಿ ಹೊಂದುವುದು ಸಹಜ. ಆದ್ರೆ ಇಂತಹ ಮಾಡ್ರನೈಜೇಷನ್ ನೋಡಿ ನೋಡಿ ಬೇಸರ ಎನಿಸಿದರೆ ಇತ್ತೀಚಿಗೆ ವೈರಲ್ ಆಗುತ್ತಿರುವ ಈ ಒಂದು ವಿಡಿಯೋವನ್ನು ನೋಡಿ.
ನಮ್ಮ ಹಿಂದೂ ಧರ್ಮದಲ್ಲಿ ಸಾಕಷ್ಟು ಆಚರಣೆಗಳು ಇವೆ. ನಾವು ನಂಬುವುದು ದೇವರನ್ನ. ಹಾಗಾಗಿ ಹಿಂದುಗಳು ತಾವು ನಂಬುವ ದೇವರ ದೇವಾಲಯಗಳಿಗೆ ಹೋಗುವುದು ಕೂಡ ಸಹಜ. ನಮಗೆ ಯಾವುದಾದರೂ ತೊಂದರೆ ಆದರೆ ಅಥವಾ ಯಾವುದಾದರೂ ಇಷ್ಟಾರ್ಥಗಳು ಈಡೇರಬೇಕು ಎಂದರೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿರುವ ಹರಕೆಯನ್ನು ಹೊತ್ತು ನಮ್ಮ ಇಷ್ಟಾರ್ಥಗಳು ತೀರಿದ ನಂತರ ದೇವರಿಗೆ ಹರಕೆ ಸಲ್ಲಿಸಿ ಬರುತ್ತೇವೆ. ಹಿಂದೂ ದೇವಸ್ಥಾನದ ನೆಲದ ಮೇಲೆ ದೇವಸ್ಥಾನದ ಪ್ರಸಾದ ಊಟ ಮಾಡುವ ಒಂದು ಹರಕೆ ಕೂಡ ಇತ್ತು ಆದರೆ ಇದು ಹೈಜೆನಿಕ್ ಅಲ್ಲ ಎನ್ನುವ ಕಾರಣಕ್ಕೆ ಈಗ ಈ ಪದ್ಧತಿಯನ್ನು ಆಚರಣೆ ಮಾಡುವಂತಿಲ್ಲ.
ಆದರೆ ಹಲವರಲ್ಲಿ ಇರುವ ನಂಬಿಕೆಗಳು ಇನ್ನೂ ಮಾಸಿಲ್ಲ. ಹಾಗಾಗಿ ಕೆಲವು ಹಳೆಯ ಆಚರಣೆಗಳನ್ನು ಕೂಡ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಈಗಿನ ಆಧುನಿಕ ಯುವತಿಯರು ಕೂಡ ಇಂಥ ಹರಕೆ ಸಲ್ಲಿಸುವ ನೆಲದ ಮೇಲೆ ಊಟ ಮಾಡುವ ಆಚರಣೆ ನೋಡಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಕೆಲವು ದೇವಾಲಯಗಳಲ್ಲಿ ಭಕ್ತರ ಇಚ್ಛೆಗೆ ಅನುಸಾರವಾಗಿ ಈಗಲೂ ನೆಲದ ಮೇಲೆ ಊಟ ಮಾಡುವ ಪದ್ಧತಿ ಇದೆ ಇದು ಕೇವಲ ಭಕ್ತರು ಬಯಸಿದರೆ ಮಾತ್ರ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
View this post on Instagram
ಹಾಗೆ ದೇವಸ್ಥಾನ ಒಂದರಲ್ಲಿ ಒಬ್ಬ ಯುವತಿ ಹಿಂದೂ ಸಂಪ್ರದಾಯದಂತೆ ಆಚರಣೆಯಂತೆ ನೆಲದ ಮೇಲೆ ದೇವರು ಪ್ರಸಾದವನ್ನು ಊಟ ಮಾಡಿ ಸಂತ್ರಪ್ತಳಾಗಿದ್ದಾಳೆ. ಆಕೆಯ ಕುಟುಂಬಸ್ಥರು ಕೂಡ ನೆಲದ ಮೇಲೆ ಊಟ ಮಾಡಿರುವುದು ಕಂಡುಬಂದಿದೆ. ಸದ್ಯ ಒಬ್ಬ ಯುವತಿ ದೇವಸ್ಥಾನ ಒಂದರಲ್ಲಿ ನೆಲದ ಮೇಲೆ ಪ್ರಸಾದ ಊಟ ಮಾಡಿ ಹರಕೆ ತೀರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.