Sanatan Dharma : ಭಾರತೀಯ ಪುಣ್ಯ ನಾಡಿನಲ್ಲಿ ಹಿಂದು ಸಂಸ್ಕೃತಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯತೆಯನ್ನು ಬೇರೆ ಯಾವ ದೇಶದ ಆಚಾರ ವಿಚಾರಗಳಲ್ಲಿ ನೋಡಲು ಸಾಧ್ಯವಿಲ್ಲ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ವರ್ಗದ ಜನರಿಗೆ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿವಿಧತೆಯಲ್ಲಿ ಏಕತೆ ಕಾಣುವ ವೈಶಿಷ್ಟ್ಯತೆ ಭಾರತೀಯ ಸಂಸ್ಕೃತಿಯಾಗಿದೆ.
ಹೀಗಾಗಿ ವಿವಿಧ ಸಂಸ್ಕೃತಿಯನ್ನು ಹೊಂದಿರುವ ಈ ಭಾರತದಲ್ಲಿ ಒಂದೊಂದು ಪ್ರಾಂತ್ಯದ ಆಚಾರ ವಿಚಾರಗಳು ವಿಭಿನ್ನ ವಾಗಿರುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಆಚರಿಸಲು ಸಾಧ್ಯವಿಲ್ಲದ ಸಂಪ್ರದಾಯಗಳಿವೆ. ಅದರಲ್ಲಿಯೂ ಹೆಣ್ಣು ಇವತ್ತು ಇಷ್ಟರ ಮಟ್ಟಿಗೆ ಅಭಿವೃದ್ಧಿ (Development) ಹೊಂದಿದ್ದರೂ ಕೆಲವೊಂದು ಆಚಾರ ವಿಚಾರಗಳನ್ನು ಕಣ್ಣು ಮುಚ್ಚಿ ಪಾಲಿಸಬೇಕಾಗುತ್ತದೆ.
ಆದರೆ ಭಾರತೀಯರ ಉಡುಗೆ ತೊಡುಗೆ (Dressing Style) ಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ವಿದೇಶಿ ಶೈಲಿಯಲ್ಲಿ ಭಾರತೀಯರು ಅಳವಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತುಂಡುಗೆಗಳ ಹಾವಳಿಯು ಹೆಚ್ಚಾಗುತ್ತಿದೆ. ಇತ್ತ ವಿದೇಶಿಗರು ಮಾತ್ರ ಭಾರತೀಯ ಆಚಾರ ವಿಚಾರ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಹೀಗಾಗಿ ಭಾರತೀಯರ ಉಡುಗೆ ಹಾಗೂ ಆಹಾರ ಪದ್ಧತಿ, ಆಚಾರ ವಿಚಾರಗಳನ್ನು ವಿದೇಶಿಗರು ಪಾಲಿಸುತ್ತಿದ್ದಾರೆ.
ವಿದೇಶಿಗರಿಗೆ ಇರುವ ಭಾರತೀಯರ ಆಚಾರ ವಿಚಾರ, ಸಂಸ್ಕೃತಿಯ ಮೇಲಿನ ವ್ಯಾಮೋಹವು ಅವರ ನಡೆ ನುಡಿಯಲ್ಲಿಯೇ ವ್ಯಕ್ತವಾಗುತ್ತದೆ. ಭಾರತೀಯರು ವಿದೇಶಿಗರ ಉಡುಗೆ ತೊಡುಗೆ, ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೂ ಅವರು ನಮ್ಮಲ್ಲಿಗೆ ಬಂದು ಇಲ್ಲಿನ ಆಚಾರ ವಿಚಾರವನ್ನು ಅಳವಡಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ಆದರೆ ವಿದೇಶಿಗರು ಮಾತ್ರ ಇಷ್ಟ ಪಟ್ಟು ಇಲ್ಲಿನ ಪ್ರತಿಯೊಂದು ಆಚಾರ ವಿಚಾರವನ್ನು ಪಾಲಿಸುತ್ತಿದ್ದಾರೆ.