ರಕ್ಕಮ್ಮ ಹಾಡಿಗೆ ಸಂಯುಕ್ತ ಹೆಗಡೆ ಸಖತ್ ಡ್ಯಾನ್ಸ್.!! ಸೂಪರ್ ಎಂದ ನೆಟ್ಟಿಗರು…

CINEMA/ಸಿನಿಮಾ

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಕ್ಕಮ್ಮನದ್ದೇ ಹವಾ. ಯಾರು ನೋಡಿದರೂ ರಾ.. ರಾ.. ರಕ್ಕಮ್ಮ ಅಂತ ರಕ್ಕಮ್ಮನನ್ನು ಕರೆಯುತ್ತಿದ್ದಾರೆ. ಇದು ‘ವಿಕ್ರಾಂತ್ ರೋಣ’ ಚಿತ್ರದ ಹಾಡಿನ ಎಫೆಕ್ಟ್ ಅಲ್ಲದೆ ಮತ್ತೇನು ಅಲ್ಲ.

ಈ ಹಾಡು ರಿಲೀಸ್ ಆದಾಗಿನಿಂದಲೂ ನೃತ್ಯಪ್ರಿಯರ ಕಾಲು ನೆಲದ ಮೇಲೆ ನಿಲ್ಲುತ್ತಾ ಇಲ್ಲ. ರಾ.. ರಾ.. ರಕ್ಕಮ್ಮ ಅಂತ ಸ್ಟೆಪ್ ಹಾಕಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇನ್ನೂ ಈ ಹಾಡಿಗೆ ಹೆಜ್ಜೆ ಹಾಕಿದವರಲ್ಲಿ ಸಿನಿಮಾ ತಾರೆಯರೇ ಹೆಚ್ಚು.

ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಯಕ್ಕ ಸಕ್ಕ, ಯಕ್ಕ ಸಕ್ಕ ಅಂತ ಡ್ಯಾನ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಬ್ಲಾಕ್ ಅಂಡ್ ವೈಟ್ ಮತ್ತು ಚಂದನ್ ಶೆಟ್ಟಿ ಬ್ಲಾಕ್ ಅಂಡ್ ರೆಡ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಜೊತೆ ಜೊತೆಯಾಗಿ ಮಾಡಿದ ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಪಡೆದು ವೈರಲ್ ಲಿಸ್ಟ್ ಸೇರಿದೆ.

ಕಿಚ್ಚನನ್ನು ಇಷ್ಟ ಪಡುವ ಎಲ್ಲರೂ ಈ ಹಾಡಿಗೆ ಡಾನ್ಸ್ ಮಾಡಿ ಪೋಸ್ಟ್ ಹಂಚಿಕೊಳ್ಳುತ್ತಾ ಇದ್ದಾರೆ. ಸದ್ಯ ನಟಿ ಆಶಿಕಾರಂಗನಾಥ್ ಕೂಡ ರಕ್ಕಮ್ಮನ ಅವತಾರ ತಾಳಿದ್ದಾರೆ. ಯಾವೆಲ್ಲಾ ಕಲಾವಿದರು, ಕಿಚ್ಚನ ಹಾಡಿಗೆ ಹೇಗೆಲ್ಲಾ ಹೆಜ್ಜೆ ಹಾಕಿದ್ದಾರೆ ಎನ್ನುವ ವಿವರ ಇಲ್ಲಿದೆ‌. ಮುಂದೆ ಓದಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.