ನಟಿ ಸಂಯುಕ್ತಾ ಹೆಗ್ಡೆ ತಾನು ಗಾಯದಿಂದ ಚೇತರಿಸಿಕೊಂಡಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಲು ಹೊಸ ವೀಡಿಯೋ ಶೇರ್ ಮಾಡಿದ್ದಾರೆ.
ಬಿಕಿನಿ ಧರಿಸಿ ಮಾಡಿರುವ ಡ್ಯಾನ್ಸ್ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರೀಂ ಚಿತ್ರದ ಫೈಟಿಂಗ್ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದರು.
ಮೂರು ತಿಂಗಳಲ್ಲಿ ಮೊದಲ ಡ್ಯಾನ್ಸ್ ವಿಡಿಯೊ. ನನ್ನ ಚಿಕಿತ್ಸೆ ಪೂರ್ಣಗೊಂಡಿದೆ. ನನ್ನ ತಜ್ಞರು ಚೆನ್ನಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದಾಗಿ ಸಾಕಷ್ಟು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಾರೆಯರು ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ. ಸಿನಿಮಾ ನಟಿಯರು ಅದೇನು ಮಾಡಿದರೂ ಸುದ್ದಿಯೇ. ಆದರೆ ಕೊಂಚ ಅತಿರೇಕವಾಗಿ ಆಡಿದರೆ ಮಾತ್ರ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಅವರ ಸುದ್ದಿಗಳು ವೈರಲ್ ಆಗುತ್ತವೆ. ಇದೇ ರೀತಿ ಟ್ರೋಲ್ ಆಗುವ ಅದೇ ರೀತಿ ವೈರಲ್ ಆಗುವಂತಹ ನಟಿ ಅಂದರೆ ಅದು ಕನ್ನಡದ ಸಂಯುಕ್ತಾ ಹೆಗ್ಡೆ. ಹೌದು, ನಟಿ ಸಂಯುಕ್ತಾ ಹೆಗ್ಡೆ ಸ್ಯಾಂಡಲ್ವುಡ್ನಲ್ಲಿ ಸದಾ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ನಟಿ.
ಹಿಂದೊಮ್ಮೆ ಪಾರ್ಕ್ನಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡಬೇಕಾದರೆ, ಕವಿತ ರೆಡ್ಡಿ ಅನ್ನುವವರ ಜೊತೆ ಕಿರಿಕ್ ಆಗಿತ್ತು. ಅದಾದ ನಂತರ ಕನ್ನಡ ಸಿನಿಮಾದಲ್ಲಿ ನೀವ್ಯಾಕೆ ನಟಿಸಲ್ಲ ಅನ್ನುವ ಪ್ರಶ್ನೆಗೆ ಕನ್ನಡ ನಿರ್ಮಾಪಕರ ವಿರುದ್ಧ ಗರಂ ಆಗಿದ್ದರು. ಕನ್ನಡ ನಟಿಯರಿಗೆ ಕನ್ನಡ ನಿರ್ಮಾಪಕರು ಅವಕಾಶ ಕೊಡಲ್ಲ ಎಂದು ಹೇಳಿದ್ದರು. ಹೀಗೆ ಸದಾ ವಿವಾದಗಳ ಮೇಲೆ ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ.
ಇವರು ಕನ್ನಡದ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದರು. ಆದರೆ ಅಲ್ಲಿ ಕೆಲವೇ ದಿನದಲ್ಲಿ ಹೊರಗೆ ಕಳುಹಿಸಿದ್ದರು. ಕಾರಣ ಪ್ರತಿಸ್ಪರ್ಧಿ ಸಮೀರ್ ಆಚಾರ್ಯ ಅವರ ಮೇಲೆ ಹ+ಲ್ಲೆ ಮಾಡಿದ್ದರು. ಹೀಗಾಗಿ ಬಿಗ್ ಬಾಸ್ ನಿಂದ ಹೊರ ಬಂದಿದ್ದರು. ಇನ್ನು ನಟಿ ಸಂಯುಕ್ತ ಹೆಗ್ಡೆ ಮೊದಲಿನಿಂದಲೂ, ಸಖತ್ ಬೋಲ್ಡ್. ಸದಾ ಬೋಲ್ಡ್ ಅವತಾರಗಳಲ್ಲಿ ಸಂಯುಕ್ತಾ ಹೆಗ್ಡೆ ಕಾಣಿಸಿಕೊಳ್ಳುತ್ತಾರೆ.
ಇವರ ಈ ಅವತಾರಗಳಿಂದಾಗಿ ಇವರು ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಸಂಯುಕ್ತಾ ಹೆಗ್ಡೆ ಇನ್ಯಾವುದಕ್ಕೂ ಕೇರ್ ಅನ್ನಲ್ಲ. ತಾನು ತನ್ನ ಇಷ್ಟ ಅನ್ನುವ ನೇಚರ್ ಅಚರದ್ದು. ಸಂಯುಕ್ತಾ ಹೆಗ್ಡೆ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸೆಕೆಂಡ್ ಹಿರೋಯಿನ್ ಆಗಿ ಆಯ್ಕೆ ಆಗಿದ್ದರು. ಅದರಲ್ಲಿನ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ತನ್ನ ಫಸ್ಟ್ ಸಿನಿಮಾದಲ್ಲಿಯೇ ಇವರು ಹಿಟ್ ಆಗಿದ್ದರು.