ಕಲರ್ಸ್ ಕನ್ನಡ ವಾಹಿನಿಯ ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಮೀರ್ ಆಚಾರ್ಯ, ಶ್ರಾವಣಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
‘ರಾಜಾ ರಾಣಿ’ ( Raja Rani ) ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ( Sameer Acharya ), ಶ್ರಾವಣಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಬೇಬಿ ಬಂಪ್ ಫೋಟೋದೊಂದಿಗೆ “ಜೀವನದ ಹೊಸ ಹಂತ” ಎಂದು ಶ್ರಾವಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಗಣ್ಯರು, ಆತ್ಮೀಯರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಶ್ರಾವಣಿಗಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಈ ಖಾಸಗಿ ಸಮಾರಂಭದಲ್ಲಿ ಕುಟುಂಬಸ್ಥರ ಜೊತೆ ಆತ್ಮೀಯರು ಭಾಗವಹಿಸಿದ್ದರು. ಕೊನೆ ಕೊನೆಯದಾಗಿ ‘ರಾಜಾ ರಾಣಿ’ ಶೋನಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಸೆಮಿ ಫಿನಾಲೆಯಲ್ಲಿ ಎಲಿಮಿನೇಟ್ ಆಗಿತ್ತು.ರಾಜಾ ರಾಣಿ ಶೋನಲ್ಲಿ ಮನಬಿಚ್ಚಿ ಮಾತನಾಡಿದ್ದ ಶ್ರಾವಣಿ, “ಗಂಡ-ಹೆಂಡತಿ ಸಂಬಂಧ ಶುರುವಾಗೋದು ಮದುವೆ ಅನ್ನುವ ಬಂಧದಿಂದ.
ಮೊದಲು ನನಗೆ ಗರ್ಭಪಾತ ಆದಾಗ ತುಂಬ ಕಾಳಜಿ ಮಾಡಿದ್ರಿ. ನಾನು ಏನೇ ತಪ್ಪು ಮಾಡಿದ್ರೂ ಕೂಡ ತಂದೆಯು ಮಗಳನ್ನು ಕ್ಷಮಿಸುವ ಹಾಗೆ ಪ್ರತಿಸಲ ನನ್ನ ಕ್ಷಮಿಸಿದ್ರಿ” ಅಂತ ಪತಿ ಸಮೀರ್ ಆಚಾರ್ಯಗೆ ಹೇಳಿದ್ದಾರೆ. ಅದಕ್ಕೆ ಸಮೀರ್ ಉತ್ತರ ನೀಡಿದ್ದು “ಸಂಸಾರದಲ್ಲಿ ಯಾರು ಜಗಳ ಆಡಲ್ಲ ಹೇಳು, ನಾನು ನಿನ್ನ ಜೊತೆ ಇರುವೆ, ಇರುತ್ತೀನಿ” ಅಂತ ಪತ್ನಿಗೆ ಧೈರ್ಯ ತುಂಬಿದ್ದರು.
View this post on Instagram