Samantha-Ruth-Prabhu

ತಮ್ಮ ಹದಗೆಟ್ಟ ಆರೋಗ್ಯದ ಬಗ್ಗೆ ಮಾತನಾಡುತ್ತಾ ನಾನು ಸತ್ತಿಲ್ಲ ಎಂದು ಕಣ್ಣೀರು ಹಾಕಿದ ನಟಿ ಸಮಂತಾ ಪರಿಸ್ಥಿತಿ ನೋಡಿದರೆ ಕರುಳು ಚೂರ್ ಅನ್ನುತ್ತೆ

Today News / ಕನ್ನಡ ಸುದ್ದಿಗಳು

ತಮಿಳು, ತೆಲಗು ಚಿತ್ರರಂಗದಿಂದ ಇಡೀ ದೇಶಕ್ಕೆ ಪರಿಚಿತರಾದ ಸಮಂತಾ ನಾಲ್ಕು ಬಾರಿ ದಕ್ಷಿಣ ಭಾರತದ ಫಿಲಂಫೇರ್ ಅವಾರ್ಡ್, ಆರು ಬಾರಿ ದಕ್ಷಿಣ ಭಾರತದ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಗಳನ್ನು ಪಡೆದಿದ್ದಾರೆ. ಡಿಗ್ರಿ ಓದುತ್ತಿರುವಾಗ ‘ಯೇ ಮಾಯಾ ಚೇಸಾವೆ’ ಚಿತ್ರಕ್ಕೆ ಆಯ್ಕೆಯಾಗಿ, ನಟನೆಗೆ ನಂದಿ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ. 2012ರಲ್ಲಿತೆರೆಕಂಡ ಪೊನ್ವಸಂತ ಹಾಗೂ ಈಗ ಸಿನಿಮಾಗಳು ಸಮಂತಾ ಅವರಿಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟಿತು.

ತೇರಿ, ಮಹಾ ನಟಿ, ಅ ಆ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡ ಸಮಂತಾ ಅವರು 2017ರಲ್ಲಿ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ವಿಚ್ಛೇದನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕೆ ಟಿಪ್ಪಣಿಗಳನ್ನು ಬಹಳವಾಗಿ ನೀಡಿದ್ದರೂ, ಯಾವುದಕ್ಕೂ ಕಿವಿಗೊಡದೆ ಸಮಂತಾ ಅವರು ಮುನ್ನುಗ್ಗುತ್ತಲೇ ಬಂದಿದ್ದರು. ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸುದ್ದಿಯಾಗಿತ್ತು.

Datei:Samantha Ruth Prabhu attends Critics Choice Awards 2022 (2).jpg –  Wikipedia

ಸಮಂತಾ ಅವರ ಅನಾರೋಗ್ಯದ ವಿಷಯವಾಗಿ ಬಹಳಷ್ಟು ಚರ್ಚೆಗಳು ನಡೆದಿದ್ದು, ‘ಜೀವಕ್ಕೆ ಅಪಾಯಕಾರಿ’ಅಪಾಯಕಾರಿ’ ಎಂಬಂತೆ ಬಿಂಬಿತವಾಗಿದ್ದು ಸಮಂತಾ ಅವರ ಮನಸ್ಸಿಗೆ ಘಾಸಿಯಾಗಿತ್ತು. ದೇಹದಲ್ಲಿ ನೋವು, ಸುಸ್ತುಗಳಿದ್ದರು ಚಿತ್ರೀಕರಣದಲ್ಲಿ ತೊಡಗಿಕೊಂಡೇ ಇದ್ದರು. ಮುಂಬರುವ ಯಶೋದಾ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತಮ್ಮ ಕಾಯಿಲೆ ‘ಮಯೋಸಿಟಿಸ್’ ಬಗ್ಗೆ ಮಾತನಾಡಿದ್ದಾರೆ.

ನಿರೂಪಕರ ಜೊತೆ ಮನ ತೆರೆದು ಮಾತನಾಡಿದ ಸಮಂತಾ ‘ನಾನು ಈ ಮೊದಲೇ ಹೇಳಿದಂತೆ ಕೆಲವು ದಿನಗಳು ಒಳ್ಳೆಯದಾಗಿರುತ್ತವೆ; ಕೆಲವು ದಿನಗಳು ಕೆಟ್ಟದಾಗಿರುತ್ತವೆ. ಹಲವು ದಿನ ಒಂದು ಹೆಜ್ಜೆ ಮುಂದೆ ಇಡುವುದು ಕಷ್ಟ ಎನಿಸುತ್ತಿತ್ತು. ಈಗ ಒಮ್ಮೆ ಹಿಂತಿರುಗಿ ನೋಡಿದಾಗ ಇಷ್ಟು ದೂರ ನಾನು ಬಂದಿದ್ದೀನಾ ಎಂದು ಅಚ್ಚರಿಯಾಗುತ್ತದೆ. ನಾನಿಲ್ಲಿ ಹೋರಾಡಲು ಇದ್ದೇನೆ. ಒಂದು ವಿಷಯ ಸ್ಪಷ್ಟ ಪಡಿಸುತ್ತೇನೆ. ನನ್ನ ಕಾಯಿಲೆಯು ಜೀವಕ್ಕೆ ಅಪಾಯಕಾರಿ ಎಂಬ ಬರಹಗಳನ್ನು ನೋಡಿದ್ದೇನೆ. ನನ್ನ ಅನಾರೋಗ್ಯವು ಜೀವ ಹೋಗುವಂತದ್ದಲ್ಲ. ಅಲ್ಲದೆ ನಾನಿನ್ನೂ ಸತ್ತಿಲ್ಲ. ಇಂತಹ ತಲೆಪಟ್ಟಿ ಬರಹಗಳ ಅವಶ್ಯಕತೆಯಿರಲಿಲ್ಲ ಎಂದೆನಿಸುತ್ತದೆ’ ಎಂದು ಭಾವುಕರಾಗಿ ನುಡಿದಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.