Samantha and Naga chaitanya are reunited: ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ತೆಲುಗು ಚಿತ್ರರಂಗದ ಮೋಸ್ಟ್ (Most) ಫೇವರೇಟ್(Favourite) ಕಪಲ್ (Couple)ಗಳಾಗಿದ್ದವರು. ಸದ್ಯ ವಿಚ್ಛೇದನದ (Divorce)ಬಳಿಕ ಇಬ್ಬರೂ ಕೂಡ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದು ನಟಿ ಸಮಂತಾ ಕೆಲವು ದಿನಗಳ ಹಿಂದೆ ತನಗಿರುವ ವಿಚಿತ್ರ ಕಾಯಿಲೆ ಬಗ್ಗೆ ಮಾಹಿತಿ ನೀಡಿದ್ದರು.
ಇನ್ನು ವಿಚ್ಛೇದನದ ಬಳಿಕವೂ ಕೂಡ ಅವರ ಅಭಿಮಾನಿಗಳು ಅವರನ್ನು ಮತ್ತೆ ಸ್ಕ್ರೀನ್ ಮೇಲೆ ನೋಡಲು ಉತ್ಸುಕರಾಗಿದ್ದು ಸದ್ಯ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡ್ತಿದ್ದಾರೆ. ಹೌದು ಸದ್ಯ ಈಗ ವಿಚ್ಛೇದನದ ನಂತರ ಸಮಂತಾ ಮತ್ತು ನಾಗ ಚೈತನ್ಯ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು ಇಬ್ಬರೂ ಒಟ್ಟಿಗೆ ಪ್ರಾಜೆಕ್ಟ್ (Project)ಒಂದಕ್ಕೆ ಸಹಿ ಹಾಕಿದ್ದರಂತೆ. ಒಟ್ಟಿಗೆ ಕೆಲಸ ಮಾಡಲಿದ್ದಾರೆ ಅನ್ನುವ ಸುದ್ದಿ ಇದೀಗ ಮಾಧ್ಯಮಗಳಲ್ಲಿ ವರದಿಯಾಗಿದ್ದು ಟಾಲಿವುಡ್ ನ(Tollywood) ಹಾಟ್ ಟಾಪಿಕ್ ಆಗಿದೆ.
ಹೌದು ನಟಿ ಸಮಂತಾ ಹೊಸ ಸಿನಿಮಾ ಯಶೋದಾ(Yashoda) ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದು ಚಿಕಿತ್ಸೆ ನಡೆಯುತ್ತಿರುವಾಗಲೇ ಸಮಂತಾ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಚಿಕಿತ್ಸೆ ಪಡೆಯುತ್ತಿರುವಾಗ ಡಬ್ಬಿಂಗ್ ಮಾಡುವಾಗ ಫೋಟೋವನ್ನು ಹಂಚಿಕೊಂಡಿದ್ದು ಸಮಂತಾ ಹಾಗೂ ನಾಗ ಚೈತನ್ಯ ಅವರು ಪ್ರಾಜೆಕ್ಟ್ಗೆ ಸಹಿ ಹಾಕಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ.
ಇನ್ನು ಹೊಸ ಪ್ರಾಜೆಕ್ಟ್ ವಿವರ ಇನ್ನೂ ಬಹಿರಂಗವಾಗಿಲ್ಲ. ಇನ್ನು ಅಭಿಮಾನಿಗಳು ಜೋಡಿಯನ್ನು ಒಟ್ಟಿಗೆ ನೋಡಲು ಉತ್ಸುಕರಾಗಿದ್ದು ಸಮಂತಾ ಹಾಗೂ ನಾಗ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ಇಬ್ಬರೂ ತಮ್ಮ ವೈಯಕ್ತಿಕ ಜಗಳ ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಇನ್ನು ನಾಗ ಚೈತನ್ಯ ಈಗಲೂ ಸಮಂತಾ ಅವರನ್ನು ಒಳ್ಳೆಯ ಸ್ನೇಹಿತೆ ಎಂದು ಪರಿಗಣಿಸಿದ್ದು ನಾಗ ಚೈತನ್ಯ ಮತ್ತು ಅವರ ತಂದೆ ನಟ ನಾಗಾರ್ಜುನ ಅವರು ಸಮಂತಾ ಅವರ ಅನಾರೋಗ್ಯದ ಬಗ್ಗೆ ವಿಚಾರಿಸಿದ್ದಾರಂತೆ.ಇನ್ನು ಯಶೋದ ಸಿನಿಮಾ ಪ್ರಚಾರಕ್ಕಾಗಿ ನೀಡಿದ ತಮಿಳು ತೆಲುಗು ಸಂದರ್ಶನಗಳಲ್ಲಿ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದು ಪ್ರಪಂಚದಲ್ಲಿ ಮಯೋಸೈಟಿಸ್ ರೋಗವನ್ನು ಸಾಕಷ್ಟು ಜನ ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದು ಸಮಂತಾ ಹೇಳಿದ್ದಾರೆ.
ತಾನು ಸಹ ಇದನ್ನು ಎದುರಿಸಿದ್ದೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ಆಕೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ಶೀಘ್ರದಲ್ಲೇ ನಾನು ಇದರಿಂದ ಹೊರ ಬರುತ್ತೇನೆ. ನಾನು ಶೀಘ್ರದಲ್ಲೇ ಅಗಲುವುದಿಲ್ಲ ಎಂದು ಸಮಂತಾ ಅಲವತ್ತುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿದಂತೆ ಕೆಲವು ಒಳ್ಳೆ ದಿನಗಳು ಕೆಲವು ಕೆಟ್ಟ ದಿನಗಳು ಎಲ್ಲರ ಜೀವನದಲ್ಲೂ ಬರುತ್ತದೆ ಎಂದು ಸಮಂತಾ ವಿವರಿಸಿದ್ದಾರೆ.
ಸದ್ಯ ಇದೇ ಶುಕ್ರವಾರ ಸಮಂತಾ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಯಶೋದ ಸಿನಿಮಾ ತೆರೆಗೆ ಬರುತ್ತಿದ್ದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸದ್ದು ಮಾಡಲಿದೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಮಂತಾ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಶಾಕುಂತಲಂ ಎನ್ನುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲೂ ಆಕೆ ನಟಿಸಿದ್ದು ಅದು ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ವಿಜಯ್ ದೇವರಕೊಂಡ ಜೊತೆ ಖುಷಿ ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅನಾರೋಗ್ಯದ ಕಾರಣ ಆ ಸಿನಿಮಾ ಶೂಟಿಂಗ್ ಮುಂದೂಡಲಾಗಿದೆ.