ಸಮಂತಾ

ನೀನು ಸೆಕೆಂಡ್ ಹ್ಯಾಂಡ್ ಐಟಂ ಎಂದ ಯುವಕನಿಗೆ,ನಟಿ ಸಮಂತಾ ಕೊಟ್ಟ ಉತ್ತರ ಕೇಳಿ ಬೆಚ್ಚಿಬಿದ್ದ ಸ್ಟಾರ್ ನಟಿಯರು! ನೋಡಿ ಖಡಕ್ ಉತ್ತರ

CINEMA/ಸಿನಿಮಾ

4 ವರ್ಷಗಳ ಕಾಲ ಸಮಂತಾ ಅಕ್ಕಿನೇನಿ ಆಗಿದ್ದ ನಟಿ ಸಮಂತಾ, ಈಗ ಮೊದಲಿನಂತೆ ಸಮಂತಾ ಆಗಿ ಬದಲಾಗಿದ್ದಾರೆ. 7 ವರ್ಷಗಳ ಪ್ರೀತಿ, 4 ವರ್ಷಗಳ ದಾಂಪತ್ಯ ಜೀವನಕ್ಕೆ ಇತ್ತೀಚೆಗೆ ಅಂತ್ಯ ಹಾಡಿದ್ದ ಸಮಂತಾಗೆ ಈಗ ಮೊದಲಿಗಿಂತ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಆಫರ್ ಬರುತ್ತಿದೆ. ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದರೂ ಎಲ್ಲವನ್ನೂ ಸಹಿಸಿಕೊಂಡು, ನೋವು ಮರೆತು ವೃತ್ತಿ ಜೀವನದ ಕಡೆಗೆ ಗಮನ ನೀಡುತ್ತಿದ್ದಾರೆ. ಹಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ವಿ’ಚ್ಛೇ’ದನ ಆದರೆ ನಾನು ಬದುಕುವುದೇ ಇಲ್ಲವೇನೋ ಎಂದುಕೊಂಡಿದ್ದೆ ಆದರೆ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯುತ್ತಿದ್ದೇನೆ. ನಾನು ಇಷ್ಟು ಸ್ಟ್ರಾಂಗ್ ಎಂದು ನನಗೇ ತಿಳಿದಿರಲಿಲ್ಲ. ಇದರಿಂದ ನನಗೆ ನನ್ನ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ ಎಂದು ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​​ ಕೂಡಾ ಹಂಚಿಕೊಂಡಿದ್ದರು. ಆದರೆ ಇದುವರೆಗೂ ಸಮಂತಾ ಆಗಲೀ, ನಾಗಚೈತನ್ಯ ಆಗಲೀ ತಾವಿಬ್ಬರೂ ಬೇರೆ ಆಗಲು ಕಾರಣ ಏನು ಎಂಬುದನ್ನು ತಿಳಿಸಿಲ್ಲ.

Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

ನಾಗಚೈತನ್ಯ ಜೊತೆ ಬೇರಾದ ನಂತರ ಸಮಂತಾ ಪರಿಹಾರವನ್ನು ಕೂಡಾ ನಿರಾಕರಿಸಿದ್ದರು. ಆದರೆ ಇತ್ತೀಚೆಗೆ ಟ್ವಿಟ್ಟರ್​​​​​​ನಲ್ಲಿ ವ್ಯಕ್ತಿಯೊಬ್ಬರು ಸಮಂತಾ ಅವರನ್ನು ನಿಂದಿಸಿದ್ದಾರೆ. ಆದರೆ ಸಮಂತಾ ಮಾತ್ರ ಇದಕ್ಕೆ ಕೋಪಗೊಳ್ಳದೆ ಶಾಂತವಾಗೇ ಪ್ರತಿಕ್ರಿಯಿಸಿದ್ದಾರೆ. ಕಮರಾಲಿ ದುಕಂದರ್​​​ ಎಂಬ ವ್ಯಕ್ತಿಯೊಬ್ಬರು ಸಮಂತಾ ಅವರನ್ನು ಉದ್ದೇಶಿಸಿ, ”ಜಂಟಲ್​​​ ಮ್ಯಾನ್​​​​​​ನಿಂದ 50 ಕೋಟಿ ತೆರಿಗೆ ಮುಕ್ತ ಹಣ ದೋಚಿರುವ ಸಮಂತಾ ವಿ’ಚ್ಛೇ’ದಿ’ತ ಹಾಳಾದ ಸೆಕೆಂಡ್ ಹ್ಯಾಂಡ್​​​​ ವಸ್ತು” ಎಂದು ಸಮಂತಾರನ್ನು ನಿಂ’ದಿ’ಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ, ”ಕಮರಾಲಿ ದುಕಂದರ್​​​​​​​​​ ದೇವರು ನಿನಗೆ ಒಳ್ಳೆಯದು ಮಾಡಲಿ” ಎಂದು ಕಮೆಂಟ್ ಮಾಡಿ ಸುಮ್ಮನಾಗಿದ್ದಾರೆ. ಇದನ್ನು ನೋಡಿ ಸಮಂತಾ ಅಭಿಮಾನಿಗಳು ಆ ವ್ಯಕ್ತಿಗೆ ಚಳಿ ಬಿಡಿಸಿದ್ದಾರೆ. ನಿಮ್ಮ ತಾಳ್ಮೆಯನ್ನು ಮೆಚ್ಚಲೇಬೇಕು ಎಂದು ಸಮಂತಾ ರಿಪ್ಲೇಗೆ ಕಮೆಂಟ್ ಮಾಡಿದ್ದಾರೆ.

‘ಏ ಮಾಯಮ್ ಚೇಸಾವೆ’ ಚಿತ್ರದ ಮೂಲಕ ಸಮಂತಾ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ಇದಾದ ನಂತರ ಅನೇಕ ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿದರೂ ಮೊದಲ ಸಿನಿಮಾದಲ್ಲಿ ತಮ್ಮೊಂದಿಗೆ ನಾಯಕನಾಗಿ ನಟಿಸಿದ್ದ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದ ಸಮಂತಾ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೊದಲು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಮತ್ತೊಮ್ಮೆ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾದರು.

ಸಮಂತಾ ಹಾಟ್​ನೆಸ್​ಗೆ ಮಿತಿಯೇ ಇಲ್ಲ; ಟೆಂಪ್ರೇಚರ್ ಹೆಚ್ಚಿಸಿದ ಹೊಸ ಫೋಟೋ | Actress Samantha Show her Hotness in new bold look | TV9 Kannada

ಮದುವೆಯಾದ ನಂತರ ಕೂಡಾ ಅನೇಕ ಹಿಟ್ ಸಿನಿಮಾಗಳನ್ನು ಸಮಂತಾ ನೀಡಿದರು. ಸಮಂತಾ ಹಾಗೂ ನಾಗಚೈತನ್ಯ ಜೋಡಿ ನೋಡಿದವರು, ಜೋಡಿ ಎಂದರೆ ಹೀಗಿರಬೇಕಪ್ಪಾ ಎಂದುಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಇವರು ದೂರಾಗಿರುವುದು ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲಾಗದ ವಿಚಾರವಾಗಿದೆ.ಸಮಂತಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ಅವರು ‘ಪುಷ್ಪ’ ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಊ ಅಂಟಾವಾ ಮಾವ…ಹಾಡು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಹಿಟ್ ಆಗಿದೆ. ತೆಲುಗಿನ ‘ಶಾಕುಂತಲಂ’ ಸಿನಿಮಾ ಚಿತ್ರೀಕರಣ ಮುಗಿದಿದೆ. ತೆಲುಗಿನ ‘ಯಶೋಧ’ ಹಾಗೂ ತಮಿಳು ಸಿನಿಮಾ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹಾಲಿವುಡ್​​​​​ನ ‘ದಿ ಅರೇಂಜ್​​ಮೆಂಟ್ಸ್ ಆಫ್ ಲವ್’ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

ಇದನ್ನೂ ಓದಿ >>>  ಹರ್ಯಾಣಿ ಡ್ಯಾನ್ಸರ್ ಆರತಿಯ ಮಸ್ತ್ ಡ್ಯಾನ್ಸ್ ಗೆ ಫಿದಾ ಆದ ನೆಟ್ಟಿಗರು! 32 ಲಕ್ಷ ವಿವ್ಸ್ ಕಂಡ ವಿಡಿಯೊ!
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...