ವಿದ್ಯೆ ಜ್ಞಾನ ಸಂಕಷ್ಟಹರ ನಿವಾರಕ ಗಣೇಶನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಪರಿಹಾರವಾಗುತ್ತದೆ, ಜ್ಞಾನ ವಿದ್ಯೆಯಿಂದ ಆಶೀರ್ವದಿಸಲ್ಪಡುತ್ತೇವೆ ಎಂದು ನಂಬಲಾಗಿದೆ. ಮೋದಕ ಪ್ರಿಯ ಗಣೇಶನ ಹಬ್ಬಕ್ಜೆ ಕ್ಷಣಗಣನೆ ಪ್ರಾರಂಭವಾಗಿದ್ದು ಈ ತಿಂಗಳ ಅಂತ್ಯದಲ್ಲಿ ಆಚರಿಸಲಾಗುತ್ತಿದೆ. ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಇಷ್ಟವಾದ ಬಗೆ ಬಗೆಯ ತಿಂಡಿ ಫಲಪುಷ್ಪಗಳನ್ನು ಅರ್ಪಿಸಿ ಪೂಜಿಸುತ್ತೇವೆ. ಇನ್ನು ಗಣಪತಿ ಹಬ್ಬ ಬಂತೆಂದರೆ ಸಿನಿಮಾ ತಾರೆಯರ ಮನೆಯಲ್ಲಿ ಸಂತಸ ಮುಗಿಲು ಮುಟ್ಟಿರುತ್ತದೆ. ಅದರಲ್ಲೂ ಬಾಲಿವುಡ್ ಮಂದಿಯನ್ನ ಕೇಳಬೇಕೆ. ಇದು ಅವರ ಪ್ರಮುಖ ಹಬ್ಬವಾಗಿದೆ.

ಇನ್ನು 2009ರಲ್ಲಿ ಗಣೇಶ ಹಬ್ಬದ ಸಡಗರದಲ್ಲಿ ಭಾಗಿಯಾಗಿ ಗಣೇಶನಿಗೆ ಕೈ ಮುಗಿಯುತ್ತಿರುವ ಸಲ್ಲು ಬಾಯ್ ಫೋಟೋ ಭಾರಿ ವೈರಲ್ ಆಗಿದ್ದು ಸಲ್ಲು ತನ್ನ ತಾಯಿ ಸಲ್ಮಾ ಖಾನ್ ಹಾಗೂ ಮಲತಾಯಿ ಹೆಲನ್ ಜತೆ ಪೂಜೆಯಲ್ಲಿ ಬಾಗಿಯಾಗಿದ್ದರು.2013ರಲ್ಲಿ ಸಲ್ಲು ತನ್ನ ಮನೆಯಲ್ಲೇ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದ್ದರು. ತಂಗಿ ಅರ್ಪಿತಾ ಖಾನ್ ಹಾಗೂ ಮಲತಾಯಿ ಹೆಲನ್ ಜತೆ ಪೂಜೆ ಸಲ್ಲಿಸಿದ್ದರು ಸಲ್ಮಾನ್ ಖಾನ್.
ಇನ್ನು 2016ರಲ್ಲಿ ಗಣೇಶ ಹಬ್ಬಕ್ಕೆ ಗಣೇಶನಿಗೆ ಆರತಿ ಬೆಳಗಿದ ಸಲ್ಮಾನ್ ಫೋಟೋ ವೈರಲ್ ಆಗಿದ್ದರೆ
2015ರ ಗಣೇಶ ವಿಸರ್ಜನೆಯಲ್ಲಿ ಬಾಗಿಯಾಗಿ ಕುಣಿದು ಕುಪ್ಪಳಿಸಿದ ವಿಡಿಯೋ ಮಾಧ್ಯಮದಲ್ಲಿ ಸದ್ದು ಮಾಡಿತ್ತು. 2017ರ ಗಣೇಶ ಹಬ್ಬವನ್ನು ಉದ್ಯಮಿ ಅಂಬಾನಿ ಮನೆಯಲ್ಲಿ ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು. ಇದರಲ್ಲಿ ಬಾಲಿವುಡ್ ಸಲೆಬ್ರಿಟಿಗಳು ಭಾಗವಹಿಸಿದ್ದರು. ಈ ವೇಳೆ ತನ್ನ ನೆಚ್ಚಿನ ಗಣಪನಿಗೆ ಪೂಜೆ ಸಲ್ಲಿಸಲು ಬಂದಿದ್ದರು ಭಜರಂಗಿ ಬಾಯ್‌ಜಾನ್. ಇನ್ನು 2019 ರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಣೇಶ ವಿಸರ್ಜನೆ ವೇಳೆಯಲ್ಲಿ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದ್ದರು. ಸಲ್ಮಾನ್ ಖಾನ್ ಅವರ ಭರ್ಜರಿ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ಪ್ರತಿವರ್ಷದಂತೆ ಸಹೋದರಿ ಅರ್ಪಿತಾ ಖಾನ್ ಭಾವ ಆಯುಷ್ ಶರ್ಮಾ ಅವರು ಗಣೇಶ ಹಬ್ಬದ ಮೂರನೇ ದಿನ ಹಮ್ಮಿಕೊಂಡಿದ್ದ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಖಾನ್ ಸೋದರಳಿಯ ಅಹಿಲ್ ಶರ್ಮಾ ಜೊತೆಗೆ ಗಣಪತಿ ಮೂರ್ತಿಗೆ ಆರತಿ ಬೆಳಗಿ ವಿಸರ್ಜನೆ ವೇಳೆ ಕುಣಿದು ಕುಪ್ಪಳಿಸಿದ್ದರು.ಸಂಗೀತದ ಹಿಮ್ಮೇಳನಕ್ಕೆ ತಕ್ಕಂತೆ ಕೆಸರಿನಲ್ಲಿಯೂ ಬಿಂದಾಸ್ ಸ್ಟೆಪ್ ಹಾಕಿದ್ದರು. ಸಲ್ಮಾನ್ ಖಾನ್ ಜೊತೆಗೆ ನಟಿ ಸ್ವರಾ ಭಾಸ್ಕರ್ ಹಾಗೂ ಡೈಸಿ ಷಾ ಅರ್ಪಿತಾ ಖಾನ್ ಸಖತ್ ಸ್ಟೆಪ್ ಹಾಕಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.