ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೇನೇ ಹೆಚ್ಚು ಜನರು ಕೆಲ ಆನ್ಲೈನ್ ಗೇಮ್ ಗಳಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಕೇವಲ ಟೈಮ್ ಪಾಸ್ ಗಾಗಿ ಆಡುತ್ತಾರೆ. ಕೆಲವರು ಅಪ್ಪ ಅಮ್ಮನ ಕಡೆಯಿಂದ ದುಡ್ಡು ತೆಗೆದುಕೊಂಡು ಅವರಿಗೆ ಏನೊ ಒಂದು ಕಾರಣ ಹೇಳಿ ಜೂಜು ಆಡುತ್ತಾರೆ. ರಮ್ಮಿ, ಡ್ರಿಮ್ ಎಲೆವೆನ್ ಸಹ ಆಡುತ್ತಾ ಜನರು ಇದಕ್ಕೆ ಹೆಚ್ಚು ಅಟ್ಯಾಚ್ ಆಗಿದ್ದಾರೆ ಎಂದು ಹೇಳಬಹುದು. ಈ ಮೂಲಕ ಹೆಚ್ಚು ಸಾಲ ಮಾಡಿ ಮಾಡಿ ಸಾಯುತ್ತ ಕಷ್ಟಕ್ಕೆ ಸಿಲುಕಿ ಅದರಿಂದ ಹೊರ ಬರಲು ಒದ್ಯಾಟ ನಡೆಸಿದ್ದಾರೆ ಎನ್ನಬಹುದು. ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಕೆಲವರು ಇದರ ವಿರುದ್ಧ ಮಾತನಾಡುತ್ತಿರುವುದು ಖುಷಿಯ ವಿಚಾರ.
ಇನ್ನು ಕೆಲವರು ಈ ಆಟಗಳನ್ನು ಇಂತಹ ವ್ಯಸನಕಾರಿ ಆಟಗಳನ್ನು ಇಂದೇ ಬಿಟ್ಟುಬಿಡಿ ಎಂದು ಹೇಳುತ್ತಿದ್ದಾರೆ. ರಮ್ಮಿ ಆಡಿ ಈಗ ಒಬ್ಬ ಯುವಕ ಸಾವನ್ನಪ್ಪಿರುವ ವಿಚಾರ ತಿಳಿದು ಬಂದಿದೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಬೆನಕನಹಳ್ಳಿ ಎನ್ನುವ ಊರಿನ ಮಹೇಶ ಎಂಬ ಹುಡುಗ ಸುಮಾರು ವರ್ಷಗಳಿಂದ ರಮ್ಮಿ ಆಡುತ್ತಿದನಂತೆ. ಹಾಗೆ ಡ್ರೀಮ್ಡ್ ಇಲೆವೆನ್ ಸಹ ಆಡುತ್ತ ಆಡುತ್ತ ಸುಮಾರು ಏಳು ಲಕ್ಷ ಸಾಲ ಮಾಡಿಕೊಂಡಿದ್ದನಂತೆ. ಈ ಮಹೇಶ್ ಅವರ ತಂದೆ ತಾಯಿ ತುಂಬಾ ಚೆನ್ನಾಗಿ ಈತನ್ನ ಬೆಳೆಸಿದ್ದರೂ ಕೂಡ
ಈ ರೀತಿ ಕೆಟ್ಟ ದಾರಿ ಹಿಡಿದು ಇಂದು ಇಲ್ಲವಾಗಿದ್ದಾನೆ. ಈ ಆನ್ಲೈನ್ ಗೇಮ್ ವ್ಯಸನಕ್ಕೆ ಒಳಗಾಗಿ ಹೆಚ್ಚು ದಿನಗಳಿಂದ ಸಾಲ ಮಾಡಿದ್ದು ಆ ಸಾಲಗಾರರಿಂದ ದಿನೇ ತಪ್ಪಿಸಿಕೊಂಡು ಓಡಾಟ ನಡೆಸಿದ್ದನು ಎನ್ನಲಾಗಿದೆಎಲ್ಲವನ್ನು ಕಳೆದುಕೊಂಡು ಸಾಲ ಮಾಡಿರುವ ವಿಚಾರ ನಮ್ಮ ಮನೆಯಲ್ಲಿ ತಿಳಿಯುತ್ತದೆ ಎಂದು ಇದೀಗ ಹೆದರಿ ಇದ್ದಕ್ಕಿದ್ದಂತೆ ಸು *ಸೈ *ಡ್ ಮಾಡಿಕೊಂಡಿದ್ದಾನೆ ಎಂದು ಈ ಯುವಕರಿಬ್ಬರು ಅಳಲನ್ನು ತೋಡಿಕೊಂಡಿದ್ದಾರೆ. ಆನ್ಲೈನ್ ಗೇಮ್ ಗಳ ಆಡಬೇಡಿ, ಇದರಿಂದ ಖಂಡಿತವಾಗಿ ನೆಮ್ಮದಿ ಇರುವುದಿಲ್ಲ. ರಮ್ಮಿ ಹಾಗೂ ಇನ್ನಿತರ ಕೆಲವು ಜೂಜಾಟದ ಅಪ್ಲಿಕೇಶನ್ಗಳ ಬಗ್ಗೆ ಜಾಹೀರಾತು ನೀಡಬೇಡಿ, ಜಾಹೀರಾತು ನೀಡುವ ದೊಡ್ಡ ದೊಡ್ಡ ಸ್ಟಾರ್ಗಳಿಗೂ ಈ ಯುವಕರು ಬಾಯಿಗೆ ಬಂದ ಹಾಗೆ ಬೈದಿದ್ದಾರೆ.. ಇಲ್ಲಿದೆ ನೋಡಿ ಆ ವಿಡಿಯೋ. ನೀವು ಕೂಡ ಈ ನಿಮ್ಮ ಅನಿಸಿಕೆ ತಿಳಿಸಿ, ಮತ್ತು ವಿಡಿಯೋ ಬಗ್ಗೆ ಅಭಿಪ್ರಾಯ ಹೇಳಿ ಧನ್ಯವಾದಗಳು.