ಅಕ್ಕ ತಮ್ಮ

ಸ್ವಂತ ಅಕ್ಕ ತಮ್ಮ ಮನೆಯ ರೂಮಿನಲ್ಲಿ ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದ ಅಪ್ಪ ಅಮ್ಮ..ಏನ್ ಗುರು ಇದು..ಮಕ್ಕಳು ಯಾವ್ ದಾರಿ ತುಳಿತಿದಾರೆ..

Today News / ಕನ್ನಡ ಸುದ್ದಿಗಳು

ನಿಜಕ್ಕೂ ನಮ್ಮ ಕಾಲ ಅಂದರೆ ತೊಂಭತ್ತರ ದಶಕದ ಮಕ್ಕಳ ಬಾಲ್ಯದ ಸಮಯದಲ್ಲಿ ಹಾಗೂ ಅದಕ್ಕಿಂತ ಮೊದಲೂ ಸಹ ಅಕ್ಕ ತಮ್ಮ ಅಣ್ಣ ತಂಗಿ ಅಂದರೆ ಅದೇ ಒಂದು ರೀತಿ ಬಾಂಧವ್ಯ ಇತ್ತು.. ಈಗ ಬರುಬರುತ್ತಾ ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಸಂಬಂಧಗಳ ನಡುವಿನ ಬಾಂಧವ್ಯ ಹಾಗೂ ಪ್ರೀತಿಯೂ ಬತ್ತಿ ಹೋಗುತ್ತಿದಿಯೇನೋ ಎನಿಸುತ್ತಿದೆ.. ಮಕ್ಕಳ ಮನಸ್ಸು ಬಹಳ ಸೂಕ್ಷ್ಮವೂ ಆಗುತ್ತಿದೆ.. ಹೌದು ಅಕ್ಕ ತಮ್ಮ ರೂಮಿನಲ್ಲಿ ಮಾಡಿಕೊಂಡಿರೋ ಕೆಲಸ ನೋಡಿ ಇದೀಗ ಅವರಿಬ್ಬರ ಹೆತ್ತವರು ಅಕ್ಷರಶಃ ಕುಸಿದು ಬಿದ್ದಿದ್ದಾರೆ.. ಹೌದು ಕೇವಲ ಹದಿನೈದು ವರ್ಷಗಳ ಹಿಂದೆ ನಾವುಗಳು ಸಣ್ಣವರಿದ್ದಾಗ ಅಪ್ಪ ಅಮ್ಮ ನಾವುಗಳು ಮಾಡೋ ಸಣ್ಣ ಸಣ್ಣ ತಪ್ಪಿಗೆ ಯಾವ ಯಾವ ರೀತಿ ಹೊಗಳುತ್ತಿದ್ದರು

ಹಾಗೂ ಯಾವ ಯಾವ ವಸ್ತುಗಳಿಂದ ನಮ್ಮ ಪೂಜೆ ಮಾಡುತ್ತಿದ್ದರು ಎಂಬುದನ್ನು ನೆನೆದರೂ ಸಾಕು ಈಗಲೂ ಆದೃಶ್ಯಗಳು ಕಣ್ಣ ಮುಂದೆ ಬಂದು ಆ ಸಣ್ಣ ತಪ್ಪುಗಳನ್ನೂ ಸಹ ಜನ್ಮದಲ್ಲಿ ಮಾಡೋದಿಲ್ಲ.. ಅವರ ಪೆಟ್ಟುಗಳು ನಮಗೆ ಪಾಠಗಳಾಗಿದ್ದವು.. ಅಮ್ಮನ ಬುದ್ಧಿ ಮಾತು ನಮ್ಮ ಜೀವನದ ದಾರಿಯಾಗಿತ್ತು.. ಇನ್ನು ಅಣ್ಣ ತಂಗಿ ಅಕ್ಕ ತಮ್ಮನ ವಿಚಾರಕ್ಕೆ ಬಂದರೆ ಈಗಿನ ಮಕ್ಕಳ ರೀತಿ ಇದ್ದವರಲ್ಲ.. ಮನೆಯೊಳಗೆ ಹಂದಿ ನಾಯಿಗಳಿಗಿಂತ ಕಡೆಯಾಗಿ ಕಿತ್ತಾಡಿಕೊಂಡರೂ ಮನೆ ಬಾಗಿಲಿಂದ ಹೊರ ಬರುತ್ತಿದ್ದಂತೆ ಆ ಅಕ್ಕನಿಗೆ ತಮ್ಮ ರಕ್ಷಣೆಯಾಗಿ ನಿಲ್ಲುತ್ತಿದ್ದ.. ಆ ತಂಗಿಗೆ ಅಣ್ಣ ಕಾವಲುಗಾರನಾಗುತ್ತಿದ್ದ.. ತಮ್ಮನಿಗೆ ಆ ಅಕ್ಕ ತಾಯಿಯಿಲ್ಲದ ಸಮಯದಲ್ಲಿ ತಾನೇ ತಾಯಿಯಾಗುತ್ತಿದ್ದಳು..

ತನ್ನ ಅಣ್ಣನ ಸುದ್ದಿಗೆ ಬಂದರೆ ಚಿಕ್ಕವಳಾದರೂ ಸಹ ಯಾವೊಬ್ಬ ತಂಗಿಯೂ ಬಿಡುತ್ತಿರಲಿಲ್ಲ.. ಬಹುಶಃ ಮಕ್ಕಳ ನಡುವೆ ಈ ರೀತಿಯ ಭಾವನೆಗಳು ಮಕ್ಕಳಿಗೆ ಈ ರೀತಿಯ ಬಾಲ್ಯವೇ ಇದ್ದಿದ್ದರೆ ಒಳ್ಳೆಯದಿತ್ತು ಎನಿಸುತ್ತದೆ.. ಆದರೆ ಈಗ ಸಮಯ ಬದಲಾಗಿದೆ.. ಸಣ್ಣ ವಯಸ್ಸಿನ ಮಕ್ಕಳ ಕೈಲಿ ಮೊಬೈಲ್ ಗಳು ನೋಡಬಾರದ್ದು ನೋಡುವುದು ಎಲ್ಲವನ್ನೂ ನೋಡಿ ಮನಸ್ಸುಗಳು ಹದಗೆಟ್ಟಿದೆ.. ಮನೆಯವರು ಸಣ್ಣ ಬುದ್ಧಿ ಮಾತನ್ನು ಹೇಳಿದರೂ ಸಹ ಅದು ದೊಡ್ಡ ವಿಚಾರವಾಗುತ್ತದೆ.. ಇನ್ನು ಮಕ್ಕಳು ಸರಿ ದಾರಿಗೆ ಬರಲೆಂದು ಸಣ್ಣ ಪೆಟ್ಟು ಕೊಟ್ಟರೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ.. ಇನ್ನು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವಂತೂ ಹೇಳಲಾಗದು..

ತಮ್ಮ ತಮ್ಮಗಳ ಪ್ರಪಂಚದಲ್ಲಿ ತೇಲುವವರೇ ಬಹಳಷ್ಟು ಮಂದಿ.. ಅಕ್ಕ ಅಣ್ಣಂದಿರ ಮೇಲೆ ಪ್ರೀತಿ ಇದ್ದರೂ ಸಹ ಅವುಗಳು ಹುಟ್ಟುಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ಸಾಮಾಜಿಕ‌ ಜಾಲತಾಣದಲ್ಲಿ ಫೋಟೋ ಹಾಕುವುದಕ್ಕಷ್ಟೇ ಸೀಮಿತವಾಗಿ ಬಿಟ್ಟಿದೆ.. ಸಂಬಂಧಗಳ ನಡುವಿನ ನಿಜವಾದ ಅರ್ಥವನ್ನು ತಿಳಿದುಕೊಳ್ಳಲು ಮಕ್ಕಳು ಸೋಲುತ್ತಿರಬಹುದು.. ಅಥವಾ ಅದನ್ನು ಅರ್ಥ ಮಾಡಿಸಲು ಪೋಷಕರೂ ಸಹ ಸೋಲುತ್ತಿರಬಹುದು.. ಅದೇ ರೀತಿ ಸಂಬಂಧದ ನಡುವಿನ ನಿಜವಾದ ಬಾಂಧವ್ಯದ ಅರ್ಥ ಗೊತ್ತಿಲ್ಲದ ಈ ಹುಡುಗ ಮಾಡಿದ ಕೆಲಸಕ್ಕೆ ಇದೀಗ ಆ ಮನೆಯೇ ಕಣ್ಣೀರಿಡುವಂತಾಗಿದೆ..

ಹೌದು ಈ ಹುಡುಗನ ಹೆಸರು ನಾಗರಾಜ ಚಲವಾದಿ ವಯಸ್ಸು ಕೇವಲ ಹದಿನಾರು.. ಹಾವೇರಿ ಜಿಲ್ಲೆಯ ಬ್ಯಾಡಗಿಯ ವಿನಾಯಕ ನಗರದ ನಿವಾಸಿಗಳು.‌. ಈತನ ಅಕ್ಕನ ಹೆಸರು ಭಾಗ್ಯಶ್ರೀ ವಯಸ್ಸು ಇನ್ನು ಕೇವಲ ಹದಿನೆಂಟು.. ಈಕೆ ಅಂದರೆ ನಾಗರಾಜನ ಅಕ್ಕ ಭಾಗ್ಯಶ್ರೀ ತಮ್ಮ ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ ಎಂಬ ವಿಚಾರ ಗೊತ್ತಾಗಿ ನಿನ್ನೆ ತನ್ನ ತಮ್ಮನಿಗೆ ಚೆನ್ನಾಗಿ ಓದು ಶಾಲೆಗೆ ಸರಿಯಾಗಿ ಹೋಗು.. ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾಗಬೇಕು ಆಗ ನಮಗೆಲ್ಲಾ ಸಂತೋಷ ಆಗುತ್ತೆ ಎಂದು ಬುದ್ಧಿ ಮಾತನ್ನು ಹೇಳಿದ್ದಾಳೆ.. ಇಷ್ಟೇ ಅಲ್ಲಿ ಮತ್ತಿನ್ನೇನು ನಡೆದಿಲ್ಲಾ.. ಅಷ್ಟಕ್ಕೆ ಆ ಹುಡುಗ ಮಾಡಿರುವ ಕೆಲಸ ಮಾತ್ರ ಬೆಚ್ಚಿ ಬೀಳಿಸಿದೆ.. ಹೌದು ಅಕ್ಕನ ಮಾತನ್ನು ಕೇಳಿ ನಾಗರಾಜ ಬೆಳಿಗ್ಗೆ ಹತ್ತು ಗಂಟೆ ಸಮಯದಲ್ಲಿ ತನ್ನ ರೂಮಿನಲ್ಲಿಯೇ ಜೀವ ಕಳೆದುಕೊಂಡಿದ್ದಾನೆ..

ಇನ್ನು ಅಕ್ಕ ಹನ್ನೆರೆಡು ಗಂಟೆಗೆ ಮನೆಗೆ ಬರುತ್ತಿದ್ದಂತೆ ತಮ್ಮನ ವಿಚಾರ ತಿಳಿದಿದೆ ತಕ್ಷಣ ಆಕೆಯೂ ತನ್ನ ರೂಮಿಗೆ ತೆರಳಿ ಜೀವ ಕಳೆದುಕೊಂಡಿದ್ದಾಳೆ.. ಒಂದೇ ದಿನ ಇಬ್ಬರು ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ಕಂಡ ಆ ತಂದೆ ತಾಯಿ ಪರಿಸ್ಥಿತಿ ಹೇಗಾಗಿರಬೇಡ.. ಅಲ್ಲಾ ಈಗಿನ ಕಾಲದ ಮಕ್ಕಳ ಮನಸ್ಸು ಯಾವ ದಾರಿಯಲ್ಲಿ ಹೋಗುತ್ತಿದೆ.. ಮಾದ್ಯಮಗಳಲ್ಲಿ ಅಕ್ಕನ ಮಾತಿಗೆ ಮನನೊಂದು ತಮ್ಮ ಜೀವ ಕಳೆದುಕೊಂಡ ಎಂದು ವರದಿಯಾಗಿದೆ.. ಅಲ್ರಯ್ಯಾ ಇಂತಹ ಮಾತುಗಳಿಗೆಲ್ಲಾ ಮನ ನೋಯಿಸಿಕೊಳ್ಳುವುದಾಗಿದ್ದರೆ ನಾವು ತೊಂಭತ್ತರ ದಶಕದ ಮುಕ್ಕಾಲು ಮಕ್ಕಳೇ ಇರುತ್ತಿರಲಿಲ್ಲ.. ಅಪ್ಪ ಅಮ್ಮ ಅಕ್ಕ ಅಣ್ಣ ಇರೋದೆ ಇಂತಹ ಮಾತುಗಳನ್ನು ಹೇಳೋಕೆ.. ಮತ್ಯಾಕೆ ಅವರುಗಳು.. ಅದನ್ನು ಕೇಳಿಸಿಕೊಳ್ಳುತ್ತಿರಬೇಕು.. ಸಾಧ್ಯವಾದರೆ ಜೀವನದಲ್ಲಿ ತಿದ್ದಿಕೊಂಡು ಮುನ್ನಡೆಯಬೇಕು.

ಇಲ್ಲವಾ ನಮ್ಮ ನಮ್ಮ ಹಣೆಬರಹ ಅಂತ ಸುಮ್ಮನೆ ಕೇಳಿ ಈ ಕಿವಿಯಲ್ಲಿ ಬಿಟ್ಟು ಮುಂದೆ ಸಾಗುತಿರಬೇಕು.. ಅದನ್ನು ಬಿಟ್ಟು ಜೀವ ಕಳೆದುಕೊಳ್ಳುವುದು.. ನಾವು ಈ ರೀತಿ ಮಾಡಿಕೊಂಡೆವು ಅಂತ ನಮಗೆ ಬುದ್ಧಿ ಹೇಳಿದವರೂ ಸಹ ಜೀವ ಕಳೆದುಕೊಳ್ಳುವುದು.. ನಿಜಕ್ಕೂ ಇದು ಒಂದು ಸ್ವಲ್ಪವೂ ಅರ್ಥವಿಲ್ಲದ್ದು.. ಅಲ್ರಯ್ಯಾ ಇರೋದು ಒಂದೇ ಜೀವನ ಇದ್ದಷ್ಟು ದಿನ ನಮ್ಮ ಜೀವನವನ್ನ ಸಾರ್ಥಕವಾಗುವಂತೆ ಬದುಕಬೇಕು.. ನಮ್ಮ ಸುತ್ತ ಮುತ್ತಲಿನವರ ಜೊತೆ ದಿನ ಸಾಗುವುದೇ ನಮ್ಮ ಜೀವನ.. ಅದನ್ನು ಬಿಟ್ಟು ಅವರು ಹಾಗ್ ಅಂದ್ರು.. ಇವರು ಹೀಗ್ ಅಂದ್ರು ಅಂತ ಇಂತಹ ಕೆಲಸ ಮಾಡಿಕೊಂಡ್ರೆ ನಿಮ್ಮ ತಲೆಯಲ್ಲಿ ಬಹುಶಃ ಬುದ್ಧಿ ಅಲ್ಲ ಮತ್ತಿನ್ನೇನೋ ತುಂಬಿದೆ ಅಷ್ಟೇ..

ವರ್ಷ‌ಮತ್ತೊಬ್ಬನನ್ನು ಹದಿನಾರು ವರ್ಷ ಕಷ್ಟ ಸುಖ ಎನ್ನದೇ ಹಗಲು ರಾತ್ರಿ ದುಡಿದು ಸಾಕಿ ಅವರುಗಳು ಕೇಳಿ ಕೇಳಿದ್ದನ್ನೆಲ್ಲಾ ಕೊಡಿಸಿ ಮುದ್ದಿಸಿ ಅವರನ್ನೇ ಜೀವ ಎಂದುಕೊಂಡು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದಕ್ಕೆ ಅಪ್ಪ ಅಮ್ಮನಿಗೆ ಸರಿಯಾಗಿಯೇ ಮಾಡಿದ್ರಿ ಬಿಡಿ.. ಅವರುಗಳು ಏನ್ ತಪ್ಪು ಮಾಡಿದ್ರು ಅಂತ ಈ ರೀತಿ ಕೊರಗಬೇಕು.. ಅವರ ಯಾವ ತಪ್ಪಿಗೆ ಜೀವನ ಪೂರ್ತಿ ಮಕ್ಕಳಿಲ್ಲದ ನೋವು..

ಸ್ವಂತ ಅಕ್ಕ ತಮ್ಮ ಮನೆಯ ರೂಮಿನಲ್ಲಿ ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದ ಅಪ್ಪ ಅಮ್ಮ.. ಏನ್  ಗುರು ಇದು.. ಮಕ್ಕಳು ಯಾವ್ ದಾರಿ ತುಳಿತಿದಾರೆ.. – Star News Kannada.in

ನಿಜಕ್ಕೂ ಯಾರೇ ಆಗಲಿ ಈ ರೀತಿ ಸಣ್ಣ ಪುಟ್ಟ ಮಾತಿಗೆ ಅಥವಾ ಯಾವುದಕ್ಕೇ ಆಗಲಿ ಅಪ್ಪ ಅಮ್ಮನ ಬಗ್ಗೆ ಅದರಲ್ಲೂ ಹೆತ್ತ ಆ ತಾಯಿ ಮುಂದೆ ಎಷ್ಟು ಸಂಕಟ ಅನಿಭವಿಸಬಹುದು ಎಂದು ಸ್ವಲ್ಪವೂ ಆಲೋಚಿಸದೇ ಇಂತಹ ಕೆಲಸ ಮಾಡಿಕೊಳ್ಳೋರನ್ನು ಯಾರೂ ಸಹ ಕ್ಷಮಿಸಲಾರರು.. ದಯವಿಟ್ಟು ಯಾರೇ ಆಗಲಿ ಯಾವುದೇ ಹೆಜ್ಜೆ ಇಡುವ ಮುನ್ನ ಹೆತ್ತವಳನ್ನೊಮ್ಮೆ ನೆನೆಯಿರಿ ಸಾಕು.. ನಿಮಗೆ ಸರಿಯಾದ ದಾರಿ ತಾನೇ ತೋರುವುದು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.