ಅನುಶ್ರೀ

ವಿಕ್ರಾಂತ್ ರೋಣ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿ ಆಂಕರ್ ಅನುಶ್ರೀ…

CINEMA/ಸಿನಿಮಾ

ಕೆಜಿಎಫ್ ಆಯ್ತು.. ಈಗ ಎಲ್ಲಿ ನೋಡಿದರೂ ವಿಕ್ರಾಂತ್ ರೋಣ. ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ಕಾಯುತ್ತಿದೆ. ಇನ್ನು ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಈ ಚಿತ್ರ 3ಡಿಯಲ್ಲಿ ತೆರೆಕಾಣುತ್ತಿದೆ ಎಂಬುದು ಮತ್ತೊಂದು ವಿಶೇಷ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ಗಳಿಂದಲೇ ಸಿನಿಮಾ ಸದ್ದು ಮಾಡುತ್ತಿದೆ. ಇನ್ನು ಈ ಚಿತ್ರದ ಮೊದಲ ಲಿರಿಕಲ್ ಹಾಡು ರಿಲೀಸ್ ಆದಾಗಿನಿಂದಲೂ ಇದರದ್ದೇ ಸದ್ದು.

ಸೋಶಿಯಲ್ ಮೀಡಿಯಾದಲ್ಲಿ ಸೆಲಬ್ರಿಟಿಗಳಿಂದ ಹಿಡಿದು ಪ್ರತಿಯೊಬ್ಬರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ರಾ, ರಾ ರಕ್ಕಮ್ಮ ಎಂದು ಕುಣಿದಿದ್ದೇ ಕುಣಿದಿದ್ದು. ಅಭಿಮಾನಿಗಳಂತೂ ಈ ಹಾಡಿನ ಜಪ ಮಾಡುತ್ತಿದ್ದು, ಸಿನಿಮಾ ರಿಲೀಸ್ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ವಿಕ್ರಾಂತ್ ರೋಣ ಲಿರಿಕಲ್ ವಿಡಿಯೋ ಈಗಾಗಲೇ ಎಲ್ಲೆಡೆ ಕಿಚ್ಚು ಹಚ್ಚಿಸಿದೆ. ಈ ಹಾಡು ಲಕ್ಷ ಲಕ್ಷ ವೀಕ್ಷಣೆ ಪಡೆದಿದೆ. ಈಗಾಗಲೇ ಈ ಹಾಡು ಎಲ್ಲಾ ಭಾಷೆಗಳಲ್ಲೂ ಹವಾ ಸೃಷ್ಠಿಸಿದೆ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಿದೆಇನ್ನು
ಈ ಚಿತ್ರದ ಹಾಡಿಗೆ ಆಂಕರ್ ಅನುಶ್ರೀ ಅವರು ಕೂಡ ಹೆಜ್ಜೆ ಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಹಾಡಿಗೆ ಮಸ್ತ್ ಸ್ಟೆಪ್ ಹಾಕಿರುವ ಅನುಶ್ರೀ ಅವರು ಡ್ಯಾನ್ಸಿಂಗ್ ಚಾಂಪಿಯನ್ ಸ್ಫರ್ಧಿಗಳ ಜೊತೆಗೆ ಕುಣಿದಿದ್ದಾರೆ. ಅನುಶ್ರೀ ಅವರು ಮಾಡಿರುವ ಈ ಡ್ಯಾನ್ಸ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇಇನ್ನು ವಿಕ್ರಾಂತ್ ರೋಣ ಚಿತ್ರ ಅರೇಬಿಕಾ, ಜರ್ಮನ್ ಹಾಗೂ ರಷ್ಯನ್ ಭಾಷೆಗಳಲ್ಲೂ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಚಿತ್ರವೂ ಕೂಡ ವಿಶ್ವಾದ್ಯಂತ  ಹವಾ ಕ್ರಿಯೇಟ್ ಮಾಡುವುದರಲ್ಲಿ ಡೌಟ್ ಇಲ್ಲ

 

View this post on Instagram

 

A post shared by Zee Kannada (@zeekannada)




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ತನ್ನನ್ನು ದ್ವೇಷಿಸುವವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ಡ್ರೋನ್ ಪ್ರತಾಪ್..