rohini-dk-ravi-whatsapp-chat

ಎಲ್ಲಿಗೆ ಮುತ್ತು ಕೊಡಬೇಕಂತೆ ಗೊತ್ತಾ,ರೋಹಿಣಿ – ಡಿ.ಕೆ ರವಿ ಪ್ರೇಮ ಸಲ್ಲಾಪ : ಡಿ. ರೂಪಾ ಹೇಳಿದ ಆ ಇನ್ನೊಬ್ಬ ವ್ಯಕ್ತಿ ಯಾರು? ಸತ್ಯ ಬಯಲು.

Entertainment/ಮನರಂಜನೆ

ಐಪಿಎಸ್​ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಬೀದಿ ಜಗಳ ತಾರಕಕ್ಕೇರಿದೆ. ಡಿ. ರೂಪಾ ದಿಟ್ಟ ಐಎಎಸ್​ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ರೋಹಿಣಿ ಸಿಂಧೂರಿ ವಿರುದ್ಧ ಅನೈತಿಕ ಚಟುವಟಿಕೆಯ ಆರೋಪಗಳನ್ನು ಮಾಡಿದ್ದರು. ಇದನ್ನು ರೋಹಿಣಿ ಸಿಂಧೂರಿ ಅಲ್ಲಗೆಳೆದಿದ್ದರೂ ಸಹ ಮೃತ ಐಎಎಸ್​ ಅಧಿಕಾರಿ ಡಿ.ಕೆ ರವಿಗೆ ರೋಹಿಣಿ ಸಿಂಧೂರಿ ಮಾಡಿದ್ದ ಚಾಟ್​ಗಳು ಸಿಬಿಐ ವರದಿಯಲ್ಲಿ ಉಲ್ಲೇಖವಾಗಿದೆ. ಈ ಪ್ರೇಮ ಸಲ್ಲಾಪದ ಚಾಟ್​ಗಳನ್ನು ನೋಡುತ್ತಿದ್ದರೆ ಡಿ.ರೂಪಾ ರೋಹಿಣಿ ಸಿಂಧೂರಿ ಮೇಲೆ ಮಾಡಿರುವ ಆರೋಪಗಳು ಇನ್ನಷ್ಟು ಇಂಬು ಪಡೆದುಕೊಳ್ತಿದೆ.

ಬರೋಬ್ಬರಿ 8 ವರ್ಷದ ಹಿಂದಿನ ಸಿಬಿಐ ವರದಿಯಲ್ಲಿ ಮೃತ ಡಿ.ಕೆ ರವಿ ಹಾಗೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ನಡೆದಿದ್ದ ಪ್ರೇಮ ಸಲ್ಲಾಪದ ಚಾಟ್​ಗಳನ್ನು ಉಲ್ಲೇಖಿಸಲಾಗಿದೆ. ನವೆಂಬರ್​ 28.2014ರ ರಾತ್ರಿ 11:15ಕ್ಕೆ ಡಿ.ಕೆ ರವಿ ರೋಹಿಣಿ ಸಿಂಧೂರಿಗೆ ಕರೆ ಮಾಡಿದ್ದರು. ಮಧ್ಯರಾತ್ರಿ ಇಬ್ಬರೂ 21 ನಿಮಿಷಗಳ ಕಾಲ ಮಾತನಾಡಿದ್ದರು.




ಇದಾದ ಬಳಿಕ 2014ರ ಡಿಸೆಂಬರ್​ ಐದರಂದು ಇಬ್ಬರೂ ನಾಲ್ಕು ಬಾರಿ ಕರೆ ಮಾಡಿಕೊಂಡು ಮಾತನಾಡಿದ್ದರು. ಇವೆಲ್ಲವನ್ನು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇಬ್ಬರೂ ಫೋನ್​ ಕಾಲ್​ನಲ್ಲಿಯೂ ಅತ್ಯಂತ ಸಲುಗೆಯಿಂದ ಮಾತನಾಡಿದ್ದಾರೆ. ಮಾತ್ರವಲ್ಲದೇ ಮೆಸೇಜ್​ನಲ್ಲಿಯೂ ಕೂಡ ಐ ಲವ್​ ಯೂ ಸೇರಿದಂತೆ ಸಾಕಷ್ಟು ಪ್ರೇಮ ಸಲ್ಲಾಪದ ಸಂದೇಶಗಳು ಸಿಬಿಐಗೆ ಲಭ್ಯವಾಗಿದೆ. ಡಿಸೆಂಬರ್​ ಐದನೇ ತಾರೀಖು ಮಧ್ಯರಾತ್ರಿ ವೇಳೆ ಇಬ್ಬರೂ ಫೋನ್​ ಕಾಲ್​ನಲ್ಲಿ ಮಾತನಾಡಿದ್ದರು.

ಡಿ.ಕೆ ರವಿ ಹಾಗೂ ರೋಹಿಣಿ ಸಿಂಧೂರಿ ನಡುವಿನ ಈ ಆತ್ಮೀಯತೆ ಡಿ.ಕೆ ರವಿ ಪತ್ನಿ ಕುಸುಮಾ ಅಸಮಾಧಾನಕ್ಕೆ ಕಾರಣವಾಗಿತ್ತು. ಇಬ್ಬರ ನಡುವಿನ ಸ್ನೇಹದ ವಿಚಾರವಾಗಿ ಕುಸುಮಾ ಸಾಕಷ್ಟು ಬಾರಿ ಡಿ.ಕೆ ರವಿಯೊಂದಿಗೆ ಜಗಳವಾಡಿದ್ದರು. ಇದಾದ ಬಳಿಕ ರೋಹಿಣಿ ಸಿಂಧೂರಿಗೆ ಮೆಸೆಂಜರ್​ನಲ್ಲಿ ಕುಸುಮಾ ಮೆಸೇಜ್​ ಮಾಡಿದ್ದರು. ‘ಯಾವುದಾದರೂ ದೇಹವು ನನ್ನ ಗಂಡನನ್ನು ನನ್ನಿಂದ ದೂರವಿಡಲು ಯತ್ನಿಸಿದರೆ ಅವರನ್ನು ಏನು ಮಾಡಬೇಕು..?‘ ಎಂದು ಮೆಸೆಂಜರ್​ನಲ್ಲಿ ಪ್ರಶ್ನೆ ಮಾಡಿದ್ದರು.




ಈ ಮೆಸೇಜ್​ ನೋಡಿದ ರೋಹಿಣಿ ಸಿಂಧೂರಿ ಇದನ್ನು ಡಿ.ಕೆ ರವಿಗೆ ಫಾರ್ವಡ್​ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಡಿ.ಕೆ ರವಿ ಬಲವಂತವಾಗಿ ಕುಸುಮಾ ಬಳಿಯಲ್ಲಿ ರೋಹಿಣಿ ಸಿಂಧೂರಿ ಎದುರು ಕ್ಷಮೆಯಾಚಿಸುವಂತೆ ಮಾಡಿದ್ದರು. ಇದು ಕುಸುಮಾ ಕೋಪಕ್ಕೂ ಕಾರಣವಾಗಿತ್ತು.

ಇದಾದ ಬಳಿಕವೂ ರೋಹಿಣಿ ಸಿಂಧೂರಿಗೆ ಮೆಸೇಜ್​ ಮಾಡಿದ್ದ ಡಿ.ಕೆ ರವಿ ಆಕೆ ಯಾವುದೋ ಕೆಟ್ಟ ಜನರ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರೆ. ನಿನಗೆ ಬೇಸರವಾಗಿದೆ ಎಂಬುದು ನನಗೂ ತಿಳಿದಿದೆ. ಆದರೆ ಈ ರೀತಿ ಘಟನೆ ಮರುಕಳಿಸದಂತೆ ನಾನು ನೋಡಿಕೊಳ್ತೇನೆ. ನೀನು ನನ್ನೊಂದಿಗೆ ಮಾತನಾಡು. ನನ್ನನ್ನು ದುರ್ಬಲಗೊಳಿಸಬೇಡಿ. ಐ ಲವ್​ ಯೂ… ನೀನು ನನ್ನ ಸ್ನೇಹಿತೆ ಎಂದು ಡಿ.ಕೆ ರವಿ ರೋಹಿಣಿ ಸಿಂಧೂರಿಗೆ ಮಾಡಿರುವ ಮೆಸೇಜ್​ಗಳು ಸಿಬಿಐ ವರದಿಯಲ್ಲಿ ಉಲ್ಲೇಖವಾಗಿದೆ.




ಆಗಿನ್ನೂ ಸಿಐಡಿ ತನಿಖೆ ಜಾರಿಯಲ್ಲಿತ್ತು.ಸಿಐಡಿಯಿಂದ ಕೇಸು ಸಿಬಿಐಗೆ ಹಸ್ತಾಂತರಗೊಂಡು ತನಿಖೆ ಆರಂಭಗೊಳ್ಳುವ ಮುನ್ನ ಪೇದೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಯಿತು. ಕರ್ನಾಟಕ ಸರ್ಕಾರದ ವತಿಯಿಂದಲೇ ಹಬ್ಬಿದ ಸುದ್ದಿ ಇದಾಗಿತ್ತು. ಮಹಿಳಾ ಅಧಿಕಾರಿಗೆ ಡಿಕೆ ರವಿ ಅವರು ಸಾಯುವ ದಿನ 44 ಬಾರಿ ಫೋನ್ ಕರೆ ಮಾಡಿದ್ದರು ಎಂಬ ವಿಷಯ ಹಲವರ ಹುಬ್ಬೇರಿಸಿತ್ತು. ಪ್ರತಿಪಕ್ಷಗಳು ಈ ಬಗ್ಗೆ ಕಿಡಿಕಾರಿದ್ದವು.
ಈಗ ಇದೆಲ್ಲವೂ ಅಪ್ಪಟ ಸುಳ್ಳು ಎಂದು ಸಾಬೀತಾಗಿದೆ. ಸಾಯುವ ದಿನ ವಾಟ್ಸಪ್ ಸಂದೇಶ ಕಳಿಸಿದ್ದು, ಹಾಗೂ ಕರೆ ಮಾಡಿದ್ದು ಒಂದೇ ಬಾರಿ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಕೊನೆಯ ಸಂದೇಶದಲ್ಲಿ ರೋಹಿಣಿ ಅವರ ಬಳಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿರುವ ರವಿ, ‘ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ’ ಎಂಬ ಖಚಿತ ನುಡಿಗಳನ್ನು  ದಾಖಲಿಸಿದ್ದಾರೆ. ಮಾರ್ಚ್‌ 15ರಂದು ಸಂಜೆ  ಕಳಿಸಿದ ಸಂದೇಶದಲ್ಲಿ, ‘ಅಹಿತಕರ ನಿರ್ಧಾರವೊಂದನ್ನು ತೆಗೆದುಕೊಳ್ಳಲು ನಿರ್ಧರಿಸಿರುವ  ದುರದೃಷ್ಟದ  ದಿನವಿದು. ನೀನು ನನ್ನನ್ನು ಮುನ್ನಡೆಸುತ್ತೀಯ ಎಂದು ನಂಬಿದ್ದೇನೆ. ನಿನ್ನ ಕರೆ ಮತ್ತು ಆಹ್ವಾನಕ್ಕಾಗಿ ರಾತ್ರಿ 9 ಗಂಟೆಯವರೆಗೂ ಕಾಯುತ್ತೇನೆ’ ಎಂದು ಹೇಳಿ ಪುನಃ ಸಂಜೆ ಮತ್ತೊಂದು ಸಂದೇಶ ಕಳುಹಿಸಿ, ‘ನನಗೆ ಕರೆ ಮಾಡಬೇಡ ಅಥವಾ ಮಾತನಾಡಿಸಲು ಪ್ರಯತ್ನಿಸಬೇಡ.




ನನ್ನ ಪ್ರೀತಿಯನ್ನು ಯಾರಿಗೂ ಹೇಳಬೇಡ. ಒಂದು ವೇಳೆ ಮರುಜನ್ಮವಿದ್ದರೆ ಸೇರೋಣ. ನಾನು ನಿರ್ಗಮಿಸುತ್ತಿದ್ದೇನೆ’ ಎಂದಿದ್ದಾರೆ. ರವಿ ಅವರ ಸಂದೇಶಗಳಿಗೆ ರಾತ್ರಿ  ಉತ್ತರಿಸಿರುವ ರೋಹಿಣಿ ಸಿಂಧೂರಿ, ‘ಏನಿದು? ಅವಿವೇಕಿಯಂತೆ ವರ್ತಿಸಬೇಡ. ನಾನು ನಿನ್ನ ಜತೆ ಮಾತನಾಡುವುದು ಬೇಡ ಎನ್ನುವುದಾದರೆ ಸ್ಪಷ್ಟವಾಗಿ ಹೇಳಿಬಿಡು. ನಾನು ನಿನಗೆ  ಕರೆ ಮಾಡುವುದಿಲ್ಲ. ಏನಿದು ಹುಚ್ಚಾಟ’ ಎಂದು ಪ್ರಶ್ನಿಸಿದ್ದಾರೆ. ಪ್ರತಿಯೊಂದನ್ನೂ ಹಂಚಿಕೊಂಡಿದ್ದಕ್ಕೆ, ನನಗೇನು ಬೇಕು ನನ್ನ ಭವಿಷ್ಯವೇನು…? ಎಂಬುದನ್ನೆಲ್ಲಾ ಅರಿತು ಕೊಂಡಿದ್ದಕ್ಕೆ ಅನಂತ ನಮನಗಳು.

ನೀನೆಂದೂ ಕೊರಗಬೇಡ. ನನ್ನ ಸಾವಿನ ನಂತರವೂ ನೀನು ಚೆನ್ನಾಗಿರಬೇಕೆಂಬುದೇ ನನ್ನಾಸೆ. ಅದಕ್ಕೆಂದೇ ನಾನು ನನ್ನ ಮೊಬೈಲ್‌ನಲ್ಲಿ ನಿನಗೆ ಸಂಬಂಧಿಸಿದಂತೆ ಇದ್ದ ಎಲ್ಲ ಚಿತ್ರ ಮತ್ತು ಸಂದೇಶಗಳನ್ನು ಅಳಿಸಿ ಹಾಕಿದ್ದೇನೆ.   ನಿನ್ನ ಯಶಸ್ಸಿನಲ್ಲಿ ಪಾಲ್ಗೊಳ್ಳಲು ನನ್ನ ಆತ್ಮ ನಿನ್ನೊಂದಿಗೆ ಇರುತ್ತದೆ. ನನ್ನ ಕೊನೆಯ ಆಸೆ ಎಂದರೆ ನಾನು ನಿನ್ನನ್ನು ನೋಡಬೇಕು, ಚುಂಬಿಸಬೇಕು. ಆದರೆ ಅದರಿಂದ ತೃಪ್ತಿಯಾಗುವುದಿಲ್ಲ. ನನ್ನ ಸಾವಿನ ಸುದ್ದಿ ತಿಳಿದ ಕೂಡಲೇ ಸಾಧ್ಯವಾದರೆ ಬಂದು ನನ್ನನ್ನು ಆಲಂಗಿಸಿಕೊ. ಚುಂಬಿಸು. ಈ ರವಿಗೆ ಚಿರಶಾಂತಿ ಸಿಗಲಿ ಎಂದು ಆ ಶಿವನನ್ನು ಪ್ರಾರ್ಥಿಸು !ಎಂದಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...