ಕೇವಲ ಬೆರಳೆಣಿಕೆಯಷ್ಟು ಸಣ್ಣಪುಟ್ಟ ಸಿನಿಮಾಗಳನ್ನು ಮಾಡುತ್ತ ಕನ್ನಡ ಸಿನಿಮಾ ರಂಗದಲ್ಲಿ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದಂತಹ ನಟ ರಿಷಬ್ ಶೆಟ್ಟಿ ಕಾಂತಾರ ಎಂಬ ಸಿನಿಮಾದಿಂದಾಗಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಹೌದು ಗೆಳೆಯರೇ, ಚಿತ್ರದಲ್ಲಿನ ಇವರ ಅಮೋಘ ಅಭಿನಯ ಹಾಗೂ ನಿರ್ದೇಶನ ಪ್ರತಿಯೊಂದು ಪ್ರೇಕ್ಷಕರ ಮೈ ರೋಮಾಂಚನಗೊಳಿಸುವಂತೆ ಮಾಡಿದ್ದು.
ಅಕ್ಷರಶಃ ಸತ್ಯ. ಈ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡು ಕೊಂಡ ನಂತರ ಇವರ ನಟನ ವ್ಯಾಪ್ತಿ ಇತರ ಭಾಷೆಗಳಿಗೂ ಹರಡಿ ಸದ್ಯ ರಿಷಬ್ ಶೆಟ್ಟಿ(Rishab Shetty) ಅವರಿಗೆ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ಯಾವುದೇ ಪೋಸ್ಟ್ ಹಂಚಿಕೊಂಡರು ಅದು ಬಾರಿ ದೊಡ್ಡ ಮಟ್ಟದಲ್ಲಿ ವೈರಲಾಗುತ್ತದೆ.
ಇದೀಗ ರಿಷಬ್ ಶೆಟ್ಟಿ(Rishab Shetty) ತಮ್ಮ ಕುಟುಂಬ ಸಮೇತರಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ, ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಹೌದು ಗೆಳೆಯರೇ ಈ ಕುರಿತು ನಟ ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ತಮ್ಮ ತಾಯಿಯೊಂದಿಗೆ ಹೆಂಡತಿ ಪ್ರಗತಿ ಶೆಟ್ಟಿ(Pragathi Shetty) ಹಾಗೂ ಮಕ್ಕಳೊಂದಿಗೆ ದೇವರ ಸಾನಿಧ್ಯದಲ್ಲಿ ನಿಂತು ತೆಗೆಸಿಕೊಂಡಿರುವಂತಹ ಫೋಟೋವನ್ನು ಹಂಚಿಕೊಂಡು.
“ಇತ್ತೀಚಿಗೆ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನದ ಜೊತೆಗೆ ಧರ್ಮಾಧಿಕಾರಿಗಳ ಆಶೀರ್ವಾದವನ್ನು ಪಡೆದೆವು” ಎಂಬ ಕ್ಯಾಪ್ಷನ್ ಹಾಕಿ ಸಾಕು ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದಾರೆ ಈ ಒಂದು ಸದ್ಯ ಬಾರಿ ವೈರಲಾಗುತ್ತಿದ್ದು, ಪೋಸ್ಟ್ ಮಾಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಲೆ ಹರಿದು ಬರುತ್ತಿದೆ.
ಇನ್ನು ರಿಷಬ್ ಅವರ ಮುಂದಿನ ಸಿನಿಮಾಗಳ ಅಪ್ಡೇಟ್ಸ್ ಕುರಿತು ನೋಡುವುದಾದರೆ ಕಾಂತರಾ ಟು ಸಿನಿಮಾಗಾಗಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿರುವಂತಹ ರಿಷಬ್ ಇದಾದ ನಂತರ ಬೇರೆ ಸಿನಿಮಾಗಳಲ್ಲಿ ಸಕ್ರಿಯರಾಗುವುದಾಗಿ ತಿಳಿಸಿದರು. ಹೊಂಬಾಳೆ ಫಿಲಂಸ್(Hombale films) ಬ್ಯಾನರ್ನ ಅಡಿಯಲ್ಲಿ ಕಾಂತರಾ ಪಾರ್ಟ್ 2(Kantara 2) ತಯಾರಾಗಲಿದ್ದು ಮುಂದಿನ ವರ್ಷ ಮೇ ಅಥವಾ ಜೂನ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಲಿದೆ ಎಂಬ ಮಾಹಿತಿ ಒಂದನ್ನು ಹಂಚಿಕೊಂಡಿದ್ದರು.