Rishab-Shetty-kantara

ಕಾಂತಾರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ನಟ ರಿಷಭ್ ಶೆಟ್ಟಿ..

CINEMA/ಸಿನಿಮಾ

ಸ್ಯಾಂಡಲ್ವುಡ್ ನಲ್ಲಿ ಸಧ್ಯ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳು ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾಗಳಾಗಿ ಭಾರತಾದ್ಯದಂತ ಹೆಸರು ಮಾಡುತ್ತಿದ್ದು ಕಳೆದ ವಾರ ಬಿಡುಗಡೆಯಾದ ಗುರು ಶಿಷ್ಯರು ತೋತಾಪುರಿ ಹಾಗೂ ಕಾಂತಾರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.. ಅದರಲ್ಲೂ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದ ಪುಟ ಸೇರಿದ್ದು ನಮ್ಮ ನಾಡಿನ ಸಂಸ್ಕೃತಿಯನ್ನು ತೋರುವ ದಂತಕತೆಯಾಗಿದೆ.. ಮೊದಲ ವಾರವೇ ಬಾಕ್ಸ್ ಆಫೀಸನ್ನು ಚಿಂದಿ ಮಾಡಿರುವ ಕಾಂತಾರ ಸಿನಿಮಾ ಇನ್ನೆರೆಡು ದಿನಗಳಲ್ಲಿ ಐವತ್ತು ಕೋಟಿ ಗಳಿಕೆ ಕಾಣಲಿದೆ.. ಬೇರೆ ಯಾವುದೇ ಭಾಷೆಗೆ ಡಬ್ ಆಗದೇ ಅತಿ ವೇಗವಾಗಿ ಕನ್ನಡ ಭಾಷೆಯೊಂದರಲ್ಲೇ ಐವತ್ತು ಕೋಟಿ ಗಳಿಕೆ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದ್ದು.. ಕೆಜಿಎಫ್ ಸಿನಿಮಾ ಮಾಡಿ ಗೆದ್ದ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರು ಕಾಂತಾರ ಸಿನಿಮಾ ಮೂಲಕ ಹೊಸ ದಾಖಲೆ ಬರೆದುಕೊಂಡಿದ್ದಾರೆ..

ರಿಷಭ್ ಶೆಟ್ಟಿ ಅವರ ಪ್ರತಿಭೆ ಸಿನಿಮಾ ಮೇಲಿನ ಪ್ರೀತಿ ನಮ್ಮ ಸಂಸ್ಕೃತಿ ಮೇಲಿನ ಪ್ರೀತಿ ನಟನೆ ಮೇಲಿನ ಗೌರವ ಎಲ್ಲವೂ ಸಹ ಈ ಸಿನಿಮಾದಲ್ಲಿ ಅನಾವರಣಗೊಂಡಿದೆ.. ಹಿಂದೆಂದೂ ಆಗದ ಸಿನಿಮಾ ಅನುಭವ ಈ ಸಿನಿಮಾದ ಅಂತಿಮ ಮೂವತ್ತು ನಿಮಿಷಗಳಲ್ಲಿ ಆಗುತ್ತದೆ ಎಂಬುದು ಸಿನಿಮಾ ನೋಡಿದವರ ಮಾತುಗಳಾಗಿದ್ದು ಸಿನಿಮಾ ಗೆದ್ದು ಬೀಗಿದೆ ಎನ್ನಬಹುದು.. ಇನ್ನು ದಸರಾಗೆ ಕಾಂತಾರದ ಯಶಸ್ಸಿನ ಸಂತೋಷದಲ್ಲಿರುವ ರಿಷಭ್ ಶೆಟ್ಟಿ ಅವರೀಗ ಮಗಳಿಗೆ ನಾಮಕರಣ ಮಾಡುವ ಮೂಲಕ ಮತ್ತೊಂದು ಸಂಭ್ರಮ ಆಚರಿಸಿದ್ದಾರೆ.. ಹೌದು ಏಳು ತಿಂಗಳ ತಮ್ಮ ಮುದ್ದು ಹೆಣ್ಣು ಮಗುವಿಗೆ ವಿಶೇಷ ಹೆಸರನ್ನಿಟ್ಟಿರುವ ರಿಷಭ್ ಶೆಟ್ಟಿ ಅವರು ಮೊದಲ ಬಾರಿಗೆ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಗಳು ನಮ್ಮ ಸಂತೋಷದ ಕಳಶಪ್ರಾಯವೆಂದಿದ್ದಾರೆ..

Rishab Shetty: ಮಡದಿ-ಮಗನ ಜೊತೆ ರಿಷಭ್ ಶೆಟ್ಟಿ: ನಿರ್ದೇಶಕನ ಕುಟುಂಬದ ಸುಂದರ ಚಿತ್ರಗಳು..!

ಹೌದು ಎಲ್ಲರಿಗೂ ತಿಳಿದಿರುವಂತೆ ಕಿರಿಕ್ ಪಾರ್ಟಿ ಸಿನಿಮಾದ ಪ್ರಚಾರದ ಸಮಯದಲ್ಲಿ ಪ್ರಗತಿ ಅವರನ್ನು ಥಿಯೇಟರ್ ಒಂದರಲ್ಲಿ ಭೇಟಿಯಾಗಿದ್ದ ರಿಷಭ್ ಶೆಟ್ಟಿ ಅವರು ಇಬ್ಬರ ನಡುವೆ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಈ ಜೋಡಿಗೆ ಅದಾಗಲೇ ಒಂದು ಗಂಡು ಮಗುವಿದ್ದು.. ಕಳೆದ ಏಳು ತಿಂಗಳ ಹಿಂದೆ ಎರಡನೇ ಮಗುವಿಗೆ ಪೋಷಕರಾಗಿದ್ದರು.. ಹೌದು ಪ್ರಗತಿ ಹಾಗೂ ರಿಷಭ್ ಜೋಡಿಗೆ ರಣವಿತ್ ಶೆಟ್ಟಿ ಎಂಬ ಗಂಡು ಮಗುವಿದ್ದು ಕೆಲ ತಿಂಗಖ ಹಿಂದೆ “ಹೊಸ ವರ್ಷಕ್ಕೆ ಹೊಸ ಸಂತಸವೊಂದು ನಮ್ಮ ಕುಟುಂಬಕ್ಕೆ ಜೊತೆಯಾಗಲಿದೆ.. ರಣವಿತ್ ಶೆಟ್ಟಿ ಸಧ್ಯದಲ್ಲಿಯೇ ಅಣ್ಣನಾಗಲಿದ್ದಾನೆ.. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ.. ನಾವು ಪುಣ್ಯ ಮಾಡಿದ್ದೇವೆ.. ಮತ್ತೊಮ್ಮೆ ಪಾಲಕರಾಗುತ್ತಿರುವುದಕ್ಕೆ ಖುಷಿಯಿದೆ.. ಈ ಖುಷಿಯ ಜೊತೆಗೆ ಹೊಸ ವರ್ಷ ಬರಮಾಡಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ..

ಬೇಸಿಗೆ ಬರುತ್ತಿದ್ದಂತೆ ನಮ್ಮ ಕುಟುಂಬದಲ್ಲಿ ನಾಲ್ಕು ಮಂದಿ ಸದಸ್ಯರು ಇರುತ್ತಾರೆ ಎಂದು ಹೇಳಲು ಸಂತಸವಾಗುತ್ತಿದೆ.. ಎಂದು ರಿಷಭ್ ಹಾಗೂ ಪ್ರಗತಿ ಶೆಟ್ಟಿ ಅವರು ಹೇಳಿಕೊಂಡಿದ್ದರು.. ಅದರಂತೆ ಮಾರ್ಚ್ ನಾಲ್ಕರಂದು ಪ್ರಗತಿ ಶೆಟ್ಟಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ರಿಷಭ್ ಅವರ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನವಾಗಿತ್ತು.. ಆ ಸಮಯದಲ್ಲಿ ಸಂತೋಷ ಹಂಚಿಕೊಂಡಿದ್ದ ರಿಷಭ್ ಶೆಟ್ಟಿ ಅವರು ಪತ್ನಿಯ ಫೋಟೋ ಹಾಕಿ ಇಷ್ಟೇ ಚೆಂದದ ಮಗಳು ಹುಟ್ಟಿದ್ದಾಳೆ.. ತಾಯಿ ಮಗು ಆರೋಗ್ಯವಾಗಿದ್ದಾರೆ.. ಎಂದಿದ್ದರು..

ಇದೀಗ ಏಳು ತಿಂಗಳ ನಂತರ ಕಾಂತಾರ ಯಶಸ್ಸಿನ ಜೊತೆಗೆ ಮಗಳಿಗೆ ಹೆಸರನ್ನಿಟ್ಟ ಸಂತೊಶವನ್ನೂ ಹಂಚಿಕೊಂಡಿದ್ದಾರೆ.. ಹೌದು ಮಗಳಿಗೆ ರಾಧ್ಯಾ ಎಂಬ ವಿಶೇಷ ಹೆಸರನ್ನಿಟ್ಟಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಮಗಳ ಹೆಸರು ಹಾಗೂ ಫೋಟೋ ಹಂಚಿಕೊಂಡಿರುವ ರಿಷಭ್ ಶೆಟ್ಟಿ ಅವರು “ಎಲ್ಲರಿಗೂ ನವರಾತ್ರಿಯ ಶುಭಾಶಯಗಳು.. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು.. ನಾಡಿನ ಜನರ ಪ್ರೀತಿ.. ಮತ್ತಷ್ಟು ಸಂಭ್ರಮವನ್ನು ತಂದಿವೆ..

rishab shetty son ranvit shetty, Photos: ಅಡಿಕೆ ತೋಟದಲ್ಲಿ ನಡೆದ ರಿಷಬ್‌ ಶೆಟ್ಟಿ ಪುತ್ರನ ಜನ್ಮದಿನದ ಸಂಭ್ರಮ - director rishab shetty son ranvit shetty birthday celebration photos - Vijaya Karnataka

ಇದಕ್ಕೆ ಕಲಶಪ್ರಾಯವಾಗಿ ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ಮಗಳಿಗೆ ನಿಮ್ಮೆಲ್ಲರ ಹಾರೈಕೆಗಳಿರಲಿ.. ಎಂದು ಬರೆದು ಪೋಸ್ಟ್ ಮಾಡಿದ್ದು ಮುದ್ದು ಕಂದನಿಗೆ ಅಭಿಮಾನಿಗಳು ಕಮೆಂಟ್ ಮೂಲಕ ಹಾರೈಸಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಒಟ್ಟಿನಲ್ಲಿ ಚೆಂದದ ಸಂಸಾರ.. ಎರಡು ಮಕ್ಕಳು.. ವೃತ್ತಿ ಬದುಕಿನಲ್ಲಿ ಯಶಸ್ಸು.. ಹೀಗೆ ರಿಷಭ್ ಶೆಟ್ಟಿ ಅವರ ಜೀವನ ಪರಿಪೂರ್ಣ ಎನ್ನುವಂತಾಗಿದ್ದು ಈ ಜೋಡಿ ನೂರ್ಕಾಲ ಸುಖವಾಗಿರಲಿ.. ಕನ್ನಡಕ್ಕೆ ಮತ್ತಷ್ಟು ಹೆಮ್ಮೆ ಪಡುವ ಸಿನಿಮಾಗಳು ರಿಷಭ್ ಶೆಟ್ಟಿ ಅವರಿಂದ ಬರಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.