Rishab-Shetty-DADA-SAHEB

ರಿಷಭ್ ಶೆಟ್ಟಿಗೆ ಒಲಿದು ಬಂತು ದಾದಾ ಸಾಹೇಬ್ ಪಾಲ್ಕೆ ಇಂಟರ್ನಾಷನಲ್ ಪ್ರಶಸ್ತಿ: ಕಾಂತಾರ ಯಶಸ್ಸಿಗೆ ಮತ್ತೊಂದು ಗರಿ

CINEMA/ಸಿನಿಮಾ Entertainment/ಮನರಂಜನೆ

ಕಾಂತಾರ(Kantara) ಸಿನಿಮಾದ ಸೂಪರ್ ಸಕ್ಸಸ್ ನ ನಂತರ ಡಿವೈನ್ ಸ್ಟಾರ್(Divine Star) ಎಂದೇ ಹೆಸರನ್ನು ಪಡೆದುಕೊಂಡು ಜನಪ್ರಿಯರಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರ ಅಭಿಮಾನಿಗಳು ಖುಷಿಪಡುವಂತಹ ಸುದ್ದಿಯೊಂದು ಈಗ ಹೊರ ಬಂದಿದ್ದು, ರಿಷಬ್ ಶೆಟ್ಟಿಯವರು ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎನ್ನುವ ವಿಷಯವನ್ನು ಕೇಳಿ ಅವರ ಅಭಿಮಾನಿಗಳು ಈಗ ಸಖತ್ ಥ್ರಿಲ್ ಆಗಿದ್ದಾರೆ. ಹೌದು ರಿಷಭ್ ಶೆಟ್ಟಿ ಅವರು ದಾದಾಸಾಹೇಬ್ ಪಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ (Dadasaheb Phalke international award) ಈಗ ಭಾಜನರಾಗುತ್ತಿದ್ದಾರೆ.

ರಿಷಭ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡಿದೆ. ಇಡೀ ದೇಶದಾದ್ಯಂತ ಜನರ ಮೆಚ್ಚುಗೆಯನ್ನು ಗಳಿಸಿದ ಸಿನಿಮಾ ಕೋಟಿಗಳ ಮೊತ್ತದಲ್ಲಿ ಕಲೆಕ್ಷನ್ ಮಾಡಿ ದಾಖಲೆಗಳನ್ನು ಬರೆದಿದೆ. ಈ ಎಲ್ಲಾ ದಾಖಲೆಗಳು ಮತ್ತು ಯಶಸ್ಸಿನ ನಂತರ ಇದೀಗ ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶಕನಾಗಿರುವ ರಿಷಭ್ ಶೆಟ್ಟಿ ಅವರು ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ರಿಷಭ್ ಶೆಟ್ಟಿಯವರಿಗೆ ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಈ ಪ್ರಶಸ್ತಿ ದಕ್ಕಿದೆ. ಫೆಬ್ರವರಿ 20ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು , ರಿಷಬ್ ಶೆಟ್ಟಿ ಅವರು ತಾಜ್ ಲ್ಯಾಂಡ್ ಎಂಡ್ ಹೊಟೇಲ್ ನಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಪ್ರಸ್ತುತ ರಿಷಬ್ ಶೆಟ್ಟಿ ಅವರು ತಮ್ಮ ಹೊಸ ಸಿನಿಮಾ ಅಂದರೆ ಈಗಾಗಲೇ ಅವರೇ ತಿಳಿಸಿರುವಂತೆ ಕಾಂತರಾ ಸಿನಿಮಾದ ಪ್ರಿಕ್ವೆಲ್ ಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಶೀಘ್ರದಲ್ಲೇ ಈ ಸಿನಿಮಾದ ಕುರಿತಾಗಿ ಇನ್ನಷ್ಟು ಅಪ್ಡೇಟ್ ಗಳು ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...