ಭಾರತೀಯ ಮಾರುಕಟ್ಟೆಯಲ್ಲಿ ಬಹುದೊಡ್ಡ ಬೇಡಿಕೆಯನ್ನು ಹೊಂದಿರುವ ವಾಹನಗಳಲ್ಲಿ ಎಸ್ಯುವಿ ಕಾರುಗಳು ಹೆಚ್ಚು ಜನಪ್ರಿಯವಾಗಿವೆ. ಅಲ್ಲದೆ ಬೇರೆ ಬೇರೆ ವಾಹನ ತಯಾರಿಕಾ ಕಂಪನಿಗಳು ತಮ್ಮ ಕಾರ್ ಗಳಲ್ಲಿ ಎಸ್ ಯು ವಿ ಮಾದರಿಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ರೆನಾಲ್ಟ್ ನೆಕ್ಸ್ಟ್ ಜೆನ್ ಡಸ್ಟರ್ ಕೂಡ ಒಂದು. ಈ ಕಾರಿನ ಆನ್ ರೋಡ್ ಪರೀಕ್ಷೆ ಕೂಡ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಹೊಸ ಚಿತ್ರಗಳು ಸಾಕಷ್ಟು ವೈರಲ್ ಆಗಿವೆ.
Renault SUV ಮೈಲೇಜ್:
ಇನ್ನು ಈ ಹೊಸ ಮಾದರಿಯ ಕಾರ್ 1498 ಸಿಸಿ ಎಂಜಿನ್ ಹೊಂದಿದೆ. 15 ಕೆಎಂಪಿಎಲ್ ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಮಾನ್ಯುವಲ್ ಹಾಗೂ ಆಟೋಮೆಟಿಕ್ ಎರಡು ವಿಧದಲ್ಲಿ ಈ ಕಾರ್ ಲಭ್ಯವಿದೆ. 5 ಆಸನಗಳ ಟರ್ಬೋ ಆವೃತ್ತಿಯ ಈ ಕಾರಿನ ಉದ್ದ 4360 ಎಂಎಂ ಅಗಲ 1,822 ಎಂಎಂ, ಹಾಗೂ ಎತ್ತರ 1695 ಎಂಎಂ. ಇನ್ನು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಈ ಕಾರು 2673 ಎಂಎಂ ವೀಲ್ ಬೇಸ್ ಹೊಂದಿದೆ.
Hyundai Creta,Kia Seltosಗೆ ನೇರಾನೇರ ಪೈಪೋಟಿ:
ಈಗ ಬೂಟ್ ಸ್ಪೇಸ್ ಅನ್ನು ಹೆಚ್ಚಾಗಿ ಪಡೆದುಕೊಂಡಿದೆ. ಇತರ ಕಾರ್ಗಳಿಗೆ ಹೋಲಿಸಿದರೆ 475 ಎಲ್ ಬೂಟು ಸ್ಪೇಸ್ ಹಾಗೂ 50 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು ಮಾರುಕಟ್ಟೆಯಲ್ಲಿ ಇರುವ ಹುಂಡೈ ಕ್ರೆಟಾ, ಟೊಯೋಟಾ ಕಾರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರಾಂಡ್ ವಿರಾಟ, ಸ್ಕೋಡಾ ಕುಶಾಕ್ ಮೊದಲದ ಕಾರ್ಗಳಿಗೆ ನೇರ ಪೈಪೋಟಿ ನೀಡಲಿದೆ. ಇನ್ನು ಮುಂಬರುವ 2024ರ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಕಾರಿನ ಬೆಲೆ, (ಎಕ್ಸ್ ಶೋರೂಮ್ ದರ) 9.50 ಲಕ್ಷದಿಂದ 14.50 ಲಕ್ಷದವರೆಗೆ ಇರಬಹುದು ಎಂದು ಹೇಳಲಾಗಿದೆ.