renault-duster

ಹ್ಯುಂಡೈ ಕ್ರೆಟಾಗೆ ಹಗಲಲ್ಲಿಯೇ ನಕ್ಷತ್ರ ತೋರಿಸಲು ಹೊಸ ಅವತಾರದಲ್ಲಿ ಬರುತ್ತಿದೆ ರೆನಾಲ್ಟ್ ಡಸ್ಟರ್!

Entertainment/ಮನರಂಜನೆ

ಪ್ರಿಮಿಯಂ ಫೀಚರ್ಸ್ ಹಾಗೂ ಜಬರ್ದಸ್ತ್ ಮೈಲೇಜ್ ನೊಂದಿಗೆ ಫ್ರಾನ್ಸ್ ಮೂಲದ ಕಾರು ತಯಾರಿಕಾ ಕಂಪನಿ ರೆನಾಲ್ಟ್ ತನ್ನ ಥರ್ಡ್ ಜೇನರೇಷನ್ ಡಸ್ಟರ್ ಕಾರಿನ ಟೆಸ್ಟಿಂಗ್ ಶುರು ಮಾಡಿದ್ದು, ಆದಷ್ಟು ಬೇಗ ಭಾರತದ ರಸ್ತೆಗಿಳಿಯುವ ನಿರೀಕ್ಷೆ ಇದೆ. ಹೊಸ ಜೇನರೇಷನ್ ನ ಡಸ್ಟರ್ 5 ಸೀಟರ್ ಹಾಗೂ 7 ಸೀಟರ್ ಗಳ ಎರಡು ಆಪ್ಷನ್ ಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ಈ ಕಾರಿನ 5 ಸೀಟರ್ ವರ್ಷನ್ ಹ್ಯುಂಡೈ ಕ್ರೆಟಾ, ಮಾರುತಿ ಗ್ರಾಂಡ್ ವಿಟಾರ, ಕಿಯಾ ಸೆಲ್ಟೋಸ್ ಹಾಗೂ ಟೊಯೋಟಾ ಹೈರೈಡರ್ ಕಾರುಗಳಿಗೆ ನೇರವಾದ ಪೈಪೋಟಿ ನೀಡಲಿದ್ದರೆ, ಇತ್ತ 7 ಸೀಟರ್ ರೆನಾಲ್ಟ್ ಡಸ್ಟರ್ ಕಿಯಾ ಕಾರೆನ್ಸ್, ಹ್ಯುಂಡೈ ಅಲ್ಕಾಜಾರ್, ಟಾಟಾ ಸಫಾರಿ ಹಾಗೂ MG ಹೇಕ್ಟರ್ ಪ್ಲಸ್ ಗಳಿಗೆ ಕಾಂಪಿಟೇಷನ್ ಕೊಡಲಿದೆ.

ರೆನಾಲ್ಟ್ ಡಸ್ಟರ್ ನ ಪ್ರಿಮಿಯಂ ಫೀಚರ್ಸ್ :
ಈ ಕಾರಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ರೂಫ್ ರೇಲ್ಸ್, ಸ್ಕ್ವೇರಿಶ್ ವೀಲ್ ಎಡ್ಜ್, ಫ್ರಂಟ್ ನಲ್ಲಿ ಫುಲ್ ಟೈಪ್ ಡೋರ್ ಹ್ಯಾಂಡಲ್ ಮತ್ತು ಸಿ ಪಿಲ್ಲರ್ ಇಂಟಿಗ್ರೇಟೆಡ್ ರಿಯರ್ ಡೋರ್ ಹ್ಯಾಂಡಲ್ ಕೂಡ ನೋಡಲು ಸಿಗುತ್ತದೆ. ಹೊಸ ಡಸ್ಟರ್ ನ ಹಿಂದಿನ ಭಾಗ ಕೂಡ ಬಿಗ್ ಸ್ಟಾರ್ ಕಾನ್ಸೆಪ್ಟ್ ಗೆ ಹೋಲಿಕೆಯಾಗುತ್ತದೆ, ಇದರಲ್ಲಿ ಟ್ವಿನ್ ಪಾಡ್-ಸ್ಟೈಲ್ ಸ್ಪಾಯ್ಲರ್ ಆಕಾರದ ಟೇಲ್ ಲ್ಯಾಂಪ್ಸ್ ಅಳವಡಿಸಲಾಗಿದೆ.

SUV ಯ ಹೊಸ-ಪೀಳಿಗೆಯ ಮಾದರಿಯು ಹೆಚ್ಚು ಸ್ಥಳೀಯವಾಗಿರುವ CMF-B ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ರೆನಾಲ್ಟ್ ಮತ್ತು ನಿಸ್ಸಾನ್ ಒಟ್ಟಿಗೆ ತಯಾರಿಸಿರುವ ಪ್ಲಾಟ್ಫಾರ್ಮ್ ಆಗಿದ್ದು ಹಳೆಯ ಡಸ್ಟರ್ ಗಿಂತ ಹೊಸ ಕಾರು ಅತ್ಯುತ್ತಮವಾಗಿದೆ. ಲುಕ್ ನಲ್ಲಿಯಂತೂ ಈ ಡಸ್ಟರ್ ಧೂಳೆಬ್ಬಿಸಲಿದೆ.

Renault Duster Price, Images, Reviews and Specs | Autocar India

ಟರ್ಬೋ ಪೆಟ್ರೋಲ್ ಎಂಜಿನ್ ನೊಂದಿಗೆ ಬರಲಿದೆ :
ನಿಮ್ಮ ಮಾಹಿತಿಗಾಗಿ ಹೇಳಬೇಕು ಎಂದರೆ ರೆನಾಲ್ಟ್ ಡಸ್ಟರ್ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಪವರ್ ಟ್ರೇನ್ ಆಪ್ಷನ್ ಗಳಲ್ಲಿ ಲಭ್ಯವಿದೆ, ಇದು SUV ಯ ಹಳೆಯ ಮಾಡೆಲ್ 1.3 L ಟರ್ಬೋ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದ್ದು, ಅದು 156 Bhp ಪವರ್ ಜೇನರೇಟ್ ಮಾಡುತ್ತದೆ.

ಹಲವಾರು ಸೇಫ್ಟಿ ಫೀಚರ್ಸ್ ನೊಂದಿಗೆ ಜನರ ಮನಸ್ಸು ಗೆಲ್ಲಲಿದೆ ಈ ಕಾರು:
ರೆನಾಲ್ಟ್ ಡಸ್ಟರ್ ಅಲ್ಲದೇ ಈ ಕಂಪನಿ ಬರುವ ವರ್ಷಗಳಲ್ಲಿ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ವಾಹನಗಳನ್ನು ಸಹ ತರಲಿದೆ, ಆದರೆ ಕಾರು ತಯಾರಿಕಾ ಕಂಪನಿ ಇದುವರೆಗೂ ಎಲೆಕ್ಟ್ರಿಕ್ ವಾಹನದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಚೀನಾ ಮಾರುಕಟ್ಟೆಯಲ್ಲಿ ಈಗಾಗಲೇ ರೆನಾಲ್ಟ್ ಕಂಪನಿ Renault Kwid E-Tech ಕಾರನ್ನು ಮಾರಾಟ ಮಾಡುತ್ತಿದ್ದು, ಅದರ ಬ್ಯಾಟರಿ ಪ್ಯಾಕ್ 26.8 kWh ಆಗಿದ್ದು ಸಿಂಗಲ್ ಚಾರ್ಜ್ ಗೆ ಬರೋಬ್ಬರಿ 271 ಕಿಲೋಮೀಟರ್ ರೇಂಜ್ ನೀಡುತ್ತಿದೆ.

ಇದರ ಪವರ್ ಕ್ರಮವಾಗಿ 44 bhp ಪವರ್ ಮತ್ತು 125 Nm ಟಾರ್ಕ್ ಜೇನರೇಟ್ ಮಾಡುತ್ತದೆ, ಕ್ವಿಡ್ EV ಯಲ್ಲಿ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೆನ್ಮೆಂಟ್ ಸಿಸ್ಟಮ್, 4 ಸ್ಪೋಕ್ ಸ್ಟೇರಿಂಗ್ ವೀಲ್, ಒಂದು EV- ವೈಶಿಷ್ಟ್ಯ ಹೊಂದಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೈಯರ್ ಪ್ರೆಷರ್ ಮಾನಿಟರ್, 6 ಏರ್ ಬ್ಯಾಗ್ಸ್, EBD ಯೊಂದಿಗೆ ABS, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹೀಲ್ ಸ್ಟಾರ್ ಏಡ್ ಮತ್ತು ಇನ್ನಷ್ಟು ಅದ್ಭುತ ಫೀಚರ್ಸ್ ಲಭ್ಯವಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.