ರೇಖಾದಾಸ್

ತನ್ನ ಗಂಡನ ಹೆಂಡತಿಯರಿಗೆ ಬಾಣಂತನ ಮಾಡಿದ್ದ ರೇಖಾದಾಸ್…

CINEMA/ಸಿನಿಮಾ

ನಮ್ಮ ಚಂದನ ಮನದಲ್ಲಿ ಸಾಕಷ್ಟು ನಟರು ಮತ್ತು ನಟಿಯರನ್ನು ನಾವು ನೋಡಿದ್ದೇವೆ, ಬಣ್ಣ ಹಚ್ಚುವ ನಟ ಮತ್ತು ನಟಿಯರ ಜೀವನ ನಾವು ಎಣಿಕೆ ಮಾಡಿದಷ್ಟು ಸುಲಭವಾಗಿ ಇರುವುದಿಲ್ಲ. ಅದರಲ್ಲಿ ರೇಖಾದಾಸ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಬಣ್ಣದ ರಾಣಿ ಎಂದೇ ಗುರುತಿಸಿಕೊಂಡಿರುವಂತಹ ರೇಖಾ ದಾಸ್ ಅವರು ಕನ್ನಡದ ಚಲನಚಿತ್ರ ರಂಗದ ಬಹು ಮುಖ್ಯವಾದಂತಹ ಪ್ರತಿಭೆ. ತಮ್ಮ 14ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಇವರು ಬಾಲ ನಟಿಯಾಗಿ ಪ್ರವೇಶ ಮಾಡಿದರು. ರೇಖಾ ದಾಸ್ ಅಭಿನಯಿಸಿದಂತಹ ಮೊದಲ ಚಿತ್ರ ಎಂದರೆ ಅದು ‘ಕಂಪನ’ ಟೈಗರ್ ಪ್ರಭಾಕರ್ ಅವರ ಈ ಸಿನಿಮಾದಲ್ಲಿ ನಟಿಸಿದರು ಆದರೆ ಇವರಿಗೆ ಅಷ್ಟೊಂದು ಹೆಸರನ್ನು ತಂದು ಕೊಡಲಿಲ್ಲ. ಇವರಿಗೆ ದೊಡ್ಡ ಬ್ರೇಕ್ ಅನ್ನು ನೀಡಿದಂತಹ ಸಿನಿಮಾ ಎಂದರೆ ಅದು ಶಶಿಕುಮಾರ್ ಅವರ ಅಭಿನಯದ ‘ಬಾರೆ ನನ್ನ ಮುದ್ದಿನ ರಾಣಿ’ ಈ ಚಿತ್ರ ಇವರಿಗೆ ದೊಡ್ಡ ಹೆಸರನ್ನು ತಂದು ಕೊಟ್ಟಿತು.

ರೇಖಾದಾಸ್

ಇವರು ಚಿತ್ರರಂಗ ಮಾತ್ರವಲ್ಲದೆ ರಂಗಭೂಮಿ ಹಾಗೆಯೇ ಕಿರುತೆರೆಯಲ್ಲೂ ಸಹ ತಮ್ಮ ಅಭಿನಯದ ಛಾಪನ್ನು ಮೂಡಿಸಿದ್ದಾರೆ. ರೇಖಾ ದಾಸ್ ಅವರ ಮೇಕಪ್ ಶೈಲಿಯಿಂದಾಗಿ ಇವರು ಹೆಚ್ಚು ಜನರಿಗೆ ಪರಿಚಿತರಾದರು. ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟೆನ್ನಿಸ್ ಕೃಷ್ಣ ಅವರ ಪತ್ನಿಯಾಗಿ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡಿರುವಂತಹ ಇವರ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವಂತಹ ಚಿತ್ರಗಳು ಎಲ್ಲವೂ ಸಹ ತುಂಬಾ ಚೆನ್ನಾಗಿದೆ. ಇವರು ಚಿತ್ರರಂಗದಲ್ಲಿ ನಟಿಸುತ್ತಿದ್ದಂತಹ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಅವರು ಇವರ ಹಿಂದೆ ಬಿದ್ದು ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸಿದರು ಆದರೆ ಪ್ರಾರಂಭದಲ್ಲಿ ರೇಖಾ ದಾಸ್ ಅವರು ಇದಕ್ಕೆ ಒಪ್ಪಿರಲಿಲ್ಲ ತದನಂತರದಲ್ಲಿ ಓಂ ಪ್ರಕಾಶ್ ಅವರು ಎಡೆಬಿಡದೆ ಇವರನ್ನು ಕಾಡ ತೊಡಗಿದರು ನಂತರದಲ್ಲಿ ರೇಖಾ ದಾಸ್ ಮದುವೆಗೆ ಒಪ್ಪಿಕೊಂಡು ನಿರ್ದೇಶಕರಾದ ಓಂ ಪ್ರಕಾಶ್ ಅವರ ಕೈ ಹಿಡಿದರು.

ರೇಖಾದಾಸ್

ಮದುವೆಯ ನಂತರ ಪ್ರಾರಂಭದ ದಿನಗಳು ಚೆನ್ನಾಗಿದ್ದರೂ ನಂತರದಲ್ಲಿ ಇವರಿಬ್ಬರ ಮಧ್ಯೆ ಒಂದಷ್ಟು ಭಿನ್ನಾಭಿಪ್ರಾಯಗಳು ಪ್ರಾರಂಭವಾದವು. ಓಂ ಪ್ರಕಾಶ್ ಮತ್ತು ರೇಖಾದಾಸ್ ಅವರಿಗೆ ಒಬ್ಬಳು ಮಗಳು ಜನಿಸಿದಳು. ಅವರೇ ಶ್ರಾವ್ಯ ರಾವ್ ಇವರು ಪ್ರಸ್ತುತದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ರೇಖಾದಾಸ್ ಅವರು ಕನ್ನಡದಲ್ಲಿ 680 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೆಯೇ ತುಳುವಿನಲ್ಲಿ 3 ಚಿತ್ರಗಳನ್ನು ನಟಿಸಿದ್ದಾರೆ, ಇವರು ಸುಮಾರು 6000 ನಾಟಕ ಪ್ರದರ್ಶನಗಳನ್ನು ಸಹ ಎಲ್ಲೆಡೆ ನೀರಿದ್ದಾರೆ. ಅಷ್ಟೇ ಅಲ್ಲದೆ 500ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ ಸುಮಾರು 3500 ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಹಾಗೆಯೇ ಸುಮಾರು 3000 ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಸಹ ಇವರು ನಟಿಸಿದ್ದಾರೆ.

ರೇಖಾದಾಸ್

ಇಷ್ಟೆಲ್ಲಾ ಪ್ರತಿಭೆಯನ್ನು ಇಟ್ಟುಕೊಂಡಿರುವಂತಹ ರೇಖಾದಾಸ್ ಅವರ ಜೀವನ ಅಂದುಕೊಂಡಷ್ಟು ಈಸಿಯಾಗಿ ಇರಲಿಲ್ಲ ಅವರು ತಮ್ಮ ಗಂಡನಿಂದ ಸಾಕಷ್ಟು ನೋವನ್ನು ಅನುಭವಿಸಿದ್ದರು ರೇಖಾದಾಸ್ ಅವರಿಗೆ ವಿ-ಚ್ಛೇ-ದ-ನ ನೀಡಿದಂತಹ ಓಂ ಪ್ರಕಾಶ್ ಅವರು ನಂತರದಲ್ಲಿ ಬೇರೆ ಮದುವೆಯನ್ನು ಮಾಡಿಕೊಳ್ಳುತ್ತಾರೆ ಅಂತಹ ಸಂದರ್ಭದಲ್ಲಿ ಓಂ ಪ್ರಕಾಶ್ ಅವರ ಮತ್ತೋರ್ವ ಪತ್ನಿಗೆ ರೇಖಾ ದಾಸ್ ಅವರೆ ಸ್ವತಹ ಬಾಣಂತನವನ್ನು ಮಾಡಿದ್ದಾರೆ. ಈ ಒಂದು ವಿಷಯ ಕೇಳಿದರೆ ನೋವುಂಟಾಗುತ್ತದೆ. ಈ ವಿಷಯ ಬದ್ದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...