ಈ ಮೊದಲೆಲ್ಲಾ ಸೆಲ್ಫಿ ಯ ಗೀಳಿನಿಂದಾಗಿ ಸಾಕಷ್ಟು ಮಂದಿ ಇಲ್ಲ ಸಲ್ಲದ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಂಡ ಸಾಕಷ್ಟು ಘಟನೆಗಳು ನಡೆದಿದ್ದವು.. ಇನ್ನೂ ವಯಸ್ಸಿನ ಅದೆಷ್ಟೋ ಯುವ ಜನತೆ ಆ ಸೆಲ್ಫಿ ಗೀಳಿನಿಂದಾಗಿ ತಮ್ಮ ಜೀವನವನ್ನೇ ಮುಕ್ತಾಯ ಮಾಡಿಕೊಂಡಿದ್ದರು.. ಆದರೆ ಇತ್ತೀಚಿನ ದಿನಗಳಲ್ಲಿ ರೀಲ್ಸ್ ಟ್ರೆಂಡ್ ಆಗಿದ್ದು ರೀಲ್ಸ್ ಮಾಡಿ ಖ್ಯಾತಿ ಗಳಿಸುವ ಸಲುವಾಗಿ ಕೈಲಾಗದ ಸಾಹಸಗಳಿಗೆ ಕೈಹಾಕಿ ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದ್ದಾರೆ.. ಆದರೆ ಅದೆಲ್ಲದಕ್ಕೂ ಮೀರಿ ಒಂದು ರೀಲ್ಸ್ ನಿಂದಾಗಿ ಒಂದು ಸಂಪೂರ್ಣ ಕುಟುಂಬವೇ ಇಲ್ಲವಾಗಿ ಹೋಗಿದ್ದು ನಿಜಕ್ಕೂ ಮನಕಲಕುವಂತಿದೆ.. ನೋಡು ನೋಡುತ್ತಿದ್ದಂತೆ ರಸ್ತೆಯಲ್ಲಿ ಒಂದೇ ಕುಟುಂಬದ ಮೂವರು ಇಲ್ಲವಾಗಿದ್ದ ಕಂಡು ರಸ್ತೆಯಲ್ಲಿದ್ದ ಜನ ಬೆಚ್ಚಿಬಿದ್ದಿದ್ದಾರೆ..

ಹೌದು ಚಿಕ್ಕಬಳ್ಳಾಪುರದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು ರೀಲ್ಸ್ ಮಾಡುವವರಿಗೆ ಒಂದು ಪಾಠವಾಗಿದೆ.. ಹೌದು ಈತನ ಹೆಸರು ಗೌಸ್ ವಯಸ್ಸು ಮೂವತ್ತೇಳು.. ಇವರ ಪತ್ನಿಯ ಹೆಸರು ಅಮ್ಮಾಜಾನ್ ವಯಸ್ಸು ಮೂವತ್ತಮೂರು.. ಇನ್ನು ಈ ದಂಪತಿಯ ಮಗ ರಿಯಾನ್ ಹದಿಮೂರು ವರ್ಷದವ.. ಬೆಂಗಳೂರಿನಲ್ಲಿ ಈ ಕುಟುಂಬ ವಾಸವಿತ್ತು.. ಅಮ್ಮಾಜಾನ್ ಮೂಲತಃ ಆಂಧ್ರ ಪ್ರದೇಶದ ಕದರಿಯವರು.. ಗೌಸ್ ಹೊಸಪೇಟೆಯವರು.. ಮದುವೆಯ ನಂತರ ಬೆಂಗಳೂರಿನಲ್ಲಿ ವಾಸವಿದ್ದರು.. ಇತ್ತ ಗೌಸ್ ಹಳೆಯ ಸ್ಕೂಟರ್ ಗಳನ್ನು ಕೊಂಡು ಮಾರುವ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು.. ಆದರೆ ಸ್ಕೂಟರ್ ನಲ್ಲಿಯೇ ಅವರ ಸಂಪೂರ್ಣ ಕುಟುಂಬದ ಜೀವನವೇ ಮುಕ್ತಾಯ ವಾಗುತ್ತದೆ ಎಂದು ಬಹುಶಃ ಅವರು ಕನಸಿನಲ್ಲಿಯೂ ಕಂಡಿರಲಿಲ್ಲ..
ಹೌದು ಗೌಸ್ ಅಮ್ಮಾಜಾನ್ ಹಾಗೂ ಮಗ ರಿಯಾನ್ ಮೂವರೂ ಸಹ ಸ್ಕೂಟರ್ ನಲ್ಲಿ ಬೆಂಗಳೂರಿನಿಂದ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು.. ಆದರೆ ಮಾರ್ಗ ಮಧ್ಯೆ ಬಾರದ ಲೋಕಕ್ಕೆ ಹೊರಟುಬಿಟ್ಟರು.. ಹೌದು ಗೌಸ್ ಪತ್ನಿ ಹಾಗೂ ಮಗ ಮೂವರೂ ಸಹ ಸ್ಕೂಟರ್ ನಲ್ಲಿ ಜಾಲಿ ರೈಡ್ ಮಾಡಿಕೊಂಡು ಸ್ಕೂಟರ್ ನಲ್ಲಿಯೇ ರೀಲ್ಸ್ ಮಾಡಿಕೊಂಡು ಫೋಟೋಗಳನ್ನು ತೆಗೆದುಕೊಂಡು ತೆರಳುತ್ತಿದ್ದರು.. ಚಿಕ್ಕಬಳ್ಳಾಪುರ ಮಾರ್ಗದ ಹೊನ್ನೇನಹಳ್ಳಿ ಬಳಿ ರಸ್ತೆ ಬದಿ ಹೊಟೆಲ್ ನಲ್ಲಿ ತಿಂಡಿ ತಿನ್ನಲು ನಿಲ್ಲಿಸಿದ್ದಾರೆ.. ಅಲ್ಲಿ ತಿಂಡಿ ತಿಂದು ಅಲ್ಲಿಯೂ ರೀಲ್ಸ್ ಮಾಡಿಕೊಂಡು ನಂತರ ಬಾಗೇಪಲ್ಲಿ ಕಡೆಗೆ ಯೂಟರ್ನ್ ಮಾಡಿದ್ದಾರೆ..

ಆದರೆ ಬಾಗೇಪಲ್ಲಿ ಕಡೆಯಿಂದ ಬಂದ ಖಾಸಗಿ ಬಸ್ ಗೌಸ್ ನ ಸ್ಕೂಟರಿಗೆ ಡಿಕ್ಕಿಯಾಗಿದ್ದು ಮೂವರೂ ಸಹ ಬಸ್ ನ ಕೆಳಗೆ ತೂರಿದ್ದು ಊಹಿಸಲಾಗದ ಸ್ಥಿತಿಯಲ್ಲಿದ್ದರು.. ಆಗ ತಾನೆ ಹೊಟೆಲ್ ನಲ್ಲಿ ಊಟ ಮಾಡಿ ಅಲ್ಲಿಯೇ ರೀಲ್ಸ್ ಮಾಡಿದ ಕುಟುಂಬ ಮರುಕ್ಷಣವೇ ರಸ್ತೆಯಲ್ಲಿ ಇಲ್ಲವಾದದ್ದ ಕಂಡು ಅಲ್ಲಿದ್ದ ಜನ ಬೆಚ್ಚಿಬಿದ್ದರು.. ಇತ್ತ ಬಸ್ ಚಾಲಕ ಅಲ್ಲಿಂದ ಪರಾರಿಯಾಗಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಅವರ ಮೊಬೈಲ್ ನಲ್ಲಿ ಕೆಲವೇ ಕ್ಷಣಗಳ ಮುಂಚೆ ಆ ಪುಟ್ಟ ಕುಟುಂಬ ಸಂತೋಷದಿಂದ ಮಾಡಿದ್ದ ರೀಲ್ಸ್ ಕಂಡು ಜನ ಮರುಗಿದ್ದಾರೆ.. ಜೀವನ ಶಾಶ್ವತವಲ್ಲ ನಿಜ..

ಆದರೆ ನಾವುಗಳೇ ನಮ್ಮ ಮೈ ಮೇಲೆ ಅಪಾಯ ತಂದುಕೊಳ್ಳಬಾರದು.. ಕೆಲವೇ ಕ್ಷಣಗಳ ಮುಂಚೆ ಇದ್ದ ಕುಟುಂಬ ಈಗ ಇಲ್ಲವೆಂದರೆ ನಿಜಕ್ಕೂ ಮನಕಲಕುತ್ತದೆ.. ದಯವಿಟ್ಟು ರಸ್ತೆಗಳಲ್ಲಿ ಅಪಾಯದ ಸ್ಥಳಗಳಲ್ಲಿ ರೀಲ್ಸ್ ಗಳನ್ನು ಮಾಡಬೇಡಿ.. ಜೀವನ ಮುಖ್ಯ.. ರೀಲ್ಸ್ ಅಲ್ಲ.. ಇನ್ನು ಈ ವಿಚಾರ ತಿಳಿದ ಗೌಸ್ ಹಾಗೂ ಅಮ್ಮಜಾನ್ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.. ಮನೆಗೆ ಬರ್ತೀವಿ ಎಂದು ಸಂತೋಷದಿಂದ ಫೋನ್ ಮಾಡಿದ್ದವರು ಮಾರ್ಗ ಮಧ್ಯೆಯೇ ಈ ರೀತಿಯಾದರೆಂದು ಸಂಬಂಧಿಕರು ಕಣ್ಣೀರಿಟ್ಟರು.. ಆ ಕುಟುಂಬವಂತೂ ಮರಳಿ ಬಾರದು.. ಇನ್ನಾದರೂ ರೀಲ್ಸ್ ಸೆಲ್ಫಿ ಅದು ಇದು ಅಂತ ಕೈಲಾಗದ ಸಾಹಸಕ್ಕೆ ಮುಂದಾಗುವವರು.. ರಸ್ತೆಗಳಲ್ಲಿ ಮೊಬೈಲ್ ಹಿಡಿದು ಕುಣಿಯುವವರು ಬೆಟ್ಟ ಗುಡ್ಡಗಳಲ್ಲಿ ನೀರಿನ ಜಾಗಗಳಲ್ಲಿ ಫೋಟೋ ರೀಲ್ಸ್ ಎನ್ನುವವರು ದಯವಿಟ್ಟು ಎಚ್ಚರವಾಗಿರಿ..