ಮಹಿಳೆಯರು ತುಂಬಾನೇ ಸೆನ್ಸಿಟಿವ್. ಹೇಳಿದ್ದನ್ನೆಲ್ಲಾ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಅವರ ಬಳಿ ಏನು ಮಾತಾಡೋದು ಕಷ್ಟ. ಹೀಗೆಲ್ಲಾ ಅಂದುಕೊಂಡಿದ್ದೀರಾ? ಸೆನ್ಸಿಟಿವ್ ಕೇವಲ ಹುಡುಗಿಯರು ಅಷ್ಟೇ ಅಲ್ಲ, ಮನುಷ್ಯರು ಎಂದಮೇಲೆ ಕೆಲವರು ಸೆನ್ಸಿಟಿವ್ ಆಗಿರುತ್ತಾರೆ. ಬೇಗ ಮನಸಿಗೆ ನೋವು ಮಾಡಿಕೊಳ್ಳುತ್ತಾರೆ. ಆದರೆ ಯಾವುದೇ ಹುಡುಗಿಯ ಬಳಿ ಮಾತನಾಡುವಾಗ ಈ ರೀತಿ ಹೇಳಬೇಡಿ..ಹುಡುಗಿಯರಿಗೆ ಇದು ಇಷ್ಟವಾಗೋದಿಲ್ಲ..
ಯಾಕಿಷ್ಟು ಸುಸ್ತಾಗಿದ್ದೀಯಾ? ಕಣ್ಣ ಕೆಳಗೆ ದೊಡ್ಡ ಹೊಂಡವೇ ಆಗಿದೆ.. ಈ ರೀತಿ ಮಾತು ಬೇಡ. ಆಕೆ ಕೆಲಸ ಮಾಡಿ ಸುಸ್ತಾಗಿರುತ್ತಾಳೆ. ಡಾರ್ಕ್ ಸರ್ಕಲ್ ಇರುವುದು ಅವಳಿಗೆ ಗೊತ್ತಿದೆ. ಅದನ್ನು ಒತ್ತಿ ಹೇಳೋದು ಬೇಡ..
ಪಿರಿಯಡ್ಸ್ ನಡೀತಿದ್ಯಾ? ಯಾಕಿಷ್ಟು ಕೂಗಾಡ್ತೀಯಾ? ಕೂಗಾಡೋದಕ್ಕೆ ಪಿರಿಯಡ್ಸ್ ಆಗಿರಲೇಬೇಕು ಅಂತೇನಿಲ್ಲ. ಸಿಟ್ಟು ಬಂದರೆ ಯಾರಾದರೂ ಅಷ್ಟೆ ಕೂಗಾಡುತ್ತಾರೆ. ಪಿರಿಯಡ್ಸ್ ಬಗ್ಗೆ ಮಾತನಾಡುವಾಗ ಗಮನ ಇರಲಿ.
ಯಾಕೆ ಹಾಕಿದ್ದೇ ಬಟ್ಟೆ ಹಾಕ್ತೀಯಾ? ಇದು ಮನೆಯಲ್ಲಿ ಹಾಕೋ ರೀತಿ ಇದೆ.. ಬೇರೆಯವರ ಮುಂದೆ ಆಗಲಿ, ಒಬ್ಬರೇ ಇದ್ದಾಗ ಆಗಲಿ ಬಟ್ಟೆ ಬಗ್ಗೆ ಮಾತು ಬೇಡ. ಅದು ಅವರಿಷ್ಟ.
ರಿಲ್ಯಾಕ್ಸ್, ನಾ ತಮಾಷೆ ಮಾಡಿದ್ದು. ಎಲ್ಲರಿಗೂ ಗೊತ್ತು ಯಾವುದೇ ಜೋಕ್ ಇದ್ದರೂ ಅದರಲ್ಲಿ ಸ್ವಲ್ಪ ಸತ್ಯ ಇದ್ದೇ ಇರುತ್ತದೆ. ಯಾವುದೇ ಹುಡುಗಿಗೆ ಮನಸಿಗೆ ಬಂದಂತೆ ಆಡಿಕೊಂಡು ತಮಾಷೆ ಮಾಡಿದೆ. ಸೀನ್ ಮಾಡಬೇಡ ಎಂಬ ಕಮೆಂಟ್ ಬೇಡ.
ಸ್ವಲ್ಪ ದಪ್ಪ ಆಗಿದ್ಯಾ ಅನಿಸತ್ತೆ, ತಿನ್ನೋದು ಕಮ್ಮಿ ಮಾಡು.. ನೀವು ಅವರಿಗೆ ಇದನ್ನು ಹೇಳುವ ಹಾಗೆ ಇಲ್ಲ. ಊಟ ಅವರಿಗೆಷ್ಟು ಬೇಕೋ ಅಷ್ಟು ಅವರು ತಿನ್ನುತ್ತಾರೆ. ದೇಹದ ಬಗ್ಗೆ ಮಾತನಾಡುವುದು ಯಾರಿಗೂ ಹಿಡಿಸೋದಿಲ್ಲ.
ನಿನ್ ಫ್ರೆಂಡ್ ಚನಾಗಿದಾಳೆ. ಪರಿಚಯ ಮಾಡ್ಸು.. ಈ ರೀತಿ ಹೇಳೋದ್ರಿಂದ ತನಗೇನು ಕಮ್ಮಿ, ಅಥವಾ ತನ್ನಲ್ಲಿ ಏನೋ ಕೊರತೆ ಇದೆ ಅನ್ನೋ ಭಾವನೆ ಹೆಣ್ಮಕ್ಕಳಲ್ಲಿ ಮೂಡುತ್ತದೆ.
ನಿನ್ನ ಡೈರೆಕ್ಟ್ ಆಗಿ ನೋಡೋಕಿಂತ ಫೋಟೊ ಚನಾಗ್ ಬರತ್ತೆ.. ಫೋಟೊ ನೋಡಿ ಬಿದ್ದಿದ್ದೀರ ಅಂದರೆ ತಪ್ಪು ನಿಮ್ಮದೆ ಫೋಟೊಗಳಲ್ಲಿ ಚೆನ್ನಾಗಿ ಕಾಣಲು ಏನು ಬೇಕೊ ಅದನ್ನು ಹುಡುಗಿಯರು ಮಾಡಿರುತ್ತಾರೆ. ಅದರಲ್ಲಿ ತಪ್ಪೇನಿಲ್ಲ..
ನೀ ಯಾಕೆ ಮಾತ್ ಮಾತಿಗೂ ಅಳ್ತ್ಯಾ? ಇದನ್ನು ಕೇಳಬೇಡಿ. ನಿಮಗೆ ದೊಡ್ಡ ವಿಷಯಕ್ಕೆ ಹೇಗೆ ಅಳು ಬರುವುದಿಲ್ಲವೋ ಹಾಗೆ ಅವರಿಗೆ ಚಿಕ್ಕ ವಿಷಯಕ್ಕೆ ಅಳು ಬರುತ್ತದೆ. ಅದು ಭಾವನೆಗಳ ವಿಷಯ ಜೋಪಾನ.
ನೀನು ಇನ್ನೂ ಓಪನ್ ಮೈಂಡ್ ಆಗಬೇಕು. ಅದಕ್ಕೆ ನಿನ್ನ ಯಾವ ರಿಲೇಶನ್‌ಶಿಪ್ ಉಳಿದಿಲ್ಲ.. ಅವರ ಹಳೆಯ ರಿಲೇಶನ್‌ಶಿಪ್ ಜಡ್ಜ್ ಮಾಡಲು ನೀವು ಯಾರೂ ಅಲ್ಲ. ಒಂದೇ ದಿನದಲ್ಲಿ ಯಾರೂ ಓಪನ್ ಮೈಂಡೆಡ್ ಆಗೋದಕ್ಕೆ ಚಾನ್ಸ್ ಇಲ್ಲ. ತಾಳ್ಮೆ ಇರಲಿ.