ಭಾರತದಲ್ಲಿ ಇದೇ ವರ್ಷ ಲಾಂಚ್ ಮಾಡಲಾಗಿದ್ದ ಎಲೆಕ್ಟ್ರಿಕ್ ಕಾರನ್ನು ತನ್ನ ಗ್ರಾಹಕರಿಗೆ ಡೆಲಿವರಿ ಕೊಡಲು ವೋಲ್ವೋ ಕಂಪನಿ ಆರಂಭಿಸಿದೆ, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಇದೀಗ ವೋಲ್ವೋ ಬಿಡುಗಡೆ ಮಾಡುತ್ತಿರುವ ಕಾರು ಕೂಡ ಜಬರ್ದಸ್ತ್ ಫೀಚರ್ಸ್ ಹಾಗೂ ಅತ್ಯುತ್ತಮ ರೇಂಜ್ ನೊಂದಿಗೆ ಮಾರುಕಟ್ಟೆಗೆ ಬರಲಿದ್ದು, ಆ ಕಾರಿನ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ…
Volvo XC 40 Recharge Elrctric Car :
ಈ ಕಾರು ಭಾರತದಲ್ಲಿ ಲಾಂಚ್ ಆಗಿರುವ ಒಂದು ಐಶಾರಾಮಿ ಎಲೆಕ್ಟ್ರಿಕ್ SUV ಯಾಗಿದ್ದು, ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ವಿದೇಶಿ ಕಂಪನಿಯೊಂದು ಎಲೆಕ್ಟ್ರಿಕ್ ಮಾದರಿಯಲ್ಲಿ ತಯಾರಿಸಿರುವ ಮೊಟ್ಟ ಮೊದಲ SUV ಆಗಿದೆ. ಈ ಎಲೆಕ್ಟ್ರಿಕ್ ಕಾರನ್ನು ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ವೋಲ್ವೋ ಕಾರು ನಿರ್ಮಾತೃ ಪ್ಲಾಂಟ್ ನಲ್ಲಿ ತಯಾರಿಸಲಾಗುತ್ತಿದೆ.
ವೋಲ್ವೋ ಕಂಪನಿ ಸ್ವೀಡಿಶ್ ಎಲೆಕ್ಟ್ರಿಕ್ ಕಾರು ನಿರ್ಮಾತೃ ಕಂಪನಿಯಾಗಿದ್ದು, ಇದೀಗ ಭಾರತದಲ್ಲಿ ಗ್ರಾಹಕರಿಗೆ ತನ್ನ ಎಲೆಕ್ಟ್ರಿಕ್ ಕಾರು Volvo XC 40 Recharge Electric Car ಎಂಬ ಕಾರನ್ನು ಡೆಲಿವರಿ ಕೊಡಲು ಆರಂಭಿಸಿದೆ, ಇದುವರೆಗೂ ವೋಲ್ವೋ ತನ್ನ ಮೂರರಿಂದ ನಾಲ್ಕು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ತನ್ನ ಓರ್ವ ಗ್ರಾಹಕರಿಗೆ ಕಾರು ಡೆಲಿವರಿ ಕೊಟ್ಟು ಮಾತನಾಡಿದ ಕಂಪನಿ ನಿರ್ದೇಶಕ ಜ್ಯೋತಿ ಮಲ್ಹೋತ್ರಾರವರು ನಾವು ಒಂದು ಐತಿಹಾಸಿಕ ನಿರ್ಧಾರವನ್ನು ಮಾಡಿದ್ದೇವೆ, ಈ ಕಾರಿನ ಮೂಲಕ 2030 ನೇ ಇಸ್ವಿಯ ಒಳಗೆ ನಮ್ಮ ಕಂಪನಿಯ ಎಲ್ಲ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳನ್ನಾಗಿಸುವ ಗುರಿ ಹೊಂದಿದ್ದೇವೆ’ ಎಂದಿದ್ದಾರೆ”
ಪವರ್ ಮತ್ತು ಸ್ಪೀಡ್ :
ವೋಲ್ವೋ XC 40 Recharge Electric Car ಈ ಸೆಗ್ಮೆಂಟ್ ನಲ್ಲಿ ಬರುವ ಎಲೆಕ್ಟ್ರಿಕ್ ಕಾರುಗಳಲ್ಲಿ ಅತ್ಯಂತ ಪವರ್ಫುಲ್ ಎಲೆಕ್ಟ್ರಿಕ್ ಕಾರಾಗಿದ್ದು, ಈ ಎಲೆಕ್ಟ್ರಿಕ್ ಕಾರಿನ ಆಕ್ಸಿಲರೇಷನ್ ಕೂಡ ಹೆಚ್ಚಿದೆ. ಈ ಕಾರು ಓಡಿಸಲು ನಿಮಗೆ ಬಹಳ ಇಷ್ಟವಾಗಬಹುದು, ಈ ಎಲೆಕ್ಟ್ರಿಕ್ ಕಾರು ಕೇವಲ 4.9 ಸೆಕೆಂಡ್ ನಲ್ಲಿ 100 kmph ವೇಗ ಪಡೆಯಲಿದೆ, Volvo XC 40 ಎಲೆಕ್ಟ್ರಿಕ್ ಕಾರು ಆಲ್ ವೀಲ್ ಡ್ರೈವ್ ನೊಂದಿಗೆ ಬರುತ್ತದೆ, ಈ ಕಾರಿನಲ್ಲಿ ಅಳವಡಿಸಿರುವ ಬ್ಯಾಟರಿ ಲೀಥಿಯಂ ಅಯಾನ್ ಬ್ಯಾಟರಿಯಾಗಿದ್ದು, ಇದು ಮೇಲೆ ತಿಳಿಸಿದಂತೆ 78 kwh ಕೆಪ್ಯಾಸಿಟಿ ಹೊಂದಿದ್ದು, 408 bhp ಕಂಬೈನ್ಡ್ ಪವರ್ ಉತ್ಪಾದಿಸುತ್ತದೆ ಹಾಗೂ 660 Nm ಟಾರ್ಕ್ ಜೇನರೇಟ್ ಮಾಡುತ್ತದೆ.
ಫೀಚರ್ಸ್ :
ಬೂಟ್ ಸ್ಪೇಸ್ 414 ಲೀಟರ್ ನದ್ದಾಗಿದ್ದು, ಡೈಮಂಡ್ ಕಟ್ ಅಲಾಯ್ ವೀಲ್ಸ್ ಅಳವಡಿಸಲಾಗಿದೆ. ಗೂಗಲ್ ಅಸ್ಸಿಸ್ಟ್, ಗೂಗಲ್ ಪ್ಲೇ, ಸ್ಮಾರ್ಟ್ ಕಾರ್ ಡ್ರೈವ್, ನೇವಿಗೇಷನ್, 360° ಪಾರ್ಕಿಂಗ್ ವಿವ್, ಸ್ಟೇ ಲೇನ್ ಅವಾಯ್ಡ್ ಕೋಲಿಷನ್, ಹರ್ಮನ್ ಕೊರ್ಡನ್ ಸೌಂಡ್, ಪ್ಯಾಸೆಂಜರ್ ಏರ್ ಬ್ಯಾಗ್ ಮತ್ತು ಪವರ್ ವಿಂಡೋನಂತಹ ಫೀಚರ್ಸ್ ಲಭ್ಯವಿದೆ.
ಬ್ಯಾಟರಿ ಪರ್ಫಾರ್ಮೆನ್ಸ್ :
ಈ ಎಲೆಕ್ಟ್ರಿಕ್ ಕಾರಿನಲ್ಲಿ 78 kwh ಬ್ಯಾಟರಿ ಅಳವಡಿಸಿದ್ದು, ಇದರ ಮೇಲೆ ಕಂಪನಿ ನಿಮಗೆ 8 ವರ್ಷಗಳ ವಾರಂಟಿ ನೀಡುತ್ತದೆ. ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 400 ಕಿಲೋಮೀಟರ್ ವರೆಗೂ ರೇಂಜ್ ನೀಡುತ್ತದೆ. ಕಂಪನಿ ಈ ರೇಂಜ್ ನೀಡುತ್ತದೆ ಅಂತ ಹೇಳುತ್ತದೆ, ಆದರೆ ಪ್ರಾಕ್ಟಿಕಲ್ ಆಗಿ ನೋಡುವುದಾದರೆ ನಿಮಗೆ ಈ ಕಾರು 350 ಕಿಲೋಮೀಟರ್ ರೇಂಜ್ ನೀಡಬಹುದು ಹಾಗೂ ಅದು ನಿಮ್ಮ ಡ್ರೈವಿಂಗ್ ಮೇಲೇಯೂ ಸಹ ನಿರ್ಧರಿತವಾಗಿರುತ್ತದೆ.
ಬೆಲೆ ಹಾಗೂ ಲಾಂಚ್ ಡೇಟ್ :
ಈ ಎಲೆಕ್ಟ್ರಿಕ್ ಕಾರಿನ ಬೆಲೆಯ ಬಗ್ಗೆ ನೋಡುವುದಾದರೆ, ಈ ಕಾರಿನ ಎಕ್ಸ್-ಷೋ ರೂಮ್ ಬೆಲೆ ಕೇವಲ 5.90 ಲಕ್ಷ ರೂಪಾಯಿಗಳಿಂದ ಶುರುವಾಗಲಿದೆ, ಹಾಗೇನೇ ಈಗಾಗಲೇ ಭಾರತದಲ್ಲಿ ತನ್ನ ಕಾರನ್ನು ಲಾಂಚ್ ಮಾಡಿರುವ ಕಾರು ನಿರ್ಮಾತೃ ಕಂಪನಿ ನಾಲ್ಕೈದು ಗ್ರಾಹಕರಿಗೆ ತನ್ನ ಕಾರನ್ನು ಡೆಲಿವರಿ ಕೂಡ ನೀಡಿದೆ. ಅಕಸ್ಮಾತ್ ನೀವು ಸಹ ಈ ಕಾರು ಖರೀದಿ ಮಾಡಲು ಇಚ್ಛೆಪಟ್ಟರೆ ಕಂಪನಿಯ ವೆಬ್ಸೈಟ್ volvocars.com ಎಂಬುದರಲ್ಲಿ ಅಥವಾ ನಿಮ್ಮ ಹತ್ತಿರದ ವೋಲ್ವೋ ಶೋ ರೂಮ್ ಗೆ ಭೇಟಿ ನೀಡಿ ವಿಚಾರಿಸಬಹುದು.