
ನಮ್ಮ ಭಾರತ ದೇಶದಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ, ಇಲ್ಲಿರುವ ವಜ್ರಗಳ ಬಗ್ಗೆ ಲೆಕ್ಕ ಇಡುವುದು ಕಷ್ಟವೇ, ಯಾಕೆಂದರೆ ನಮ್ಮಲ್ಲಿ ಪ್ರತಿ ಹಳ್ಳಿಹಳ್ಳಿಯಲ್ಲೂ ಗಲ್ಲಿ ಗಲ್ಲಿಯಲ್ಲೂ ಪ್ರತಿಭೆಗಳು ತುಂಬಿ ತುಳುಕುತ್ತಿವೆ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಕ್ಕಾಗ ಮಾತ್ರ ಅವು ಬೆಳಕಿಗೆ ಬರುತ್ತದೆ. ಈ ವಿಷಯದಲ್ಲಿ ಸಾಮಾಜಿಕ ಜಾಲತಾಣ ಬಂದ ಮೇಲೆ ಕೊಂಚ ಪ್ರತಿಭೆ ಬೆಳಕಿಗೆ ಬರುತ್ತಿವೆ ಎನ್ನಬಹುದು. ಜನರು ಅದನ್ನೇ ಒಂದು ವೇದಿಕೆಯಾಗಿ ಪರಿವರ್ತಿಸಿಕೊಂಡು ತಮ್ಮ ಅದ್ಭುತವಾದ ಪ್ರತಿಭೆಯನ್ನು ಹೊರ ಹಾಕುತ್ತಿದ್ದಾರೆ.
ಆದರೂ ಕೂಡ ಜನಪ್ರಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಆ ಕಾಂಪಿಟೇಶನ್ ಅಲ್ಲಿ ನಿರೂಪಿಸಿ ಗೆಲ್ಲಬೇಕು ಎನ್ನುವ ಚಿಕ್ಕ ಆಸೆ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಹುಡುಗಿ ಅದ್ಭುತವಾದ ಕಂಠ ಸಿರಿ ಹೊಂದಿದ್ದರೂ ಕೂಡ ಸಿಂಗಿಂಗ್ ರಿಯಾಲಿಟಿ ಶೋ ನಿಂದ ಹೊರಬಿದ್ದು ಬೇಸರಿಸಿಕೊಂಡಿದ್ದಾಳೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಇದಕ್ಕೆ ಸಂಬಂಧಪಟ್ಟ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಇದಕ್ಕೆ ಹುಡುಗಿಯನ್ನು ತಿರಸ್ಕರಿಸಲು ಯೋಗ್ಯವಾಗಿಲ್ಲ ಎನ್ನುವ ಅಡಿ ಬರಹವನ್ನು ಕೂಡ ಬರೆದಿದ್ದಾರೆ. ಇವರ ಟ್ವೀಟ್ ನಿಂದ ವೈರಲ್ ಆಗಿರುವ ಈ ವಿಡಿಯೋ ನೋಡಿ ಜನರು ಈಕೆಯ ಬಗ್ಗೆ ಮರುಕಪಟ್ಟುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಈ ಹುಡುಗಿ ರಿಯಾಲಿಟಿ ಶೋ ಒಂದಕ್ಕೆ ಹೋಗಿ ಆಡಿಷನ್ ಅಲ್ಲಿ ರಿಜೆಕ್ಟ್ ಆಗಿ ಹೊರಬರುವಾಗ ಯೂಟ್ಯೂಬ್ ಚಾನೆಲ್ ನವರು ಆಕೆಯನ್ನು ಇಂಟರ್ವ್ಯೂ ಮಾಡಿ ಪ್ರಶ್ನಿಸಿದ್ದಾರೆ ಮತ್ತು ಹಾಗೆ ಹಾಡೊಂದನ್ನು ಹಾಡಲು ಕೇಳಿದ್ದಾರೆ.
ಆಗ ಮಾಧ್ಯಮದೊಂದಿಗೆ ಕಣ್ಣಲ್ಲಿ ನೀರು ತುಂಬಿಕೊಂಡು ಆಕೆ ನಾನು ರಿಜೆಕ್ಟ್ ಆಗಿದ್ದೇನೆ ಎಂದು ಹೇಳಿದ್ದಾಳೆ, ಯಾಕೆ ಎಂದು ಕೇಳಿದಾಗ ಗೊತ್ತಿಲ್ಲ ನಾನು ರಿಜೆಕ್ಟ್ ಆಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾಳೆ. ಆ ಬಳಿಕ ಅವರು ಹಾಡೊಂದನ್ನು ಹಾಡಲು ಹೇಳಿದಾಗ ಲತಾ ಮಂಗೇಶ್ಕರ್ ಅವರ “ಪಿಯಾ ತೋಸೆ ನೈನಾ ಲಾಗೇ ರೆ…” ಈ ಹಾಡನ್ನು ಸುಶ್ರಾವ್ಯವಾಗಿ ತಮ್ಮ ಸುಮಧುರ ಕಂಠದಿಂದ ಹಾಡಿದ್ದಾರೆ.

ಈ ವಿಡಿಯೋ ತುಂಬಾ ವೈರಲ್ ಆಗುತ್ತಿದ್ದು ಈವರೆಗೆ 6 ಲಕ್ಷ ವೀಕ್ಷಣೆ ಪಡೆದಿದೆ, ಅದರಲ್ಲಿ 30,000 ಜನರು ಇವರ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ಹಾಡನ್ನು ಕೇಳಿದ ಮೇಲೆ ಹಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಅದರಲ್ಲಿ ಕೆಲವರು ನಿಜವಾಗಿಯೂ ಈ ಹುಡುಗಿ ಬಹಳ ಸುಂದರವಾದ ಧ್ವನಿ ಹೊಂದಿದ್ದಾಳೆ ಆದರೆ ಯಾಕೆ ರಿಜೆಕ್ಟ್ ಆದಳು ಎಂದು ಬೇಸರಿಸಿಕೊಂಡಿದ್ದಾರೆ.
ಕೆಲವರು ಹಾಡಿನಲ್ಲಿ ಕೆಲವು ನೋಟ್ ಗಳು ಮಿಸ್ ಆಗಿರುವುದೇ ಇವರ ರಿಜೆಕ್ಟ್ ಗೆ ಕಾರಣ ಇರಬಹುದು ಎಂದು ಕೂಡ ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಹುಡುಗಿಗೆ “ನೀವು ದೊಡ್ಡ ರಿಯಾಲಿಟಿ ಶೋ ಅಲ್ಲಿ ಹಾಡಲು ಈ ರೀತಿ ಕಠಿಣ ಹಾಡುಗಳನ್ನು ಸೆಲೆಕ್ಟ್ ಮಾಡುವುದೇ ತಪ್ಪು, ಅದರ ಬದಲು ನೀವು ಸರಾಗವಾದ ಹಾಡನ್ನು ಹಾಡಿದರೆ ಸೆಲೆಕ್ಟ್ ಆಗುತ್ತಿದ್ದಿರೇನೋ, ನಿಜಕ್ಕೂ ನಿಮ್ಮದು ಅದ್ಭುತವಾದ ಧ್ವನಿ” ಎಂದು ಕೂಡ ಹೊಗಳಿದ್ದಾರೆ.
ಹುಡುಗಿ ರಿಯಾಲಿಟಿ ಶೋ ಅಲ್ಲಿ ಹಾಡಲು ರಿಜೆಕ್ಟ್ ಆಗಿರಬಹುದು ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕೆ ಸದ್ಯಕ್ಕೆ ದೊಡ್ಡದೊಂದು ಸೆನ್ಸೇಶನಲ್ ಕ್ರಿಯೇಟ್ ಮಾಡಿದ್ದಾಳೆ. ಒಂದು ಅವಕಾಶ ತಪ್ಪಿರಬಹುದು ಆದರೆ ಮುಂದೆ ಒಂದು ದಿನ ಆಕೆಗೆ ಅದಕ್ಕೂ ದೊಡ್ಡದಾದ ಅವಕಾಶ ಅರಸಿ ಬರಲಿ ಎಂದು ಹಾರೈಸೋಣ.
ಆ ವಿಡಿಯೊ ಕೆಳಗಿದೆ ನೋಡಿ…
बच्ची रिजेक्ट करने लायक़ तो नहीं ही है. खूबसूरत आवाज़.❤️ pic.twitter.com/86tfINziDB
— Awanish Sharan (@AwanishSharan) August 7, 2022
Comments are closed.