ರವಿಚಂದ್ರನ್

ಹುಡುಗಿರ ಗ್ಲಾಮರ್ ತೋರಿಸೋಕೆ ರವಿಚಂದ್ರನ್ ಇಂದ ಮಾತ್ರ ಸಾಧ್ಯ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಪ್ರಿಯಾಂಕಾ ಉಪೇಂದ್ರ.

CINEMA/ಸಿನಿಮಾ Girls Matter/ಹೆಣ್ಣಿನ ವಿಷಯ

ಪ್ರಿಯಾಂಕ ಉಪೇಂದ್ರ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದಾರೆ ಇದುವರೆಗೂ ಸುಮಾರು 50 ಸಿನಿಮಾಗಳನ್ನು ಕನ್ನಡದಲ್ಲಿ ನಟಿಸಿರುವ ಈ ನಟಿ ಇಂದಿಗೂ ಕೂಡ ಕನ್ನಡ ಮಾತ್ರವಲ್ಲದೇ ಬೆಂಗಾಳಿ ಒರಿಯ ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಉಪೇಂದ್ರ ಅವರ ಜೊತೆ ಎಚ್2ಓ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರರಂಗ ಪಾದಾರ್ಪಣೆ ಮಾಡಿದ ಇವರು ಕನ್ನಡದ ಒಬ್ಬ ಪ್ರಮುಖ ನಟಿಯಾಗಿ ಬದಲಾಗಿದ್ದಾರೆ. ಮದುವೆಯಾದ ಬಳಿಕ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡ ಈ ನಟಿ ಮತ್ತೆ ತಮ್ಮನ್ನು ಯಾರೂ ಉಪೇಂದ್ರ ಅವರ ಪತ್ನಿ ಎಂದು ಗುರುತಿಸಬಾರದು ನಾನು ಕೊನೆವರೆಗೂ ಒಬ್ಬ ನಟಿ ಎಂದು ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಿಂದ ಮತ್ತೆ ಅಭಿನಯಿಸಲು ಶುರು ಮಾಡಿದ್ದಾರೆ. ಉಪೇಂದ್ರ ಅವರು ಕೂಡ ತಮ್ಮ ಪತ್ನಿಯ ಎಲ್ಲಾ ಕನಸುಗಳಿಗೆ ಸಪೋರ್ಟಿವ್ ಆಗಿ ನಿಲ್ಲುತ್ತಾರೆ.

Malla Kannada Movie Part 1 HD | V. Ravichandran, Priyanka Upendra and Mohan Shankar - YouTube

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿಯಾದ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ರವಿಚಂದ್ರನ್ ಅವರ ಬಗ್ಗೆ ಆಡಿದ ಮಾತುಗಳು ಎಲ್ಲರ ಗಮನ ಸೆಳೆಯುತ್ತಿವೆ. ರವಿಚಂದ್ರನ್ ಅವರ ಸಿನಿಮಾಗಳು ನಾಯಕಿಯಾಗಿ ನಟಿಸಬೇಕು ಎಂದರೆ ನಿಜವಾಗಿಯೂ ಅದೃಷ್ಟ ಇರಬೇಕು ಯಾಕೆಂದರೆ ಸಿನಿಮಾದಲ್ಲಿ ಅವರು ಬೇರೆ ಎಲ್ಲರಿಗಿಂತ ನಟಿಯ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮಲ್ಲ ಎನ್ನುವ ಸಿನಿಮಾದಲ್ಲಿ ನಾನು ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೇನೆ ಆ ಸಿನಿಮಾಗೆ ನಾನು ಆಯ್ಕೆಯಾಗುತ್ತೇನೆ ಎಂದೇ ಅಂದುಕೊಂಡಿರಲಿಲ್ಲ. ನಾನು ಹೈಟ್ ಕಡಿಮೆ ಇದ್ದ ಕಾರಣ ರಿಜೆಕ್ಟ್ ಆಗುತ್ತೇನೆ ಎಂದುಕೊಂಡಿದ್ದೆ ಆದರೆ ನನ್ನ ಜೊತೆ ಒಂದೇ ಒಂದು ಸನ್ನಿವೇಶದಲ್ಲಿ ಅಭಿನಯಿಸಿದ ಬಳಿಕ ರವಿಚಂದ್ರನ್ ಅವರು ಸಿನಿಮಾ ಗೆ ನನ್ನನ್ನು ಒಪ್ಪಿಕೊಂಡು ಬಿಟ್ಟರು.

ನಂತರ ನಡೆದದ್ದೆಲ್ಲ ಒಂದು ಇತಿಹಾಸ. ಮಲ್ಲ ಸಿನಿಮಾದಲ್ಲಿ ನನ್ನ ಮತ್ತು ರವಿಚಂದ್ರನ್ ಅವರ ಕಾಂಬಿನೇಷನ್ ಅನ್ನು ಎಲ್ಲರೂ ತುಂಬಾ ಮೆಚ್ಚಿಕೊಂಡರು. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಹಾಡುಗಳು ಕೂಡ ಹಿಟ್ ಆಗುತ್ತದೆ ಮತ್ತು ಹಾಡುಗಳಲ್ಲಿ ಅವರು ವಿಭಿನ್ನ ಪ್ರಯೋಗ ಮಾಡುವುದಕ್ಕೆ ಅವರು ಫೇಮಸ್ ಆಗಿದ್ದಾರೆ. ಮತ್ತು ಅವರ ಸಿನಿಮಾಗಳಲ್ಲಿ ನಟಿಯರನ್ನು ತುಂಬಾ ಗ್ಲಾಮರಸ್ಸಾಗಿ ಹಾಗೂ ಹಾಡುಗಳಲ್ಲಿ ಅವರ ಸೌಂದರ್ಯವನ್ನು ಇನ್ನಷ್ಟು ಹಿಮ್ಮಡಿಗಳುವಂತೆ ತೋರಿಸುತ್ತಾರೆ. ನಿಜವಾಗಿಯೂ ಸಿನಿಮಾರಂಗದಲ್ಲಿ ರವಿಚಂದ್ರನ್ ಅವರಿಗೆ ಅವರೇ ಸಾಟಿ. ಅವರಷ್ಟು ನಟಿಯರ ಮೇಲೆ ಪ್ರಯೋಗ ಮಾಡುವವರು ಯಾರು ಇಲ್ಲ. ಈಗಾಗಲೇ ರವಿಚಂದ್ರನ್ ಅವರ ಹಲವು ಸಿನಿಮಾಗಳಲ್ಲಿ ಇಂತಹ ಪ್ರಯೋಗಗಳನ್ನು ನೀವೆಲ್ಲ ನೋಡಿದ್ದೀರಿ. ಯಾವಾಗೂ ಸಿನಿಮಾ ಬಗ್ಗೆ ಅಷ್ಟೊಂದು ಕ್ರೇಝ್ ಇಟ್ಟುಕೊಂಡಿರುವ ಕನಸುಗಾರ ಅವರು ಎಂದು ಹೇಳಿದ್ದಾರೆ.

Kalla malla Sulla, kannada movie, ragini, ravichandran, HD phone wallpaper | Peakpx

ಸಿನಿಮಾ ಹಾಡುಗಳಲ್ಲಿ ನನ್ನನ್ನು ಎಷ್ಟು ಸುಂದರವಾಗಿ ತೋರಿಸಿದ್ದಾರೆ ಎಂದು ನೀವೆಲ್ಲ ನೋಡಿದ್ದೀರಿ. ಹೀಗಾಗಿ ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ ಜೊತೆಗೆ ಮತ್ತೊಮ್ಮೆ ಅವರ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ದೊರೆತರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದು ಕೂಡ ಹೇಳಿಕೊಂಡಿರುವ ಅವರು ಕ್ರೇಜಿಸ್ಟಾರ್ ಎನ್ನುವ ಸಿನಿಮಾದಲ್ಲೂ ಕೂಡ ರವಿಚಂದ್ರನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ರವಿಚಂದ್ರನ್ ಹಾಗೂ ಪ್ರಿಯಾಂಕ ಅವರು ಮತ್ತೆ ಒಟ್ಟಿಗೆ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲಾಗುತ್ತಿದೆ. ಮತ್ತೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನಗಳಿಗೆ ಇದು ಕಾರಣವಾಗಿದೆ. ರವಿಚಂದ್ರನ್ ಮತ್ತು ಪ್ರಿಯಾಂಕಾ ಅವರನ್ನು ಒಟ್ಟಿಗೆ ನೋಡುವಂತಹ ಆಸೆ ನಿಮಗಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ‌.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...