ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ನಟಿಯರು ನಾಯಕಿಯರಾಗಿ ಮಿಂಚಿತ್ತು ಈಗಲೂ ಅವರನ್ನು ಜನ ನೆನಪು ಮಾಡಿಕೊಳ್ಳುತ್ತಾರೆ. 80 90 ರ ದಶಕದಲ್ಲಿ ಬಾಲಿವುಡ್ ನಲ್ಲಿ ಸಿನಿಪ್ರಿಯರ ಹಾರ್ಟ್ ಗೆ ಲಗ್ಗೆ ಇಟ್ಟಿದ್ದ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು. ನಟಿ ರವೀನಾ ತಂಡನ್ ತನ್ನ ಹದಿನಾರನೇ ವರ್ಷಕ್ಕೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು ಬಾಲಿವುಡ್ ಸ್ಟಾರ್ ನಟಿ ಕನ್ನಡದಲ್ಲಿ ಕೂಡ ಅಭಿನಯಿಸಿದ್ದಾರೆ.
ಉಪೇಂದ್ರ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (upendra) ಅವರ ಜೊತೆಗೆ ಅಭಿನಯಿಸಿದ್ದರು ಅದಾದ ನಂತರ ಅವರು ಬಾಲಿವುಡ್ ನಲ್ಲಿ. ಬಾಲಿವುಡ್ ಸ್ಟಾರ್ ನಟರು ಗಳಾಗಿದ್ದ ನಟ ಗೋವಿಂದ, ಅಕ್ಷಯ್ ಕುಮಾರ್ ಜೊತೆಗೆ ಕರೆ ಹಂಚಿಕೊಂಡ ರವೀನಾ ಟಂಡನ್ ಈಗಲೂ ಅಲ್ಲೊಂದು ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಇತ್ತೀಚಿಗೆ ರವೀನಾ ಟಂಡನ್ ಅವರು ಕೆ ಜಿ ಎಫ್ 2 (KGF 2) ಸಿನಿಮಾದಲ್ಲಿ ರಮಿಕಾ ಸೇನ್ ಪಾತ್ರವನ್ನು ನಿಭಾಯಿಸಿದ್ದಾರೆ. ಲಕ್ಷಗಟ್ಟಲೆ ಸಂಭಾವನೆ ನೀಡಲಾಗಿತ್ತು. ನಟಿ ರವೀನಾ ಟಂಡನ್ ಅವರು ಇತ್ತೀಚೆಗೆ ತಾವು ಸಿನಿಮಾರಂಗಕ್ಕೆ ಕಾಲಿಟ್ಟಾಗ ಜನ ತಮ್ಮನ ಹೇಗೆ ನೋಡಿದರೂ ಎನ್ನುವುದರ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಸಿನಿಮಾ ರಂಗದಲ್ಲಿ ನಟಿಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ ಅವರ ಮೈ ಮಾಟಗಳ ಬಗ್ಗೆ ಕೆಲವರು ಒಳ್ಳೆಯ ಮಾತುಗಳನ್ನು ನೀಡಿದರೆ ಇನ್ನೂ ಕೆಲವರು ಬಾಯಿಗೆ ಬಂದ ರೀತಿಯಲ್ಲಿ ಹೇಳುತ್ತಾರೆ ಅಷ್ಟೇ ಅಲ್ಲ ಸಾಕಷ್ಟು ಮಾಧ್ಯಮ(media) ಗಳಲ್ಲಿಯೂ ಕೂಡ ಕೆಲವರ ಬಗ್ಗೆ ನೆಗೆಟಿವ್ (Negative) ಆಗಿ ಬರೆದಿದ್ದು ಇದೆ. ಅದರಲ್ಲೂ ಬಾಲಿವುಡ್ ನಟಿಯರು ಇಂತಹ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ ಯಾಕೆಂದರೆ ಸಿನಿಮಾ ಮ್ಯಾಗಜಿನ್ ಗಳು ಬಾಲಿವುಡ್ ನಲ್ಲಿ ಪ್ರಚಲಿತದಲ್ಲಿ ಇರುವಷ್ಟು ಇತರ ಭಾಷೆಗಳಲ್ಲಿ ಇಲ್ಲ ಎನ್ನಬಹುದು.
ಇನ್ನು ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ತಾನು ಕೂಡ ಅವಮಾನ ಅನುಭವಿಸಿದೆ ಎಂದು ರವೀನಾ ಹೇಳಿಕೊಂಡಿದ್ದಾರೆ. ಅಂದಹಾಗೆ ರವೀನಾ ಅವರಿಗೆ ಅವಮಾನ ಮಾಡಿದ್ದು ಯಾವ ಪುರುಷನೂ ಅಲ್ಲ, ಸ್ತ್ರೀವಾದಿಗಳು ಎಂದು ಕರೆಸಿಕೊಳ್ಳುವ ಮಹಿಳೆಯರೇ.. ಹೌದು ರವೀನಾ ಟಂಡನ್ ಅವರ ಬಗ್ಗೆ ಮ್ಯಾಗಜಿನ್ (magazine) ಒಂದರಲ್ಲಿ ಕೆಟ್ಟದಾಗಿ ಬರೆದಿದ್ದರಂತೆ. ಅವರ ಬಗ್ಗೆ ಯಾವಾಗಲೂ ಒಂದಲ್ಲ ಒಂದು ನೆಗೆಟಿವ್ ಆಗಿ ಲೇಖನಗಳು ಬರುತ್ತಿದ್ದವಂತೆ. ಈ ಬಗ್ಗೆ ರವೀನಾ ಟಂಡನ್ ಹೇಳಿಕೊಂಡಿದ್ದಾರೆ.
“ನಾನು ಹದಿನಾರನೇ ವರ್ಷ (16th years) ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದೆ. ಆಟೋ ನನ್ನ ಬಗ್ಗೆ ಪತ್ರಿಕೆ (news paper)ಗಳು ಸಾಕಷ್ಟು ಕೆಟ್ಟದಾಗಿ ಬರೆದಿದ್ದವು. ಆ ಸಮಯದಲ್ಲಿ ನನ್ನ ತೊ-ಡೆಗಳು ದಪ್ಪವಾಗಿದ್ದವು. ಹಾಗಾಗಿ ಮ್ಯಾಕ್ಸಿನ್ ಹೊಂದಿರಲಿ ತೊ-ಡೆಗಳ ರಾಣಿ ಎಂದೆ ಬರೆದಿದ್ದರು. ಇದು ನಾನು ಪ್ರಶ್ನೆ ಮಾಡಿದಾಗ ಮ್ಯಾಗಜಿನ್ ಮೂಲೆ ಒಂದರಲ್ಲಿ ಕ್ಷಮಾಪಣೆ ಕೇಳಿ ಬರೆದಿದ್ದು ಇದೆ.
ಆದರೆ ಇಂತಹ ಅವಮಾನಗಳನ್ನು ಎದುರಿಸಿ ಸಿನಿಮಾರಂಗದಲ್ಲಿ ಮುಂದುವರೆದಿದ್ದಕ್ಕೆ ಇಲ್ಲಿಯವರೆಗೂ ಬಂದಿದ್ದೇನೆ ಎಂದು ರವೀನಾ ಟಂಡನ್ ಹೇಳಿಕೊಂಡಿದ್ದಾರೆ. ರವೀನಾ ಟಂಡನ್ ಅವರ ಪ್ರಕಾರ ಸ್ತ್ರೀ ವಾದಿಗಳು ಎಂದು ಕರೆಸಿಕೊಳ್ಳುವವರೇ ಮೊದಲು ಹೆಣ್ಣು ಮಕ್ಕಳನ್ನು ಅವಮಾನ ಮಾಡುತ್ತಾರೆ. ಹೆಣ್ಣು ಮಕ್ಕಳಿಗೆ ಅವರು ಸರಿಯಾಗಿ ಬೆಂಬಲ ನೀಡುವುದಿಲ್ಲ ಎಂದು ಹೇಳುತ್ತಾರೆ. ಸದ್ಯ ರವೀನಾ ಟಂಡನ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.