raveena-tandan

ಅವರಿಗೆ ನನ್ನ ತೊಡೆಗಳ ಮೇಲೆ ಕಣ್ಣಿತ್ತು,ನನಗೆ ತೊಡೆಗಳ ರಾಣಿ ಎಂದು ಕರೆದಿದ್ದರು ಎಂದು ಶಾಕಿಂಗ್ ನ್ಯೂಸ್ ಹೊರಹಾಕಿದ ನಟಿ ರವೀನಾ ಟಂಡನ್! ಅಷ್ಟಕ್ಕೂ ಅವರು ಯಾರೂ ಗೊತ್ತಾ?

Entertainment/ಮನರಂಜನೆ

80 ಹಾಗೂ 90 ರ ದಶಕದ ನಟಿಯರ ಪೈಕಿ ತನ್ನ ಕಣ್ಣಿನಲ್ಲೇ ಅದೆಷ್ಟೋ ಹೃದಯ ದೋಚಿದ್ದ ನತಿ ಎಂದರೆ ಅದು ನಟಿ ರವೀನಾ ಟಂಡನ್. ನಟಿ ರವೀನಾ ಅವರು ಬಾಲಿವುಡ್ ಸಿನಿಮಾರಂಗದ 80 ಹಾಗೂ 90 ರ ಬಹು ಬೇಡಿಕೆಯ ನಟಿ ಎಂದರೆ ತಪ್ಪಾಗುವುದಿಲ್ಲ. ಯಾವುದೆ ಹೊಸ ಸಿನಿಮಾ ಬಂದರೂ ಅದಕ್ಕೆ ನಾಯಕಿಯಾಗಿ ಮೊದಲು ಆಯ್ಕೆಯಾಗುತ್ತಿದ್ದಿದ್ದು,

ನಟಿ ರವೀನಾ ಟಂಡನ್. ಇನ್ನು ನಟಿ ರವೀನಾ ಟಂಡನ್ ಅವರು ಕನ್ನಡದ ಉಪೇಂದ್ರ ಅವರ ಉಪೇಂದ್ರ ಸಿನಿಮಾದಲ್ಲಿ ಕೀರ್ತಿ ಪಾತ್ರದಲ್ಲಿ ಕಾಣಿಸಿಕೊಂಡು, ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು. ಇನ್ನು ಇದಾದ ನಂತರ ಯಾವುದೇ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ನಟಿ ರವೀನಾ ಅವರು ಇತ್ತೀಚೆಗೆ ಬಿಡುಗಡೆಯಾದ, ಯಶ್ ಅವರ ಕೆಜಿಎಫ್ 2 ಸಿನಿಮಾದಲ್ಲಿ,

ರಮೀಕಾ ಸೇನ್ ಪಾತ್ರದಲ್ಲಿ ಎಲ್ಲರ ಮನ ಗೆದ್ದಿದ್ದರು. ಇನ್ನು ನಟಿ ರವೀನಾ ಟಂಡನ್ ಅವರಿಗೆ ಅಭಿಮಾನಿ ಬಳಗ ಏನು ಕಡಿಮೆ ಇಲ್ಲ. ನಟಿ ರವೀನಾ ಅವರು ಇತ್ತೀಚೆಗೆ ತಮಗೆ ಸಿನಿಮಾರಂಗದಲ್ಲಿ ನಡೆದ ಅವಮಾನಗಳು ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇನ್ನು ಇದೀಗ ಮಹಿಳೆಯರಿಂದಲೇ ತಮಗೆ ನಡೆದ ಅವಮಾನಗಳ ಕುರಿತು ನಟಿ ರವೀನಾ ಮನ ಬಿಚ್ಚಿ ಹೇಳಿಕೊಂಡಿದ್ದಾರೆ.

Raveena Tandon is waiting for the lockdown to end as she craves to hit the  beaches; shares throwback pictures | Hindi Movie News - Times of India

ನಟಿ ರವೀನಾ ಟಂಡನ್ ಅವರು, “ನಾನು ಸ್ವಿಮ್ ಸೂಟ್ ಧರಿಸಿಲ್ಲ, ಯಾವುದೇ ಕಿಸಿಂಗ್ ಸೀನ್ ನಲ್ಲಿ ಕಾಣಿಸಿಕೊಂಡಿಲ್ಲ ಇದರಿಂದ ನಾನು ಚಿತ್ರರಂಗದಲ್ಲಿ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದೆ. ಇನ್ನು ಆಗಿನ ಕೆಲವು ಮ್ಯಾಗಜೀನ್ ಅವರಿಗೂ ಸಹ ನನ್ನ ಮೇಲೆ ಕಣ್ಣಿತ್ತು. ತಮ್ಮನ್ನು ಸ್ತೀವಾಧಿಗಳು ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆಯರೇ,

ಒಬ್ಬ ಮಹಿಳೆಯ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದರು. ನನ್ನ ಬಗ್ಗೆ ಇಲ್ಲ ಸಲ್ಲದನ್ನು ಬರೆಯುತ್ತಿದ್ದರು. ನಾನು ಸಿನಿಮಾರಂಗಕ್ಕೆ ಬಂದಾಗ ನನಗೆ 16 ವರ್ಷ ಆಗ ನನ್ನ ತೊಡೆಗಳು ಕೊಂಚ ದಪ್ಪ ಇದ್ದವು. ಇನ್ನು ಈ ತಮ್ಮನ್ನು ಸ್ಟೀವಾಧಿಗಳು ಎಂದು ಕರೆಸಿಕೊಳ್ಳುವ ಇವರು, ನನ್ನ ತೊಡೆಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು.
ನನಗೆ ತೊಡೆಗಳ ರಾಣಿ ಎಂದು ಸಹ ಹೆಸರಿಟ್ಟಿದ್ದರು. ಇನ್ನು ಈ ಬಗ್ಗೆ ನಾನು ಪ್ರಶ್ನೆ ಮಾಡಿದಾಗ ಅದಕ್ಕೆ ಕ್ಷಮೆ ಕೇಳಿ, ಈ ಬಗ್ಗೆ ಸಣ್ಣದಾಗಿ ಯಾವುದಾದರೂ ಒಂದು ಪೇಜ್ ನ ಮೂಲೆಯಲ್ಲಿ ಬರೆದಿರುತ್ತಿದ್ದರು. ಇನ್ನು ಅಷ್ಟರಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ವಿಷಯಗಳು ಹರಿದಾಡಿರುತ್ತಿತ್ತು.

ಇಂದಿಗೂ ಇವರು ತಮ್ಮನ್ನು ಸ್ತೀವಾಧಿಗಳೂ ಎಂದೇ ಕರೆಸಿಕೊಳ್ಳುತ್ತಾರೆ. ಆದರೆ ಇವರು ಅನ್ಯಾಯ ಮಾಡುವುದು ಮೊದಲು ಮಹಿಳೆಯರಿಗೆ, ಇಂತವರನ್ನು ಏನೆಂದು ಕರೆಯಬೇಕೋ ಗೊತ್ತಿಲ್ಲ ಎಂದಿದ್ದಾರೆ ನಟಿ ರವೀನಾ ಟಂಡನ್. ಸದ್ಯ ನಟಿಯ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.