ಕೊನೆಗೂ ಸಿಕ್ಕಿತೇ ರಾವಣನ ಶ.ವ.? ಶ್ರೀಲಂಕಾದ ಪುರಾತತ್ವ ಅಧಿಕಾರಿಗಳಿಂದ ಬಯಲಾಯ್ತು ಅಚ್ಚರಿಯ ಸಂಗತಿ

ಭಾರತದಲ್ಲಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ, ಯಾಕಂದ್ರೆ ಇದೇ ದಿನದಂದೇ ಪ್ರಭು ಶ್ರೀರಾಮ ಲಂಕಾಪತಿ ರಾವಣನನ್ನ ಸಂಹರಿಸಿದ್ದ. ಆದರೆ ರಾವಣ ಸತ್ತಿಲ್ಲ ಹಾಗು ಈ ಭೂಮಿ ಮೇಲೆ ಈಗಲೂ ಜೀವಂತವಾಗಿದ್ದಾನೆ ಅಂತ ಹೇಳಿದರೆ ನೀವೇನಂತೀರ?

ಇದನ್ನ ನೀವು ಒಪ್ಪೋಕೆ ಸಾಧ್ಯವಿಲ್ಲವಲ್ಲ? ಆದರೆ ನೀವು ನಂಬಿ ಅಥವ ನಂಬದಿರಿ ಇದು ಮಾತ್ರ ಸತ್ಯ. ಹಾಗಾದ್ರೆ ರಾವಣ ಸದ್ಯ ಎಲ್ಲಿದ್ದಾನೆ ಅನ್ನೋ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಈ ರಿಪೋರ್ಟ್ ನ್ನ ಓದಿ.

ರಾಮಾಯಣದಲ್ಲಿ ಸೀತಾ ಮಾತೆಯನ್ನ ರಾವಣನ ಕಪಿಮುಷ್ಟದಿಂದ ಬಿಡಿಸಲು ಶ್ರೀರಾಮ ಹಾಗು ರಾವಣನ ನಡುವೆ ಘನಘೋರ ಯುದ್ಧವೇ ನಡೆದಿತ್ತು. ಈ ಯುದ್ಧದಲ್ಲಿ ರಾಮ‌ ರಾವಣನನ್ನ ವಧಿಸುತ್ತಾನೆ, ಬಳಿಕ ರಾವಣನ ಶವವನ್ನ ಆತನ ತಮ್ಮ ವಿಭೀಷಣನಿಗೆ ಒಪ್ಪಿಸುತ್ತಾನೆ. ಆದರೆ ವಿಭೀಷಣ ರಾವಣನ ಅಂತಿಮ ಸಂಸ್ಕಾರ ಮಾಡಿದನೋ ಇಲ್ಲವೋ ಅನ್ನೋದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಈವರೆಗೂ ರಾವಣನ ಶವ ಏನಾಯ್ತು ಅನ್ನೋದರ ಬಗ್ಗೆ ಎಲ್ಲಿಯೂ ಮಾಹಿತಿ ಸಿಕ್ಕಿಲ್ಲ. ಇದೇ ಕಾರಣದಿಂದ ಪ್ರತಿಯೊಬ್ಬರಿಗೂ ರಾವಣ ಏನಾದ? ಆತನ ಶವ ಏನಾಯ್ತು ಅನ್ನೋದರ ಬಗ್ಗೆ ತಿಳಿಯೋಕೆ ಕಾತುರತೆ ಇದೆ. ರಾವಣ ಸತ್ತಿಲ್ಲ ಆತನ ಶವ ಈಗಲೂ ಸುರಕ್ಷಿತವಾಗಿದೆ ಅಂದರೆ ನೀವು ಅದನ್ನ ನಂಬುವುದಿಲ್ಲ. ಆದರೆ ನಾವಿಂದು ನಿಮ್ಮೆದುರು ಕೆಲ ಪುರಾವೆಗಳನ್ನ ಮುಂದಿಡಲಿದ್ದೇವೆ.

ಶ್ರೀಲಂಕಾದ ರಾಮಾಯಣ ರಿಸರ್ಚ್ ಸೆಂಟರ್ ಹಾಗು ಶ್ರೀಲಂಕಾ ಟೂರಿಸಂ ಮಿನಿಸ್ಟ್ರಿ ಜಂಟಿಯಾಗಿ 50 ಜಾಗಗಳನ್ನ ರಿಸರ್ಚ್ ಮೂಲಕ ಹುಡುಕಿ ತೆಗಿದ್ದಾರೆ, ಈ ಜಾಗಗಳು ರಾಮಾಯಣಕ್ಕೆ ಸಂಬಂಧಿಸಿದ ಜಾಗಗಳಾಗಿವೆ. ಈ ಜಾಗಗಳ ಪೈಕಿ ಒಂದು ಜಾಗದಲ್ಲಿ ರಾವಣ ಇನ್ನೂ ಜೀವಂತವಾಗಿದ್ದಾನೆ ಎಂಬ ಸಾಕ್ಷಿಗಳು ಸಿಕ್ಕಿವೆ. ರ‌್ಯಾಗಲಾ ಎಂಬ ದಟ್ಟ ಕಾಡಿನ ಬೆಟ್ಟಗಳ ಮೇಲಿದ್ದಾನಂತೆ ರಾವಣ. ರಿಸರ್ಚ್‌ನ ಪ್ರಕಾರ ರ‌್ಯಾಗಲಾ ಎಂಬ ಕಾಡಿನಲ್ಲಿ ಎತ್ತರವಾದ ವಿಷಾಲಕಾಯದ ಬೆಟ್ಟವೊಂದರ ಮೇಲೆ ರಹಸ್ಯಮಯ ಗುಹೆಯೊಂದಿದೆ. ಮಾನ್ಯತೆಗಳ ಪ್ರಕಾರ ಈ ಗುಹೆಯೊಳಗೆ ರಾವಣನ ಶವ ಸುರಕ್ಷಿತವಾಗಿದೆಯಂತೆ.

ರಿಸರ್ಚ್‌ನಲ್ಲಿ ತಿಳಿದುಬಂದಿರುವ ವಿಚಾರವೆಂದರೆ ರಾವಣ ಇದೇ ಗುಹೆಯಲ್ಲಿ ಧ್ಯಾನ, ಪೂಜಾಪಾಠ ಮಾಡುತ್ತಿದ್ದನಂತೆ. ರ‌್ಯಾಗಲಾ ದಟ್ಟ ಕಾಡಿನಲ್ಲಿರುವ ಈ ಬೆಟ್ಟ 8 ಸಾವಿರ ಫೀಟ‌ಗಳಷ್ಟು ಎತ್ತರದಲ್ಲಿದ್ದು ಈ ಗುಹೆಯಲ್ಲಿ 17 ಫೀಟ್ ಪೆಟ್ಟಿಗೆಯೊಂದರಲ್ಲಿ ರಾವಣನ ಶವ ಈಗಲೂ ಇದೆಯಂತ ಹೇಳಲಾಗುತ್ತೆ. ಆದರೆ ದಟ್ಟಾರಣ್ಯ ಹಾಗು ಭಯಂಕರ ಕಾಡು ಪ್ರಾಣಿಗಳ ಭಯದಿಂದ ಈ ಗುಹೆಯೊಳಗೆ ಯಾರೂ ಹೋಗೋಕೆ ಆಗಿಲ್ಲ.

ಮತ್ತೆ ಬರ್ತಾನೆ ರಾವಣ

ರಾವಣನನ್ನ ಕೊಂ-ದ ಬಳಿಕ ರಾಮ ವಿಭೀಷಣನಿಗೆ ಲಂಕೆಯ ಜೊತೆಗೆ ರಾವಣನ ಶವವನ್ನೂ ಹಸ್ತಾಂತರಿಸಿದ್ದ. ತನ್ನ ರಾಜ್ಯದ ಆಡಳಿತ ನೋಡಿಕೊಳ್ಳುವ ಜವಾಬ್ದಾರಿಯ ಮಧ್ಯೆ ವಿಭೀಷಣ ರಾವಣನ ಶವ ದಹಿಸುವುದನ್ನ ಮರೆತೆಬಿಟ್ಟಿದ್ದ. ಬಳಿಕ ರಾಕ್ಷಸ ವಂಶದ ಜನ ರಾವಣನ ಶವವನ್ನ ಅಲ್ಲಿಂದ ತೆಗೆದುಕೊಂಡು ಹೋದರು, ಅವರು ರಾವಣನನ್ನ ಜೀವಂತಗೊಳಿಸುವ ಶತಪ್ರಯತ್ನಗಳನ್ನೂ ಮಾಡಿದರು.

ಆದರೆ ಯಾವ ಪ್ರಯೋಜನವೂ ಆಗದಿದ್ದಾಗ ಶವವನ್ನ ಮಮ್ಮಿ ಮಾಡಲು ನಿರ್ಧರಿಸಿ ರಾವಣ ತಪಸ್ಸು ಮಾಡುತ್ತಿದ್ದ ಗುಹೆಯಲ್ಲಿ ಆತನ ಶವವನ್ನ ಕೊಂಡೊಯ್ದರು. ರಾವಣನನ್ನ ಮಮ್ಮಿ ಮಾಡುವುದರಿಂದ ಆತ ಜೀವಂತನಾಗಬಹುದು ಎಂದು ಅವರು ಅಂದುಕೊಂಡಿದ್ದರು.

ರಿಸರ್ಚ್‌ನ ಪ್ರಕಾರ ರ‌್ಯಾಗಲಾ ಕಾಡಿನ ಗುಹೆಯಲ್ಲಿ ರಾವಣನ ಶವ ಈಗಲೂ ಸುರಕ್ಷಿತವಾಗಿದೆ, ಕೆಲಜನರು ಹೇಳುವ ಪ್ರಕಾರ ರಾವಣ ಮತ್ತೆ ಜೀವ ಪಡೆಯುತ್ತಾನೆ ಎಂದು ಹೇಳುತ್ತಾರೆ.

ರಹಸ್ಯಮಯ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ ರಾವಣನ ಶ-ವ

ರಾವಣನ ಶವವಿರುವ ಈ ಪೆಟ್ಟಿಗೆಯನ್ನ ವಿಶೇಷವಾದ ಔಷಧಿಗಳಿಂದ ಲೇಪನೆ ಮಾಡಲಾಗಿದೆಯಂತೆ, ಈ ಲೇಪನದಿಂದಾಗಿ ಶವ ಈಗಲೂ ಸುರಕ್ಷಿತವಾಗಿದೆಯಂತೆ. ಈ ಪೆಟ್ಟಿಗೆ 18 ಫೀಟ್ ಉದ್ದ ಹಾಗು 5 ಫೀಟ್ ಅಗಲವಿದೆಯಂತೆ, ನೀವು ತಿಳಿದಿರುವಂತೆ ಪ್ರಾಚೀನ ಕಾಲದಲ್ಲಿ ಮಮ್ಮಿ ಮಾಡಿ ಶವವನ್ನ ವಿಶೇಷ ಲೇಪನದಿಂದ ಲೇಪಿತಗೊಳಿಸಲಾಗುತ್ತಿತ್ತು.‌ ಥೇಟ್ ಅದೇ ರೀತಿಯಲ್ಲಿ ರಾವಣನ ಶವವನ್ನೂ ತಯಾರು ಮಾಡಲಾಗಿತ್ತು, ಇದರಿಂದಾಗಿ ರಾವಣನ ಶವ ಸುರಕ್ಷಿತವಾಗಿರಲಿ ಎಂಬ ಉದ್ದೇಶ ಅದರ ಹಿಂದಿತ್ತು.

ರಾವಣ ಒಬ್ಬ ಶೈವ ಪಂಥದವನಾಗಿದ್ದ, ಶೈವ ಪಂಥದಲ್ಲಿ ಶವವನ್ನ ಸುಡುವ ಬದಲು ಹೂಳುವ ಪದ್ಧತಿಯಿದೆ. ಕೆಲ ಜನರು ಹೇಳುವಂತೆ ರಾವಣನ ಶವಪೆಟ್ಟಿಗೆಯ ಕೆಳಗಡೆ ರಾವಣನ ಸಂಪತ್ತನ್ನೂ ಇಡಲಾಗಿದೆಯಂತೆ.

ಶಕ್ತಿಶಾಲಿಯಿದ್ದ ರಾವಣ

ಹಿಂದೂ ಧರ್ಮದ ಮಾನ್ಯತೆಗಳ ಪ್ರಕಾರ ರಾವಣ ತ್ರೇತಾಯುಗದ ಶಕ್ತಿಶಾಲಿ ರಾಜನಾಗಿದ್ದ ಹಾಗು ಆತನಿಗೆ ಅಹಂಕಾರ ಸಾಕಷ್ಟಿತ್ತು, ಇದೇ ಅಹಂಕಾರ ಆತನ ಅಂತ್ಯಕ್ಕೂ ಕಾರಣವಾಗಿತ್ತು. ತನ್ನ ಅಹಂಕಾರದ ಕಾರಣದಿಂದಾಗಿಯೇ ರಾವಣ ಸೀತಾಮಾತೆಯನ್ನ ಅಪಹರಿಸಿದ್ದ.

ಶ್ರೀರಾಮ ರಾವಣನಿಗೆ ಸಾಕಷ್ಟು ಬುದ್ಧಿ ಮಾತು ಹೇಳಿದ ಬಳಿಕವೂ ಆತ ಕೇಳದಿದ್ದಾಗ ರಾಮ ಹಾಗು ರಾವಣನ ನಡುವೆ ಘನಘೋರ ಯುದ್ಧವಾಯಿತು. ರಾವಣನ ಬಳಿ ಬಲಿಷ್ಟವಾದ ಸೇನೆಯೇನೋ ಇತ್ತು ಆದರೆ ಆತನ ಅಹಂಕಾರದಿಂದಾಗಿ ಆತನ ವಧೆಯಾಯಿತು. ಈ ಕುರಿತಾದ ಹಲವಾರು ಮಾಹಿತಿಗಳು ಈಗಲೂ ನಮಗೆ ಶ್ರೀಲಂಕಾದಲ್ಲಿ ಕಾಣಸಿಗುತ್ತವೆ. ಸೀತಾಮಾತೆಯನ್ನ ರಾವಣ ಬಂಧಿಸಿಟ್ಟಿದ್ದ ಜಾಗದ ಬಳಿ ಒಂದು ಪುಟ್ಟ ಸರೋವರವಿದೆ, ಅಲ್ಲಿ ಈಗಲೂ ಹನುಮನ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ

ರಾವಣನಿಗೆ ಸಂಬಂಧಿಸಿದ ಇನ್ನಿತರ ಸಾಕ್ಷಿಗಳು

ರಾವಣನ ಗುಹೆ, ಶ್ರೀಲಂಕಾದಲ್ಲಿ ರಾವಣನ ಹೆಸರಿನ ಒಂದು ಗುಹೆಯೂ ಇದೆ, ಇದನ್ನ ‘ಎಲ್ಲಾ’ ಗುಹೆಯೆಂದೂ ಕರೆಯುತ್ತಾರೆ. ಈ ಗುಹೆ ‘ಎಲ್ಲಾ’ ಎಂಬ ಪ್ರದೇಶದಲ್ಲಿರುವಿದರಿಂದ ಇದನ್ನ ‘ಎಲ್ಲಾ’ ಗುಹೆಯೆಂದಲೂ ಕರೆಯುತ್ತಾರೆ. ಬೇಕಾದರೆ ನೀವು ಗೂಗಲ್ ನಲ್ಲಿ Ravana’s Cave ಅಂತ ಸರ್ಚ್ ಮಾಡಿ ಈ ಜಾಗದ ಚಿತ್ರಗಳನ್ನೂ ನೋಡಬಹುದು. ರಾವಣ ತನ್ನ ಕೆಲ ದಿನಗಳನ್ನ ಇದೇ ಗುಹೆಯಲ್ಲಿ ಕಳೆದಿದ್ದ ಅಂತ ಹೇಳಲಾಗುತ್ತದೆ

ಈ ಗುಹೆ ಸಮುದ್ರಮಟ್ಟದಿಂದ 4,490 ಫೀಟ್ ಎತ್ತರದಲ್ಲಿದ್ದು ಈ ಗುಹೆಯನ್ನ ತಲುಪಲು ಒಂದು ದಿನ ಬೇಕಾಗುತ್ತದೆ. ಗುಹೆಗೆ ತಲುಪುವ ದಾರಿ ಸಾಕಷ್ಟು ಕಠಿಣವಾಗಿದ್ದು ಇದನ್ನ ತಲುಪಲು ನೀವು ಪರ್ವತದ ಮಾರ್ಗದ ಮೂಲಕವೇ ತೆರಳಬೇಕು. ಸೀತಾಮಾತೆಯನ್ನ ರಾವಣ ಬಂಧಿಸಿಟ್ಟಿದ್ದ ಅಶೋಕ ವಾಟಿಕಾ ಕೂಡ ಈ ಜಾಗದಿಂದ ಹತ್ತಿರದಲ್ಲೇ ಇದೆ. ಈ ಗುಹೆಯನ್ನ ತಲುಪುವ ದಾರಿ ಕಠಿಣವಾಗಿದೆ, ಈ ಗುಹೆ ದಟ್ಟ ಅರಣ್ಯದಲ್ಲಿರುವ ಕಾರಣ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆಗಳೂ ಇವೆ.

ರಾವಣ ಫಾಲ್ಸ್

ರಾವಣನ ಗುಹೆಯ ಬಳಿಯಲ್ಲೇ ಒಂದು ಫಾಲ್ಸ್ ಇದೆ, ಇದನ್ನ ರಾವಣಾ ಫಾಲ್ಸ್ ಅಂತಲೂ ಕರೆಯುತ್ತಾರೆ. ಈ ರಾವಣಾ ಫಾಲ್ಸ್ ಅಂಡಾಕಾರದ ಬೆಟ್ಟವಾಗಿದ್ದು ಇದು 25 ಮೀಟರ್‌ನಿಂದ ನೀರು ಬೀಳುವ ಫಾಲ್ಸ್ ಆಗಿದ್ದು ಟೂರಿಸ್ಟ್‌ಗಳು ಇಲ್ಲಿಗೆ ಬರುತ್ತಾರೆ. ರಾವಣಾ ಫಾಲ್ಸ್‌ನ ಬಳಿಯಲ್ಲೇ ಸೀತಾಮಾತೆಯ ಹೆಸರಿನ ಸೇತುವೆಯೂ ಇದೆ

ರಾವಣನ ಮೂಲಕ ತಯಾರಿಸಲಾಗಿರುವ ಸುರಂಗ

ಶ್ರೀಲಂಕಾದಲ್ಲಿ ರಾವಣಾಗುಡಾ ಎಂಬ ಹೆಸರಿನ ಜಾಗವಿದೆ, ಇಲ್ಲಿ ನಿಮಗೆ ಹಲವಾರು ಗುಹೆ ಹಾಗು ಸುರಂಗಗಳು‌ ಕಾಣಸಿಗುತ್ತವೆ. ಮಾನ್ಯತೆಗಳ ಪ್ರಕಾರ ಈ ಗುಹೆ ಹಾಗು ಸುರಂಗಗಳು ಲಂಕೆಗೆ ತಲುಪುತ್ತವೆ. ಜನರು ಹೇಳುವ ಪ್ರಕಾರ ಈ ಸುರಂಗ ಮಾರ್ಗಗಳು ಸೌಥ್ ಆಫ್ರಿಕಾವರೆಗೂ ಇವೆಯಂತೆ, ಈ ಸುರಂಗ ಹಾಗು ಗುಹೆಗಳಲ್ಲಿ ರಾವಣ ತನ್ನ ಅಮೂಲ್ಯ ಸಂಪತ್ತನ್ನ ಇಟ್ಟಿದ್ದ ಅಂತಲೂ ಹೇಳುತ್ತಾರೆ.

ರಾವಣ ಈಗಲೂ ಜೀವಂತವಾಗಿದ್ದಾನಾ ಅಥವ ಇಲ್ಲವೋ ಅಂತ ಹೇಳುವುದು ಅಸಾಧ್ಯವೇ ಸರಿ ಆದರೆ ಶ್ರೀಲಂಕಾದ ರಾಮಾಯಣ ರಿಸರ್ಚ್ ಸೆಂಟರ್ ನಡೆಸಿರುವ ರಿಸರ್ಚ್‌ನ ಪ್ರಕಾರ ರಾವಣನ ಶವ ಮಾತ್ರ ಈಗಲೂ ಸುರಕ್ಷಿತವಾಗೇ ಇದೆ.

– Vinod Hindu Nationalist

You might also like

Comments are closed.