ರೇಷನ್ ಕಾರ್ಡ್

ರೇಷನ್ ಕಾರ್ಡ್ ಇಲ್ಲದವರಿಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಒಂದೊಳ್ಳೆ ಅವಕಾಶ…

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

ರೇಷನ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗಿದೆ ಮತ್ತು ಹೊಸದಾಗಿ ರೇಷನ್ ಕಾರ್ಡ್ ಗೆ ಮನೆಯ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ ಹಾಗೂ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಹೆಸರನ್ನು ತೆಗೆಸಬಹುದು. ಈ ಎಲ್ಲಾ ಮಾಹಿತಿಯನ್ನು ಕರ್ನಾಟಕ ಸರ್ಕಾರ ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು. ಆನ್ಲೈನ್ ರೇಷನ್ ಕಾರ್ಡ್ ತಿದ್ದುಪಡಿ ಹೇಗೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೊದಲು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿ ಬ್ರೌಸರ್ ಅಡ್ರೆಸ್ ಬಾರ್ ನಲ್ಲಿ ಆಹಾರ ಡಾಟ್ ಕೆಎಆರ್ ಡಾಟ್ ಎನ್ಐಸಿ ಡಾಟ್ ಇನ್ ಎಂದು ಟೈಪ್ ಮಾಡಿದಾಗ ವೆಬ್ಸೈಟ್ ಓಪನ್ ಆಗುತ್ತದೆ. ಇದು ಆಹಾರ ನಾಗರಿಕ ಸರಬರಾಜು ಇಲಾಖೆಯ ವೆಬ್ ಸೈಟ್ ಆಗಿದ್ದು ಅದರಲ್ಲಿ ಇ-ಸೇವೆಗಳು ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ. ಪೇಜಿನ ಬಲಗಡೆ ಇ-ಪಡಿತರ ಚೀಟಿ ಎಂದು ಇದೆ ಅದರ ಮೇಲೆ ಕ್ಲಿಕ್ ಮಾಡಿದರೆ ಬಹಳ ಆಪ್ಷನ್ ಕಾಣಿಸುತ್ತದೆ ಅದರಲ್ಲಿ ಅಮೆಂಡ್ಮೆಂಟ್ ರಿಕ್ವೆಸ್ಟ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ ಯಾವ ಡಿವಿಜನ್ ನಲ್ಲಿ ಬರುತ್ತದೆ ಎಂದು ತಿಳಿದುಕೊಂಡು, ಆ ಡಿವಿಜನ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಸಿಸ್ಟಮ್ ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕಾದರೆ ಸೆಕ್ಯೂಜನ್ ಇನ್ಸ್ಟಾಲ್ ಆಗಿರಬೇಕು ಮತ್ತು ಅದು ಚಾಲ್ತಿಯಲ್ಲಿರಬೇಕು.

ರೇಷನ್ ಕಾರ್ಡ್ ತಿದ್ದುಪಡಿಗಾಗಿ ಅರ್ಜಿಯನ್ನು 7 ದಿನಗಳೊಳಗೆ ಸಂಪೂರ್ಣವಾಗಿ ಪೂರ್ಣಗೊಳಿಸಬೇಕು. ನಂತರ ಭಾಷೆಯನ್ನು ಸೆಲೆಕ್ಟ್ ಮಾಡಿಕೊಂಡು ಗೋ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ರೇಷನ್ ಕಾರ್ಡ್ ನಂಬರ್ ಕೇಳುತ್ತದೆ. ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿದ ನಂತರ ಗೋ ಎಂಬ ಆಪ್ಷನ್ ಕ್ಲಿಕ್ ಮಾಡಿದರೆ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಲೀಸ್ಟ್ ಬರುತ್ತದೆ ಆದರೆ ಆಧಾರ್ ಕಾರ್ಡ್ ಲಿಂಕ್ ಆಗಿರುವವರ ಹೆಸರು ಮಾತ್ರ ಬರುತ್ತದೆ. ಲೀಸ್ಟ್ ನಲ್ಲಿ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮತ್ತು ಈಗ ಮೊಬೈಲ್ ನಂಬರ್ ಚಾಲ್ತಿಯಲ್ಲಿರುವವರ ಹೆಸರನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಅಥೆಂಟಿಕೇಷನ್ ಟೈಪ್ ನಲ್ಲಿ ಫಿಂಗರ್ ಪ್ರಿಂಟ್ ಸೆಲೆಕ್ಟ್ ಮಾಡಿಕೊಂಡು ಫಿಂಗರ್ ಪ್ರಿಂಟ್ ಕ್ಯಾಪ್ಚರ್ ಆದನಂತರ ಕ್ಯಾಪ್ಚರ್ ಕೋಡ್ ಹಾಕಿದ ನಂತರ ಗೋ ಮೇಲೆ ಕ್ಲಿಕ್ ಮಾಡಿದಾಗ ಸದಸ್ಯರ ಹೆಸರಿನ ಲೀಸ್ಟ್ ಬರುತ್ತದೆ.

ನಂತರ ಮೊಬೈಲ್ ಗೆ ಬರುವ ಓಟಿಪಿ ಮೂಲಕ ಸದಸ್ಯರ ಹೆಸರನ್ನು ಡಿಲೀಟ್ ಮಾಡಬಹುದು ಅಥವಾ ಹೊಸದಾಗ ಸದಸ್ಯರ ಹೆಸರನ್ನು ಸೇರಿಸಬಹುದು. ನಂತರ ಅಕ್ನೊಲೇಜಮೆಂಟ್ ಸ್ಲಿಪ್ ಪ್ರಿಂಟ್ ತೆಗೆದುಕೊಳ್ಳಬೇಕು. ಅಕ್ನೊಲೇಜಮೆಂಟ್ ಸ್ಲಿಪ್ ಅನ್ನು ತಾಲೂಕಿನ ಫುಡ್ ಡಿಪಾರ್ಟ್ಮೆಂಟ್ ಗೆ ಸಲ್ಲಿಸಬೇಕು. ಅವರು ಚೆಕ್ ಲೀಸ್ಟ್ ಕೊಡುತ್ತಾರೆ ನಂತರ ಪ್ರೊಸೆಸ್ ಕಂಪ್ಲೀಟ್ ಮಾಡಿ ಚೆಕ್ ಲೀಸ್ಟ್ ಅನ್ನು ಪುನಃ ಫುಡ್ ಡಿಪಾರ್ಟ್ಮೆಂಟ್ ಗೆ ಸಲ್ಲಿಸಬೇಕು ನಂತರ ತಿದ್ದುಪಡಿ ಆದ ರೇಷನ್ ಕಾರ್ಡ್ ನಿಮಗೆ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಆದಷ್ಟು ಬೇಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.