Important-Notice-from-Govt-for-Ration-Card-Holders.

ರೇಷನ್ ಕಾರ್ಡಿದ್ದವರಿಗೆ ಸರ್ಕಾರದಿಂದ ಮಹತ್ವದ ಸೂಚನೆ…

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

Important Notice From Govt For Ration Card Holders: ವಿಜಯನಗರ: ಬಡತನ ರೇಖೆಗಿಂತ ಕೆಳಗಿರುವ ಜನರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆ ಜಾರಿಗೆ ತಂದಿದೆ.

ಪಡಿತರ ಚೀಟಿದಾರರಿಗೆ (Ration Card Holder) ಕೇಂದ್ರ ಸರ್ಕಾರದಿಂದ ಪ್ರಧಾನಿ ಮೋದಿ (Prime Minister Modi) ಅವರು ಕೋವಿಡ್ ಸಮಯದಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY)ಯನ್ನು ಜಾರಿಗೆ ತಂದು‌ ದೇಶದಲ್ಲಿ ಉಚಿತ ಅಕ್ಕಿ‌ (Free Rice) ನೀಡಲಾಗಿತ್ತು. ಅದೇ ರೀತಿ ಮಾಜಿ ಸಿಎಂ‌ ಸಿದ್ದರಾಮಯ್ಯ ಅವರು ಕೂಡ ಮುಖ್ಯಮಂತ್ರಿಯಾದ ತಕ್ಷಣ ಉಚಿತ ಪಡಿತರ ಘೋಷಿಸಿದ್ದರು.

Chhattisgarh, free rice, bpl families, free rice to bpl families, bpl ration card holders, ration card, free rice scheme | India News – India TV

ಉಚಿತ ಅಕ್ಕಿ ಯೋಜನೆ (Free Rice Scheme) ವಿಸ್ತರಣೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು..ಜನವರಿ-2023ಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಎನ್‍ಎಫ್‍ಎಸ್‍ಎ (NFSA) ಅಡಿಯಲ್ಲಿ ಆಹಾರಧಾನ್ಯ ಹಂಚಿಕೆ ಮಾಡಲಾಗಿದ್ದು, ತಿಂಗಳಾಂತ್ಯದವರೆಗೂ ಪಡಿತರ ಅಕ್ಕಿ ಪಡೆಯಲು ಅವಕಾಶವಿದೆ. ಅಂತ್ಯೋದಯ ಕಾರ್ಡಿಗೆ 35 ಕೆ.ಜಿ ಅಕ್ಕಿ, ಆದ್ಯತಾ ಕಾರ್ಡ್ ಹೊಂದಿದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ.

ಎಪಿಎಲ್ ಪಡಿತರ ಚೀಟಿ (APL Ration Card) ಹೊಂದಿದ ಫಲಾನುಭವಿಗಳಿಗೆ ಪ್ರತಿ ಕೆ.ಜಿಗೆ ರೂ.15 ದರದಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತದೆ. ಪೋರ್ಟೆಬಿಲಿಟಿ ಅವಕಾಶ: ಅಂತರ್ ರಾಜ್ಯ, ಅಂತರ್ ಜಿಲ್ಲೆ ಪೊರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶವಿದೆ.

ಪಡಿತರ ಚೀಟಿದಾರರು ಜನವರಿ ತಿಂಗಳ ಅಂತ್ಯದವರೆಗೂ ಬಯೋಮೆಟ್ರಿಕ್ (Biometric), ಆಧಾರ್ (Aadhar) ಅಥವಾ ಓಟಿಪಿ (OTP) ಮೂಲಕ ಆಹಾರಧಾನ್ಯ ಪಡೆಯಬಹುದಾಗಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...