ಡಿಸೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ರೇಷನ್ ಕಾರ್ಡ್,ಹೊಸ ಆದೇಶ ಜಾರಿ.! ಪಡಿತರ ಚೀಟಿ ಇರುವವರು ತಪ್ಪದೆ ಈ ಕೆಲಸ ತಕ್ಷಣ ಮಾಡಿ.!

ಆಧಾರ್ ಕಾರ್ಡ್ ನಂತೆ ರೇಷನ್ ಕಾರ್ಡ್ ಕೂಡ (Adhar link to Ration card) ಒಂದು ಅಗತ್ಯ ದಾಖಲೆಯಾಗಿದೆ. ಅದರಲ್ಲೂ BPL ಮತ್ತು AAY ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಆನೇಕ ಯೋಜನೆಗಳಲ್ಲಿ ರಿಯಾಯಿತಿ ಸಿಗುತ್ತದೆ.

ಶಾಲಾ ಕಾಲೇಜು ಶುಲ್ಕ, ವೈದ್ಯಕೀಯ ಶುಲ್ಕಗಳಲ್ಲಿ ರಿಯಾಯಿತಿಯಿಂದ ಹಿಡಿದು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ. ಉಚಿತ ವಸತಿ ಯೋಜನೆಗಳು, ರೈತನಿಗೆ ಸರ್ಕಾರದಿಂದ ಸಿಗುವುದು ಸೌಲಭ್ಯ ಸೇರಿದಂತೆ ಇನ್ನೂ ಮುಂತಾದ ಅನೇಕ ಯೋಜನೆಗಳಿಲ್ಲಿ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ (government Schemes Benifits for Ration card holders ).

ಸದ್ಯಕ್ಕೆ ಕರ್ನಾಟಕದಲ್ಲಿಯೇ (Karnataka) ಹೇಳುವುದಾದರೆ ಗೃಹಲಕ್ಷ್ಮಿ ಯೋಜನೆ (Gruhalakshmi) ಹಾಗೂ ಅನ್ನಭಾಗ್ಯ(Annabhagya) ಯೋಜನೆಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ ಮತ್ತು ರೇಷನ್ ಕಾರ್ಡ್ ಗಳಲ್ಲಿರುವ ಮಾಹಿತಿ ಸರಿಯಾಗಿದ್ದು ಕಾರ್ಡ್ ಸಕ್ರಿಯವಾಗಿರಬೇಕಾಗಿದೆ.

ಇಷ್ಟೆಲ್ಲಾ ಪ್ರಾಮುಖ್ಯತೆ ಹೊಂದಿರುವ ರೇಷನ್ ಕಾರ್ಡ್ ಗೆ ಇನ್ನೂ ಸಹ ಅನೇಕರು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ನಾವು ನಮ್ಮ ಬ್ಯಾಂಕ್ ಖಾತೆಗಳಿಗೆ, ಪಾನ್ ಕಾರ್ಡ್ ಗೆ ಹೀಗೆ ಪ್ರತಿಯೊಂದು ಡಾಕ್ಯುಮೆಂಟ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತೇವ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಯೂನಿಕ್ ಆದ ಆಧಾರ್ ಸಂಖ್ಯೆ ಇರುವುದರಿಂದ ರೇಷನ್ ಕಾರ್ಡ್ ಮೂಲಕ ಆತನ ಗುರುತನ್ನು ನಿಖರವಾಗಿ ಪತ್ತೆ ಹಚ್ಚಬಹುದು.

ಇದರಿಂದಾಗಿ ನಕಲಿ ರೇಷನ್ ಕಾರ್ಡ್ ಗಳನ್ನು ಹೊಂದಿರುವವರು ಅಥವಾ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಸ್ಥಾನ ಪಡೆದಿರುವವರು ಇವರುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ರೇಷನ್ ಕಾರ್ಡ್ ನಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರವು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸೂಚಿಸಿತ್ತು ಇದಕ್ಕಾಗಿ ಸೆಪ್ಟೆಂಬರ್ ಅಂತ್ಯದವರೆಗೂ ಕೂಡ ಗಡುವು ನೀಡಿತ್ತು.

ಈಗ ಮತ್ತೊಮ್ಮೆ ಈ ಗಡುವನ್ನು ವಿಸ್ತರಿಸಿದೆ. ಡಿಸೆಂಬರ್ 30ರ ಒಳಗೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಮತ್ತು ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕು ರಾಜ್ಯದಲ್ಲಿರುವ ಅನ್ನಭಾಗ್ಯ ಯೋಜನೆಯಡಿ 10Kg ಪಡಿತರ ನೀಡಬೇಕಿತ್ತು.

ಆದರೆ ದಾಸ್ತಾನು ಲಭ್ಯವಾಗದ ಕಾರಣ 5kg ಅಕ್ಕಿ ಹಾಗೂ ಉಳಿದ 5Kg ಪಡಿತರದ ಬದಲು ಹಣವನ್ನು ನೇರವಾಗಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕಾರ್ಡುಗಳಲ್ಲಿ ಸದಸ್ಯರು ನೋಂದಾಯಿಸಿಕೊಂಡಿದ್ದಾಗ ಸರ್ಕಾರಕ್ಕೆ ಇದರಿಂದ ನ’ಷ್ಟ ಉಂಟಾಗುತ್ತದೆ ಮತ್ತು ಯೋಜನೆಯ ಫಲಾನುಭವಿಗಳಾಗಿರುವವರ ಅಂಕಿ ಅಂಶಗಳ ಮಾಹಿತಿ ಸರಿಯಾಗಿ ಸಿಗುವುದಿಲ್ಲ.

ಈ ಉದ್ದೇಶದಿಂದ ಇದರಲ್ಲಿ ಪಾರದರ್ಶಕತೆ ತರಲು ಕಟ್ಟುನಿಟ್ಟಾದ ನಿರ್ಧಾರಕ್ಕೆ ಸರ್ಕಾರ ಬಂದಿದೆ ಒಂದು ವೇಳೆ ನೀವು ಈ ಸಂದರ್ಭದಲ್ಲಿ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿಲ್ಲ ಎಂದರೆ ನಿಮ್ಮ ಹೆಸರು ರೇಷನ್ ಕಾರ್ಡ್ ಪಟ್ಟಿಯಿಂದ ಕೈ ಬಿಟ್ಟು ಹೋಗಬಹುದು ಅಥವಾ ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ನೀವು ದಂಡ ತೇರಬೇಕಾದ ಪರಿಸ್ಥಿತಿಯು ಕೂಡ ಬರಬಹುದು.

ಹಾಗಾಗಿ ಇಂತಹ ಪರಿಸ್ಥಿತಿ ಬರಬಾರದು ಎಂದರೆ ಈ ಕೂಡಲೇ ಸರ್ಕಾರ ಸೂಚಿಸಿರುವಂತೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

You might also like

Comments are closed.