ಒಂದೇ ಮನೆಯಲ್ಲಿ ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್,ರೇಷನ್ ಕಾರ್ಡ್ ಬಂದ್

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ (Ration card) ವಿಷಯ ಬಾರಿ ಚರ್ಚೆಯಲ್ಲಿ ಇದೆ. ಇದುವರೆಗೂ ಕೂಡ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರು, ಹೆಸರು ತಪ್ಪಾಗಿದ್ದರು, ಮನೆಗೆ ಬಂದ ಹೊಸ ಸದಸ್ಯರ ಹೆಸರು ಸೇರ್ಪಡೆ ಆಗದಿದ್ದರೂ ಅಥವಾ ಮ’ರ’ಣ ಹೊಂದಿದವರ ಹೆಸರನ್ನು ತೆಗೆದುಹಾಕಿಸದೇ ಇದ್ದರೂ.

ರೇಷನ್ ಕಾರ್ಡ್ ಗೆ ಇ-ಕೆವೈಸಿ ಅಪ್ಡೇಟ್ ಮಾಡಿಸದೆ ಇದ್ದರೂ ಎಲ್ಲರೂ ಕೂಡ ಈಗ ಇವುಗಳನ್ನು ಪೂರ್ತಿಗೊಳಿಸಲು ಸರ್ಕಾರಕ್ಕೆ ತಿದ್ದುಪಡಿಗೆ (Correction) ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಯಾಕೆಂದರೆ ಈ ಮಾಹಿತಿಗಳು ತಪ್ಪಾಗಿದ್ದಲ್ಲಿ ಸರ್ಕಾರದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಸಹಾಯಧನ ಫಲಾನುಭವಿಗಳಿಗೆ ತಲುಪುವುದಿಲ್ಲ. ಸರ್ಕಾರ ಕೂಡ ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ಮೂರು ಬಾರಿ ಅವಕಾಶ ನೀಡಿತ್ತು ಈಗ ಮತ್ತೊಮ್ಮೆ ಅಕ್ಟೋಬರ್ ತಿಂಗಳಲ್ಲಿ ಅಕ್ಟೋಬರ್ 6-13ರವರೆಗೂ 9 ದಿನಗಳ ಅವಕಾಶ ನೀಡಿದೆ.

ಇದರ ಜೊತೆಗೆ ತಿದ್ದುಪಡಿ ಮಾಡಿಸುವವರಿಗೆ ಮತ್ತೊಂದು ಶಾ’ಕಿಂ’ಗ್ ವಿಚಾರ ಇದೆ. ಏನೆಂದರೆ ಆಹಾರ ಇಲಾಖೆಗೆ ಅನರ್ಹರು ಕೂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸರ್ಕಾರ ಈಗ ಅವುಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೆ.

ತಿದ್ದುಪಡಿಗೆ ಕೂಡ ಅವಕಾಶ ನೀಡಿರುವುದರಿಂದ ಈ ವೇಳೆ ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ಪಡೆದಿದ್ದವರಿಗೆ ತಿದ್ದುಪಕಡೆ ಅರ್ಜಿ ತಿರಸ್ಕೃತವಾಗುತ್ತದೆ. ಇದರೊಂದಿಗೆ ಆಹಾರ ಇಲಾಖೆಯು (food and civil supply department) ಕೂಡ ಮನೆಮನೆ ಸರ್ವೆ (Servey) ಮಾಡಿ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲು ಮುಂದಾಗಿದೆ.

ಈ ಬಗೆಗೆ ಕೇಳಿ ಬಂದಿರುವ ಮತ್ತೊಂದು ವಿಚಾರವೇನೆಂದರೆ ಗ್ಯಾರೆಂಟಿ ಯೋಚನೆಗಳು ಜಾರಿ ಆದ ಮೇಲೆ ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೇಲೆ ಕುಟುಂಬದ ಯಜಮಾನಿಗೆ 2000ರೂ. ಹಣ ಸಿಗುತ್ತಿರುವುದರಿಂದ, ಹಲವು ಕುಟುಂಬಗಳು ಹೆಚ್ಚು ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿವೆ.

ಸದಸ್ಯರು ರೇಷನ್ ಕಾರ್ಡ್ ನಲ್ಲಿ ಹೆಸರು ತೆಗೆದು ಹಾಕಿಸಿ ಬೇರೆ ರೇಷನ್ ಕಾರ್ಡ್ ಪಡೆದು ಯೋಜನೆಯ ಫಲಾನುಭವಿಗಳು ಆಗಲು ಪ್ಲಾನ್ ಮಾಡುತ್ತಿದ್ದಾರೆ ಅವರಿಗೆಲ್ಲ ಸರ್ಕಾರದ ವತಿಯಿಂದ ಎಚ್ಚರಿಕೆ ನೀಡಲಾಗಿದೆ ಅದೇನೆಂದರೆ, ಒಂದೇ ಕುಟುಂಬದಲ್ಲಿ ಇರುವವರು ಈ ರೀತಿ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವ ಸಲುವಾಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ (New ration card) ಸಲ್ಲಿಸಿದರೆ.

ಈಗಾಗಲೇ ಅವರು ಮತ್ತೊಂದು ರೇಷನ್ ಕಾರ್ಡ್ ನಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ. ಒಂದು ಕುಟುಂಬದಲ್ಲಿ ಅತ್ತೆ ಮಾವ ಗಂಡ ಹೆಂಡತಿ ಮಕ್ಕಳು ಇದ್ದವರು ಅತ್ತೆ ಮಾವ ಬೇರೆ ಕಾರ್ಡ್, ಗಂಡ ಹೆಂಡತಿ ಹಾಗೂ ಮಕ್ಕಳು ಬೇರೆ ಕಾರ್ಡ್ ಗೆ ಸೇರಲು ಪ್ಲಾನ್ ಮಾಡುತ್ತಿದ್ದಾರೆ‌.

ಈ ರೀತಿ ಮಾಡಿದರೆ ಅತ್ತೆ ಹಾಗೂ ಸೊಸೆ ಇಬ್ಬರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಎಂದು ಈ ಐಡಿಯಾ ಮಾಡುತ್ತಿದ್ದಾರೆ. ಆದರೆ ಇದು ನಡೆಯುವುದಿಲ್ಲ, ಯಾಕೆಂದರೆ ಹಣಕಾಸು ಇಲಾಖೆಗೂ ಆಹಾರ ಇಲಾಖೆಗೆ ಸೂಚನೆ ನೀಡಿದೆ ಫಲಾನುಭವಿಗಳ ಸಂಖ್ಯೆ ಹೆಚ್ಚಾದರೆ ಸರಕಾರಕ್ಕೆ ಹೊರೆ ಹೆಚ್ಚಾಗುತ್ತದೆ.

ಹಾಗಾಗಿ ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ತಿಳಿಸಿದೆ. ಆದರೆ ಈಗಾಗಲೇ ಚುನಾವಣೆಗೂ ಮುನ್ನ ಸಲ್ಲಿಕೆಯಾಗಿದ್ದ ಅರ್ಜಿಗಳಾಗಿದ್ದರೆ ಅವುಗಳ ಪರಿಶೀಲನೆ ನಡೆದು ಎಂದಿನಂತೆ ರೇಷನ್ ಕಾರ್ಡ್ ಮಾನದಂಡಗಳ ಮೇಲೆ ಅವುಗಳಿಗೆ ಅನುಮೋದನೆ ನೀಡಿ ಶೀಘ್ರದಲ್ಲೇ ವಿತರಣೆ ಮಾಡಲಾಗುತ್ತದೆ.

You might also like

Comments are closed.