Ration Card Update: ಸರ್ಕಾರದಿಂದ ಈಗ ಹೊಸದೊಂದು ಸುದ್ದಿ ಹೊರಬಿದ್ದಿದೆ. ಸರ್ಕಾರದ ಮಾಹಿತಿ ಪ್ರಕಾರ ಪಡಿತರ ಚೀಟಿಯನ್ನು ಬಳಸದೆ ಇದ್ದರೆ ಶೀಘ್ರದಲ್ಲೇ ಪಡಿತರ ಚೀಟಿ ರದ್ದಾಗುತ್ತದೆ ಎಂಬ ಮಾಹಿತಿ ಸರ್ಕಾರಕ್ಕೆ ತಲುಪಿದೆ.
ಪಡಿತರ ಚೀಟಿ ಬಗ್ಗೆ ಹೊಸ ಸುದ್ದಿ
ನೀವು ಪಡಿತರ ಚೀಟಿದಾರರಾಗಿದ್ದರೆ ಮತ್ತು ಕಳೆದ 1 ವರ್ಷದಿಂದ ಅದನ್ನು ಬಳಸುತ್ತಿಲ್ಲ ಎಂದಾದಲ್ಲಿ, ನಿಮ್ಮ ಪಡಿತರ ಚೀಟಿ ರದ್ದಾಗಲಿದೆ.
ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದ್ದು, ಇದನ್ನು ಪಾಲಿಸಲು ಆಹಾರ ಇಲಾಖೆ ಮನೆ ಮನೆಗೆ ತೆರಳಿ ಪಡಿತರ ಚೀಟಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಜಿಲ್ಲಾ ವೃತ್ತ ಅಧಿಕಾರಿಗಳಿಗೆ ನೀಡಿದೆ. ಈ ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಇದಾದ ನಂತರ ಬಹಳ ದಿನಗಳಿಂದ ಬಳಕೆಯಾಗದ ಪಡಿತರ ಚೀಟಿಗಳು ರದ್ದಾಗಲಿವೆ ಎನ್ನಲಾಗುತ್ತಿದೆ.
ದೆಹಲಿ ಸರ್ಕಾರ ಹೊರಡಿಸಿದ ಮಾರ್ಗ ಸೂಚಿ
ದೆಹಲಿ ಸರ್ಕಾರದ ಪಡಿತರ ಚೀಟಿ ಪರಿಶೀಲನೆಯ ಉದ್ದೇಶವು ಅರ್ಹ ಮತ್ತು ಅಗತ್ಯವಿರುವ ಜನರಿಗೆ ಪಡಿತರ ಚೀಟಿಯ ಪ್ರಯೋಜನವನ್ನು ನೀಡುವುದಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಒಂದು ವರ್ಷದಿಂದ ಪಡಿತರ ಚೀಟಿ ತೆಗೆದುಕೊಳ್ಳದ ಪಡಿತರ ಚೀಟಿದಾರರು ಈ ಯೋಜನೆಯಲ್ಲಿ ಅವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಮತ್ತು ಜಾಗದಲ್ಲಿ ಹೊಸದಾಗಿ ಅರ್ಹರನ್ನು ಸೇರಿಸಿ ಪಡಿತರ ವಿತರಿಸಲಾಗುವುದು ಎನ್ನಲಾಗಿದೆ. 2 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿ ರದ್ದಾಗಲಿವೆ.
ಪಡಿತರ ಚೀಟಿ ರದ್ದು
ವರದಿಗಳ ಪ್ರಕಾರ ಪಡಿತರ ಚೀಟಿ ಹೊಂದಿರುವ ಆದರೆ ಪಡಿತರ ತೆಗೆದುಕೊಳ್ಳದ ಸುಮಾರು 2 ಲಕ್ಷ ಜನರ ಡೇಟಾವನ್ನು ಸರ್ಕಾರ ಕಲೆಹಾಕಿದೆ ಎನ್ನಲಾಗಿದೆ. ಇದಲ್ಲದೆ ಕೆಲವು ಪಡಿತರ ಚೀಟಿದಾರರು ವರ್ಷದಲ್ಲಿ ಒಂದು ಅಥವಾ ಎರಡು ಭಾರಿ ಮಾತ್ರ ಪಡಿತರ ತೆಗೆದುಕೊಳ್ಳುತ್ತಿದ್ದಾರೆ.
ಅಧಿಕಾರಿಗಳು ಈ ಎಲ್ಲ ಪಡಿತರ ಚೀಟಿದಾರರಿಂದ ಮನೆ ಮನೆಗೆ ತೆರಳಿ ಪಡಿತರ ತೆಗೆದುಕೊಳ್ಳದಿರಲು ಕರಣ ಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ ಮತ್ತು ಅವರಿಂದ ಸರಿಯಾದ ಉತ್ತರ ಸಿಗದೆಯಿದ್ದರೆ ಅಂತಹ ಎಲ್ಲ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎನ್ನಲಾಗಿದೆ.