rashmika-syco

ರಶ್ಮಿಕಾ ಮಂದಣ್ಣ ದೊಡ್ಡ ಸೈಕೋ..ಹೀಗೆ ಹೇಳಿದ್ದು ಯಾರು ಗೊತ್ತಾ?

CINEMA/ಸಿನಿಮಾ Entertainment/ಮನರಂಜನೆ

ನಟಿ ರಶ್ಮಿಕಾ ಮಂದಣ್ಣ ಸೈಕೋ ಅಂತೆ ನಿಜಾನಾ..! ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ಜನಪ್ರಿಯ ನಟಿಯಾಗಿ ಮಿಂಚುತ್ತಿರುವ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಾಕಷ್ಟು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ಅವರ ಅಭಿನಯದ ಪುಷ್ಪ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇದರಿಂದಾಗಿ ರಶ್ಮಿಕಾ ಮಂದಣ್ಣ ಅವರ ಸಂಭಾವನೆಯಲ್ಲಿಯೂ ಕೂಡ ಭಾರಿ ಏರಿಕೆ ಮಾಡಿಕೊಂಡಿದ್ದಾರಂತೆ. ಕನ್ನಡ,ತೆಲುಗು, ತಮಿಳು ಇದೀಗ ಹಿಂದಿಯಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತ ಚಿತ್ರರಂಗದಾದ್ಯಂತ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ರಶ್ಮಿಕಾ ಮಂದಣ್ಣ ಅವರು ಒಂದು ಚಿತ್ರಕ್ಕೆ ಬರೋಬ್ಬರಿ ಮೂರು ಕೋಟಿ ಸಂಭಾವನೆ ತೆಗೆದುಕೊಳ್ಳಲಿದ್ದಾರಂತೆ. ಇತ್ತೀಚೆಗೆ ಈ ವಿಚಾರ ಸೌತ್ ಸಿನಿ ರಂಗದಲ್ಲಿ ಭಾರಿ ಸೌಂಡ್ ಮಾಡಿತ್ತು.

Pic Talk - Rashmika Mandanna's juicy show for a Magazine cover

ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರೊಟ್ಟಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿಯೆ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಗೋವಾ ಟ್ರಿಪ್ ಹೋಗಿ ನ್ಯೂ ಇಯರ್ ವೆಲ್ ಕಮ್ ಪಾರ್ಟಿ ಕೂಡ ಮಾಡಿದರು‌. ಅಷ್ಟೇ ಅಲ್ಲದೆ ರೆಸಾರ್ಟ್ ವೊಂದರಲ್ಲಿ ಎಂಜಾಯ್ ಮೂಡ್ ನಲ್ಲಿರುವ ಒಂದಷ್ಟು ಫೋಟೋ ಕೂಡ ಶೇರ್ ಮಾಡಿದ್ದರು. ಅಚ್ಚರಿ ಅಂದರೆ ವಿಜಯ್ ದೇವರಕೊಂಡ ಹಾಗೂ ಅವರ ತಮ್ಮ ಸಹ ಅದೇ ರೆಸಾರ್ಟ್ ನಲ್ಲಿ ಫೋಟೋ ತೆಗೆಸಿಕೊಂಡು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ರಶ್ಮಿಕಾ ಮಂದಣ್ಣ ಅವರು ಸುದ್ದಿ ಆಗಿರುವುದು ವಿಚಿತ್ರವಾಗಿದೆ ಎನ್ನಬಹುದು. ಏಕೆಂದರೆ ದೈಹಿಕ ಸೌಂದರ್ಯ ಫಿಟ್ ನೆಸ್ ಬಗ್ಗೆ ಅಪಾರ ಕಾಳಜಿ ವಹಿಸುವ ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಸಮಯ ಜಿಮ್ ನಲ್ಲಿ ಬೆವರಿಳಿಸುತ್ತಾರೆ. ಅಂತೆಯೇ ಅವರು ಇತ್ತೀಚೆಗೆ ಜಿಮ್ ನಲ್ಲಿದ್ದಾರೆ.
ಅದೂ ಕೂಡ ಒಬ್ಬರೇ. ರಶ್ಮಿಕಾ ಮಂದಣ್ಣ ಜಿಮ್ ಹೋದಾಗಲೆಲ್ಲಾ ಒಬ್ಬರೇ ಇರುತ್ತಾರಂತೆ. ಜಿಮ್ ನಲ್ಲಿ ಒಬ್ಬರೇ ವ್ಯಾಯಾಮ ಮಾಡುವುದು ಅವರಿಗೆ ಒಂದು ರೀತಿ ಸೈಕೋ ಭಾವನೆ ಉಂಟು ಮಾಡುತ್ತದೆಯಂತೆ. ಹಾಗಂತ ರಶ್ಮಿಕಾ ಮಂದಣ್ಣ ತಮ್ಮನ್ನ ತಾವೇ ನಾನು ಜಿಮ್ ನಲ್ಲಿ ಒಬ್ಬಳೇ ವ್ಯಾಯಾಮ ಮಾಡುವ ಸೈಕೋ ಎಂದು ಕ್ಯಾಪ್ಶನ್ ಕೊಟ್ಟು ಒಬ್ಬಂಟಿ ಆಗಿ ಜಿಮ್ ನಲ್ಲಿ ಇರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಹೌದು ನೀವು ನಿಜಕ್ಕೂ ಸೈಕೋನೇ ಎಂದು ವ್ಯಂಗ್ಯ ಟೀಕೆ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಫೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.