
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ಒಂದೆಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿರುವ ನಟಿ. ಅವರ ಫ್ಯಾಷನ್ ಸದಾ ಗಮನ ಸೆಳೆಯುತ್ತಿರುತ್ತದೆ. ಯಾವುದೇ ಸಮಾರಂಭಕ್ಕೆ ಹೋದರೂ ತಮ್ಮದೇ ಆದ ಫ್ಯಾಷನ್ ಸ್ಟೈಲ್‌ನಲ್ಲಿ ಗಮನ ಸೆಳೆಯುತ್ತಾರೆ. ಕೆಲವೊಂದು ಫ್ಯಾಷನ್ ಲುಕ್ ತುಂಬಾನೇ ಗಮನ ಸೆಳೆದರೆ ಇನ್ನು ಕೆಲವು ಡ್ರೆಸ್ಸಿಂಗ್ ಸ್ಟೈಲ್‌ಗಳು ಟ್ರೋಲ್ ಆಗಿದ್ದೂ ಇದೆ.
ಆದರೆ ಟ್ರೋಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ ತಮ್ಮದೇ ಸ್ಟೈಲ್‌ನಲ್ಲಿ ಅವರ ಅಭಿಮಾನಿಗಳ ಮೆಚ್ಚುಗೆ ಪಡೆಯಲು ಸದಾ ಪ್ರಯತ್ನಿಸುತ್ತಾರೆ. ರಶ್ಮಿಕಾ ಅವರ ಡ್ರೆಸ್ಸಿಂಗ್ ನೋಡುವಾಗ ಅವರಿಗೆ ಬ್ಲ್ಯಾಕ್ ಫೇವರೆಟ್ ಕಲರ್ ಇರಬಹುದಾ ಎಂಬ ಡೌಟ್ ಬರುವುದು. ಏಕೆಂದರೆ ಅವರ ಬಹುತೇಕ ಡ್ರೆಸ್ಸಿಂಗ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿದೆ.
ಈ ಡ್ರೆಸ್ಸಿಂಗ್ ನೋಡಿ ತುಂಬಾನೇ ಸ್ಟೈಲಿಷ್ ಆಗಿ ಕಾಣಿಸುತ್ತಿದ್ದಾರಲ್ಲಾ. ತುಂಬಾನೇ ಫ್ಯಾಷನಬಲ್ ಆಗಿರುವ ಈ ಘವನ್ ರಶ್ಮಿಕಾರಿಗೆ ಬೋಲ್ಡ್ ಲುಕ್ ನೀಡಿದೆ. ಈ ಡ್ರೆಸ್ಸಿಂಗ್ ನೋಡಿ ಫುಲ್ ಬ್ಲ್ಯಾಕ್ ಔಟ್ ಫಿಟ್, ಈ ಪಿಕ್‌ಗೆ ಬ್ಲ್ಯಾಕ್ ಹಾರ್ಟ್ ಇಮೋಜಿ ಹಾಕುವ ಮೂಲಕ ಬ್ಲ್ಯಾಕ್ ಕಲರ್ ನನಗೆಷ್ಟು ಇಷ್ಟ ಎಂಬುವುದನ್ನು ವ್ಯಕ್ತ ಪಡಿಸಿದ್ದಾರೆ.
ಸೀರೆಯನ್ನು ಸ್ವಲ್ಪ ವಿಭಿನ್ನವಾಗಿ ಧರಿಸಿ ಅಂದರೆ ಸೆರಗನ್ನು ಸೊಂಟಕ್ಕೆ ಬೆಲ್ಟ್ ರೀತಿಯಲ್ಲಿ ಸ್ಟೈಲಿಷ್ ಆಗಿ ವೇರ್ ಮಾಡಿ ಗಮನ ಸೆಳೆಯುವಲ್ಲಿ ತುಂಬಾ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
Comments are closed.