ರಶ್ಮಿಕ ಮಂದಣ್ಣ ಕನ್ನಡ ಸಿನಿಮಾರಂಗದ ಖ್ಯಾತ ನಟಿಯಾಗಿ ಮಿಂಚಿದವರು. ಮೊದಲ ಸಿನಿಮಾದಲ್ಲಿಯೇ ಕರ್ನಾಟಕದ ಮನೆ ಮಾತಾಗಿ ರಶ್ಮಿಕ ಹೊರ ಹೊಮ್ಮಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಖ್ಯಾತ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತೆರಿಗೆ ಬಂದಿದ್ದು ಮಾತ್ರ ಅವರು ಎಂದಿಗೂ ಮರೆಯಲೇಬಾರದು, ಅವರಿಗೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಲು ಅವಕಾಶ ಅಂದು ಸಿಗದಿದ್ದರೆ, ನಟ ರಕ್ಷಿತ್ ಶೆಟ್ಟಿ ಅವರು ಅವಕಾಶ ಮಾಡಿಕೊಡದಿದ್ದರೆ, ರಶ್ಮಿಕಾ ಅವರು ಇಂದು ಎಲ್ಲಿ ಇರುತ್ತಿದ್ದರೋ ಅವರಿಗೆ ಗೊತ್ತಿಲ್ಲ.. ಜನರ ಪ್ರೀತಿಯನ್ನು ಗಳಿಸಲು ಆಗುತ್ತಿರಲಿಲ್ಲ..ಇಂಡಿಯನ್ ಸಿನಿಮಾ ರಂಗದಲ್ಲಿಯೂ ಕೂಡ ರಶ್ಮಿಕ ಹೆಸರು ಮಾಡಲು ಆಗುತ್ತಿರಲಿಲ್ಲ…ಅದಕ್ಕೆಲ್ಲ ಕಾರಣ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾನೇ ಎಂದು ಹೇಳಬಹುದು…
ಇದಾದ ನಂತರ ರಕ್ಷಿತ್ ಶೆಟ್ಟಿ ಅವರ ಒಟ್ಟಿಗೆ ಪ್ರೀತಿ ಪ್ರೇಮ ಮದುವೆ ಹಂತಕ್ಕೆ ಹೋಗುವ ಮುನ್ನವೇ ಅವರಿಬ್ಬರ ನಡುವೆ ಆದ ಬ್ರೇಕ್ ಅಪ್, ಎಲ್ಲವೂ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ರಶ್ಮಿಕಾ ಮಂದಣ್ಣ ಅವರು ಕೆಲವು ವಿಚಾರಗಳಿಗೆ ಟ್ರೋಲಿಗರಿಗೆ ಒಳ್ಳೆ ಆಹಾರ ಕೂಡ ಆಗಿದ್ದಾರೆ. ಆರಂಭದಲ್ಲಿ ನ್ಯಾಷನಲ್ ಕ್ರಶ್ ಆಗಿದ್ದ ರಶ್ಮಿಕ ಮಂದಣ್ಣ ಇದೀಗ ಸಾಕಷ್ಟು ಅಭಿಮಾನಿ ಬಳಗವನ್ನು ಸಹ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಕರ್ನಾಟಕದಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಆರಂಭದಲ್ಲಿ ಇದ್ದ ಅಭಿಮಾನಿಗಳು ಈಗ ಇಲ್ಲ.
ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಬಾರಿ ಟ್ರೋಲ್ ಕೂಡ ಆಗಿದ್ದಾರೆ.. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕ ಇತ್ತೀಚೆಗೆ ಒಂದು ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದರು.ಹೌದು ಅಭಿಮಾನಿಗಳಿಗೆ ಅವರ ಸ್ಟಾರ್ ನಟ ನಟಿಯರು ಅವರ ಇಷ್ಟದ ಕಲಾವಿದರು ಇದ್ದಕಿದ್ದಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಒಂದು ಕಾರ್ಯಕ್ರಮಕ್ಕೆ ನಮ್ಮ ನಟಿ ಬರುತ್ತಿದ್ದಾರೆ ಎಂದ ತಕ್ಷಣ ಎಲ್ಲಿಲ್ಲದ ಹರುಷ ಸಂತಸ ಅವರಲ್ಲಿ ಉಕ್ಕಿ ಬಿಡುತ್ತದೆ..ಹೌದು ಅವರೊಟ್ಟಿಗೆ ಫೋಟೋ ತೆಗೆದುಕೊಳ್ಳಬೇಕು,
ಅವರೊಟ್ಟಿಗೆ ಮಾತನಾಡಬೇಕು ಹಾಗೆ ಅವರಿಂದ ಏನಾದರೂ ಹೊಸದಾಗಿ ಕಲಿಯಬೇಕು ಎಂದು ತುದಿಕಾಲಲ್ಲಿ ನಿಂತಿರುತ್ತಾರೆ..ಅದೇ ನಿಟ್ಟಿನಲ್ಲಿ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಕಾರ್ಯಕ್ರಮ ಒಂದಕ್ಕೆ ಭೇಟಿ ನೀಡಿದ್ದರು. ಕಾರಿನಿಂದ ಇಳಿದ ತಕ್ಷಣ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿ ಪೆಚಿಗೆ ಸಿಲುಕುವಂತೆ ಮಾಡಿದ್ದಾರೆ..ಜನ ಜಂಗೂಳಿಯಲ್ಲಿ ಹೊರಗೆ ಬರಲು ತುಂಬಾ ಪರದಾಡಿದ ರಶ್ಮಿಕ ಅವರ ಈ ವಿಡಿಯೋ ಎಲ್ಲೆಡೆ ಈಗ ವೈರಲ್ ಆಗುತ್ತಿದೆ.