ಓವರ್ ಆಕ್ಟಿಂಗ್ ಮಾಡಿದ ರಶ್ಮಿಕಾ ಮಂದಣ್ಣ, ಟ್ರೋಲ್ ಮಾಡಿದ ನೆಟ್ಟಿಗರು.

CINEMA/ಸಿನಿಮಾ Entertainment/ಮನರಂಜನೆ

Rashmika Mandanna Over Acting: ಕಿರಿಕ್ ಬೆಡಗಿ ರಶ್ಮಿಕಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತ ಇರುತ್ತಾರೆ. ಇದೀಗ ವಿಜಯ್ ನಟನೆಯ ವಾರೀಸು ಚಿತ್ರದ (Varisu Movie) ಪ್ರಮೋಷನ್ ನಲ್ಲಿ ನಟಿ ರಶ್ಮಿಕಾ ಬ್ಯುಸಿ ಆಗಿದ್ದಾರೆ.

ಇನ್ನು ರಶ್ಮಿಕಾ ನಡೆದು ಬಂದ ದಾರಿಯನ್ನು ಮರೆತ ಕಾರಣಕ್ಕಾಗಿ ಸದಾ ಟ್ರೋಲ್ ಆಗುತ್ತಾ ಇರುತ್ತಾರೆ. ಇದೀಗ ನಟಿ ರಶ್ಮಿಕಾ ಹಾಗೂ ಸಾಯಿ ಪಲ್ಲವಿ ವಿಡಿಯೋ ನೋಡಿ ನೆಟ್ಟಿಗರು ಕಿರಿಕ್ ಬ್ಯೂಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ರಶ್ಮಿಕಾರನ್ನು ನೋಡಿ ಓವರ್ ಆಕ್ಟಿಂಗ್ ಎಂದ ನೆಟ್ಟಿಗರು
ಇನ್ನು ರಶ್ಮಿಕಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ನಟಿಯ ಹಳೆಯ ವಿಡಿಯೋದ ಜೊತೆಗೆ ಸಾಯಿ ಪಲ್ಲವಿ ವಿಡಿಯೋವನ್ನು ಸೇರಿಸಿ ನೆಟ್ಟಿಗರು ಮತ್ತಷ್ಟು ಟ್ರೋಲ್ ಮಾಡುತ್ತಿದ್ದಾರೆ.

Vijay Deverakonda & Rashmika Mandanna
Image Credit: India Today

ರಶ್ಮಿಕಾ ವೈರಲ್ ವಿಡಿಯೋ (Rashmika Viral Video) 
ರಶ್ಮಿಕಾ ಅವರ ಹಳೆಯ ವಿಡಿಯೋದಲ್ಲಿ ರಶ್ಮಿಕಾ ಹಿಮ ಬೀಳುವಂತಹ ಜಾಗದಲ್ಲಿ ನಿಂತು ಶೂಟಿಂಗ್ ಮಾಡುವುದನ್ನು ಕಾಣಬಹುದು. ಇದರಲ್ಲಿ ನಟಿ ಒಂದು ರೌಂಡ್ ಹಾಕಿ ಚಳಿಯಲ್ಲಿ ನಡಗುವುದನ್ನು ಅವರತ್ತ ಹೆಲ್ಫಿನ್ಗ್ ಬಾಯ್ಸ್ ಬಂದು ಜಾಕೆಟ್ ಹಿಡಿಯುದನ್ನು ನೋಡಬಹುದು.

ಇದನ್ನು ನೋಡಿದ ನೆಟ್ಟಿಗರು ಇದು ಸ್ವಲ್ಪ ಜಾಸ್ತಿ ಆಗಿಲ್ವ ಎಂದು ನಟಿಯನ್ನು ಕಾಲೆಳೆಯುತ್ತಿದ್ದಾರೆ. ಹಾಗೆಯೆ ಕೂರ್ಗ್ ನಲ್ಲಿಯೇ ಹುಟ್ಟಿ ಬೆಳೆದ ನಟಿ ರಶ್ಮಿಕಾಗೆ ಸಾಧಾರಣ ಚಳಿ ಅಭ್ಯಾಸವಿರುತ್ತದೆ. ಹಾಗಾಗಿ ನಟಿ ಇದರಲ್ಲಿ ಬೇಕೆಂದೇ ಓವರ್ ಆಕ್ಟಿಂಗ್ ಮಾಡಿದ್ದಾರೆ ಎಂದು ನೆಟ್ಟಿಗರು ರಶ್ಮಿಕಾರನ್ನು ಟ್ರೋಲ್ ಮಾಡುತ್ತಿದ್ದಾರೆ. .

ಸಾಯಿ ಪಲ್ಲವಿ ವೈರಲ್ ವಿಡಿಯೋ (Sai Pallavi Viral Video) 
ಇನ್ನು ನಟಿ ಸಾಯಿ ಪಲ್ಲವಿ ಫಿದಾ ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಮಾಡುವಾಗ ನಟಿ ಹೀರೋ ಜೊತೆ ಹಿಮಪರ್ವತದಲ್ಲಿ ಸೀರೆಯುಟ್ಟು ಡಾನ್ಸ್ ಮಾಡಿದ್ದಾರೆ. ಇನ್ನು ಸಾಯಿ ಪಲ್ಲವಿ ಅಷ್ಟು ಚಳಿ ಇರುವ ಪ್ರದೇಶದಲ್ಲಿ ಡಾನ್ಸ್ ಮಾಡುತ್ತಿರುವಾಗ ರಶ್ಮಿಕಾ ಈ ಸಣ್ಣ ಚಳಿಗೆ ಅಷ್ಟೊಂದು ಓವರ್ ಆಕ್ಟಿಂಗ್ ಬೇಕಿತ್ತಾ ಎಂದು ನೆಟ್ಟಿಗರು ಸಾಯಿ ಪಲ್ಲವಿ ವಿಡಿಯೋಗೆ ರಶ್ಮಿಕಾ ವಿಡಿಯೋವನ್ನು ಹೋಲಿಸಿ ಕಿರಿಕ್ ಬ್ಯೂಟಿಯನ್ನುಟ್ರೋಲ್ ಮಾಡುತ್ತಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ 
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ನಲ್ಲಿ ಇದ್ದಾರೆ ಎಂಬ ಇತ್ಯಾದಿ ಸುದ್ದಿಗಳು ಹೊರ ಬಿದ್ದಿದೆ. ಇತ್ತೀಚಿಗೆ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಾಗ ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ವಿಜಯ್ ದೇವರಕೊಂಡ ದ್ವನಿ ವಿಡಿಯೋದಲ್ಲಿ ಕೇಳಿಸಿರುದರಿಂದ ನಟಿ ಇನ್ನಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ.ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...