ಚಿತ್ರಗಳಲ್ಲಿ ಬೇಡಿಕೆ ಇಲ್ಲದ ರಶ್ಮಿಕಾ ಐಟಂ ಸಾಂಗ್ ಮಾಡುವದಕ್ಕೆ ತೆಗೆದು ಕೊಂಡ ಸಂಭಾವನೆ ಎಷ್ಟು ಗೊತ್ತಾ ? ಯಾರ ಜೊತೆ ನೋಡಿ

CINEMA/ಸಿನಿಮಾ Entertainment/ಮನರಂಜನೆ

ರಶ್ಮಿಕಾ ಮಂದಣ್ಣ ಇತ್ತೀಚಿಗೆ ನಟಿಸಿದ್ದ ಬಾಲಿವುಡ್ ಚಿತ್ರಗಳು ತೋಪಾಗಿವೆ . ಮತ್ತು ಅವರು ಕನ್ನಡಿಗರು ಬಗ್ಗೆ ನಡೆದುಕೊಂಡ ಬಗ್ಗೆ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡ ಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ . ಇಂತಹ ಸಮಯದಲ್ಲಿ ರಶ್ಮಿಕಾ ಅವರು ಒಂದು ಐಟಂ ಸಾಂಗ್ ಮಾಡಲು ಒಪ್ಪಿ ಕೊಂಡಿದ್ದಾರೆ

/news_images/2022/12/rashmika-mandanna1670483784.jpg

ಈಗ ಕಳೆದ ಕೆಲವು ದಿನಗಳಿಂದಲೂ ರಶ್ಮಿಕಾ ಹೊಸ ಸಿನಿಮಾವೊಂದರಲ್ಲಿ ಐಟಂ ಸಾಂಗ್ ಒಂದರ ವಿಚಾರವಾಗಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದ್ದಾರೆ. ಅಲ್ಲದೇ ಒಂದಷ್ಟು ಪ್ರಶ್ನೆಗಳು ಹಾಗೂ ಅನುಮಾನಗಳಿಗೆ ಇದು ಕಾರಣವಾಗಿದೆ.
ಸ್ಟಾರ್ ನಟಿಯರು ಐಟಂ ಹಾಡುಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಉದಾಹರಣೆಗೆ ಪುಷ್ಪ ಸಿನಿಮಾದ ಐಟಂ ಹಾಡಿಗೆ ಹೆಜ್ಜೆ ಹಾಕಿದ ಸಮಂತಾ  ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದರು. ಈಗ ರಶ್ಮಿಕಾ ಮಂದಣ್ಣನಟ ಮಹೇಶ್ ಬಾಬುಹೊಸ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಒಪ್ಪಿದ್ದು, ಈ ಹಾಡಿಗಾಗಿ ನಟಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.
ಹೌದು, ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ರಶ್ಮಿಕಾ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ ಐದು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದಿದ್ದಾರೆ. ಈ ಹಿಂದೆ ಸಮಂತಾ ಪುಷ್ಪಸಿನಿಮಾದಲ್ಲಿ ಹೆಜ್ಜೆ ಹಾಕಲು ಇದೇ ಮೊತ್ತದ ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಈಗ ರಶ್ಮಿಕಾಕೂಡಾ ಅದೇ ಮಟ್ಟದ ಸಂಭಾವನೆ ಪಡೆಯುವ ಮೂಲಕ ತನ್ನ ಬೇಡಿಕೆ ಹೇಗಿದೆ ಎನ್ನುವುದನ್ನು ತೋರಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...