Kannada News: ಪ್ರಸ್ತುತ ಲಕ್ಕಿ ಹೀರೋಯಿನ್ ಎಂದರೆ ರಶ್ಮಿಕಾ ಮಂದಣ್ಣ (Rashmika Mandanna) ಎಂದೇ ಹೇಳಬಹುದು. ಮೊದಲಿಗೆ ಕನ್ನಡ ಚಿತ್ರರಂಗದಿಂದ ನಟನೆಯ ಜರ್ನಿ ಶುರು ಮಾಡಿ, ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ಕರ್ನಾಟಕದ ಕ್ರಶ್ ಎನ್ನಿಸಿಕೊಂಡ ರಶ್ಮಿಕಾ ಮಂದಣ್ಣ, ನಂತರ ಚಲೋ (Chalo) ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಗುರುತಿಸಿಕೊಂಡರು. ನಂತರ ಬಂದ ಗೀತಾ ಗೋವಿಂದಂ ಸಿನಿಮಾ ರಶ್ಮಿಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು, ಯಶಸ್ಸಿನ ನಂತರ ಇವರಿಗೆ ಸ್ಟಾರ್ ಹೀರೋಯಿನ್ ಪಟ್ಟ ಸಿಕ್ಕಿತು. ಮಹೇಶ್ ಅವರಂತಹ ದೊಡ್ಡ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದರು.
ನಂತರ ಪುಷ್ಪ (Pushpa) ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದರು ರಶ್ಮಿಕಾ. ರಶ್ಮಿಕಾ ಅವರು ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರ ಇವರ ಕೆರಿಯರ್ ಗ್ರಾಫ್ ಬದಲಾಯಿಸಿ, ಇನ್ನು ಹೆಚ್ಚಿನ ಅವಕಾಶಗಳು ವಿಶೇಷವಾಗಿ ಬಾಲಿವುಡ್ (Bollywood) ಇಂದ ಹೆಚ್ಚು ಅವಕಾಶ ತಂದುಕೊಡುವುದಕ್ಕೆ ಶುರು ಮಾಡಿತು. ಪ್ರಸ್ತುತ ರಶ್ಮಿಕಾ ಅವರು ಒಂದು ಕಡೆ ಬಾಲಿವುಡ್ ಸಿನಿಮಾಗಳು ಮತ್ತೊಂದು ಕಡೆ, ಜಾಹೀರಾತುಗಳು ಟ್ರಿಪ್ ಗಳು ಎಂದು ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಇದನ್ನು ಓದಿ..

ರಶ್ಮಿಕಾ ಅವರ ಹಿಂದಿ ಸಿನಿಮಾ ಮಿಷನ್ ಮಜ್ನು (Mission Majnu), ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಅವರ ಜೊತೆಗೆ ನಟಿಸಿದ್ದಾರೆ ರಶ್ಮಿಕಾ, ಈ ಸಿನಿಮಾ ಕಾರಣಾಂತರಗಳಿಂದ ಥಿಯೇಟರ್ ನಲ್ಲಿ ತೆರೆಕಾಣದೆ, ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣುತ್ತಿದೆ. ಜನವರಿ 20 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಅವರು ಕಾರ್ಯಕ್ರಮ ಒಂದಕ್ಕೆ ಬಂದಿದ್ದು, ಅದರಲ್ಲಿ ಅವರ ಸೌಂದರ್ಯವನ್ನು ಕ್ಯಾಮೆರಾ ಕಣ್ಣುಗಳು ಕ್ಯಾಪ್ಚರ್ ಮಾಡಿದ್ದು, ಹುಡುಗರು ಇವರ ಬ್ಯೂಟಿ ನೋಡಿ ಫಿದಾ ಆಗಿದ್ದಾರೆ. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೀವು ಒಮ್ಮೆ ಈ ವಿಡಿಯೋ ನೋಡಿ.. ಇದನ್ನು ಓದಿ.