ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಅನ್ನುವುದು ಮುಡಿಗೇರಿದರೆ ಅದು ಜಾಕ್ ಪಾಟ್ ಅಂತಲೇ ಅರ್ಥ. ಯಾರೇ ಒಬ್ಬ ನಟ ಅಥವಾ ನಟಿಗೆ ಬೇಡಿಕೆ ಹೆಚ್ಚಾಗುತ್ತದೋ, ಸಿನಿಮಾ ಆಫರ್ ಗಳು ಒಂದಾದರ ಮೇಲೊಂದರಂತೆ ಬರುತ್ತದೋ, ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತದೋ ನಂತರ ಅವರನ್ನು ಹಿಡಿಯಲು ಸಾಧ್ಯನೇ ಇಲ್ಲ. ಅವರು ತಮ್ಮ ಸಂಭಾವನೆಯನ್ನು ಕೂಡ ಅದೇ ರೀತಿ ಹೆಚ್ಚಿಸಿಕೊಂಡು ಬಿಡುತ್ತಾರೆ. ಅಂತಹವರಲ್ಲಿ ಇದೀಗ ನಟಿ ರಶ್ಮಿಕಾ ಮಂದಣ್ಣ ಕೂಡ ಸೇರಿದ್ದಾರೆ. ಹೌದು, ಮಡಿಕೇರಿ ಕುವರಿ ಮೊತ್ತ ಮೊದಲು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟಿಸಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು.

ಆ ನಂತರ ಕನ್ನಡದಲ್ಲಿ ಪೊಗರು, ಅಂಜನಿಪುತ್ರ, ಚಮಕ್ ಹೀಗೆ ಸಾಲು ಸಾಲು ಸಿನಿಮಾ ಮಾಡಿದರೂ ರಶ್ಮಿಕಾ ಮಂದಣ್ಣ ಅವರು ಫೇಮಸ್ ಆಗಿದ್ದು ಮಾತ್ರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ. ಅಲ್ಲಿ ಒಂದಾದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನೇ ಕೊಡುತ್ತಾ ಬಂದ ರಶ್ಮಿಕಾ ಮಂದಣ್ಣ ಲಕ್ಕಿ ಹಿರೋಯಿನ್ ಅಂತಲೇ ಕರೆಸಿಕೊಂಡರು. ರಶ್ಮಿಕಾ ಅವರನ್ನು ಹಾಕಿ ಸಿನಿಮಾ ಮಾಡಿದರೆ ಅದು ಸೂಪರ್ ಹಿಟ್ ಅನ್ನುವ ಹಾಗಾಯಿತು. ಇನ್ನು ರಶ್ಮಿಕಾ ಅವರು ಅನೇಕ ವಿವಾದ ಗಳಿಗೂ ಗುರಿಯಾಗಿದ್ದಾರೆ.

ಅನೇಕ ಬಾರಿ ಕನ್ನಡತಿಯಾಗಿಯೂ ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೂ ಕಾರಣರಾಗಿದ್ದಾರೆ.ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ಬಾಲಿವುಡ್ ರಂಗದಲ್ಲಿಯೂ ಮಿಂಚುತ್ತಿದ್ದಾರೆ. ಇನ್ನು ಇತ್ತೀಚೆಗೆ ಬಿಡುಗಡೆ ಗೊಂಡ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ದಲ್ಲಿ ನಟಿಸಿದ ನಂತರ ಅಂತೂ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಇದೇ ಕಾರಣದಿಂದ ಇದೀಗ ತಮ್ಮಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು, ಯಾವ ಸ್ಟಾರ್ ನಾಯಕ ನಟನ ಸಂಭಾವನೆಗೆ ಕೂಡಾ ಕಮ್ಮಿ ಇಲ್ಲದಂತೆ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕಿರಿಕ್ ಪಾರ್ಟಿ ನಂತರದ ದಿನಗಳಲ್ಲಿ ಪ್ರತಿ ಸಿನಿಮಾಗೆ 40 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಅಲ್ಲಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯಲು ಪ್ರಾರಂಭಿಸುತ್ತಾರೆ. ಅವರು ತಮ್ಮ ಪೊಗರು ಸಿನಿಮಾಕ್ಕೆ 64 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಆದರೆ ಪುಷ್ಪಾ ಸಿನಿಮಾಕ್ಕೆ ಈಗಾಗಲೇ 1.5 ಕೋಟಿಯಿಂದ 2 ಕೋಟಿ ರೂಪಾಯಿ ವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.