ಈ 4 ರಾಶಿಯವರು ಬೇಗನೆ ಎಮೋಷನಲ್ ಆಗ್ತಾರೆ ಭಾವುಕ ಜೀವಿಗಳು ಇವರ ಗುಣಸ್ವಭಾವ ಹೇಗಿರತ್ತೆ ಗೊತ್ತಾ

ಕೆಲವರು ಯಾವಾಗಲೂ ಅಳುತ್ತಿರುತ್ತಾರೆ ಮತ್ತು ಬೇಗ ಭಾವನಾತ್ಮಕವಾಗುತ್ತಾರೆ ಅವರಿಗೆ ಅಳುಬುರುಕಿ, ಅಳುಬುರುಕ ಎಂದೆಲ್ಲಾ ಕರೆಯುತ್ತಾರೆ ಆದರೆ ಅವರ ಸ್ವಭಾವಕ್ಕೆ ಕಾರಣವಿರುತ್ತದೆ. ನಮ್ಮ ರಾಶಿಯ ಮೇಲೆ ನಮ್ಮ ಸ್ವಭಾವ ನಿರ್ಧಾರವಾಗುತ್ತದೆ. ಯಾವಾಗಲೂ ಎಮೋಷನಲ್ ಆಗಿರುವ ನಾಲ್ಕು ರಾಶಿಗಳು ಯಾವುವು ಹಾಗೂ ಈ ರಾಶಿಯವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಮನುಷ್ಯರಲ್ಲಿ ಬೇರೆ ಬೇರೆ ಸ್ವಭಾವದವರು ಇರುತ್ತಾರೆ. ಕೆಲವರು ಒರಟು ಎನಿಸಿದರೆ, ಇನ್ನೂ ಕೆಲವರು ಮೃದು ಸ್ವಭಾವದವರಾಗಿರುತ್ತಾರೆ. ಮತ್ತೆ ಕೆಲವರು ಹಾಸ್ಯ ಪ್ರಜ್ಞೆಯುಳ್ಳವರು, ಕೆಲವರು ಗಂಭೀರ ಸ್ವಭಾವವನ್ನು ಉಳ್ಳವರು ಹೀಗೆ ನಾನಾ ವ್ಯಕ್ತಿತ್ವವುಳ್ಳವರು ನಮಗೆ ಕಾಣುತ್ತಾರೆ. ಕೆಲವರಿಗೆ ಅವರ ಸ್ವಭಾವ ಬೆಳೆದು ಬಂದ ವಾತಾವರಣದಿಂದ ಬಂದರೂ ಮತ್ತೆ ಕೆಲವರಿಗೆ ಹುಟ್ಟಿನಿಂದಲೆ ಬಂದಿರುತ್ತದೆ. ಇದಕ್ಕೆ ಅವರ ರಾಶಿ ನಕ್ಷತ್ರಗಳು ಸಹ ಕಾರಣವಾಗಿರುತ್ತದೆ. ಅವರವರು ಹುಟ್ಟಿದ ಘಳಿಗೆ ಸಮಯ, ದಿನದ ಆಧಾರದ ಮೇಲೆ ರಾಶಿ,

15 Bad Traits And Characteristics Of A Sagittarius (Man & Woman)

ನಕ್ಷತ್ರಗಳು ನಿರ್ಧರಿತವಾಗುತ್ತದೆ ಹಾಗೆಯೆ ಅವುಗಳ ಆಧಾರದ ಮೇಲೆ ವ್ಯಕ್ತಿಯ ಗುಣ, ಸ್ವಭಾವಗಳನ್ನು ತಿಳಿಯಬಹುದು. ಹೀಗಾಗಿ ಕೆಲವು ರಾಶಿಯವರು ಭಾವುಕ ಜೀವಿಗಳಾಗಿರುತ್ತಾರೆ. ಅವರು ಪ್ರತಿಯೊಂದು ವಿಷಯಕ್ಕೂ ಎಮೋಷನಲ್ ಆಗಿಬಿಡುತ್ತಾರೆ.ಆ ರಾಶಿಗಳು ಯಾವುವೆಂದರೆ ಮೊದಲನೆ ರಾಶಿ ಮೇಷ ರಾಶಿ ಈ ರಾಶಿಯವರು ಮೇಲ್ನೋಟಕ್ಕೆ ಕಲ್ಲಿನಂತೆ ಕಂಡರೂ ಮೇಷ ರಾಶಿಯ ವ್ಯಕ್ತಿಗಳು ಬಹಳ ಭಾವುಕ ಜೀವಿಗಳಾಗಿರುತ್ತಾರೆ, ಎಲ್ಲ ವಿಷಯಗಳಿಗೂ ಭಾವುಕರಾಗುತ್ತಾರೆ. ಇವರು ಇಂಥದ್ದೆ ವಿಷಯಕ್ಕೆ ಭಾವುಕರಾಗುತ್ತಾರೆ ಎಂದು ಹೇಳುವುದು ಕಷ್ಟ. ಕೆಲವೊಂದು ವಿಷಯಗಳಿಗೆ ಅವರಿಗೆ ಗೊತ್ತಿಲ್ಲದಂತೆ ಭಾವನಾತ್ಮಕವಾಗಿ ಸ್ಪಂದಿಸಿಬಿಡುತ್ತಾರೆ.

ಇವರಿಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣವಿದೆ, ಬೇರೆಯವರ ನೋವಿನ ಕಥೆಗಳನ್ನು ಕೇಳಿದರೆ ಇವರು ಸಹ ಮರುಗಿಬಿಡುತ್ತಾರೆ ಅಲ್ಲದೆ ತಮ್ಮನ್ನು ಮನಃಪೂರ್ವಕವಾಗಿ ಪ್ರೀತಿಸುವ ಜನರನ್ನು ಬಯಸುತ್ತಾರೆ. ಇವರು ತಮ್ಮ ನೋವನ್ನು, ಸಂಕಟವನ್ನು ಇತರರ ಬಳಿ ಹೇಳಿಕೊಳ್ಳುವುದು ಕಡಿಮೆ. ಜೊತೆಗೆ ಈ ರಾಶಿಯವರಿಗೆ ತಮ್ಮ ಪ್ರೀತಿಪಾತ್ರರು ಕಷ್ಟಪಡುವುದನ್ನು ನೋಡಲು ಆಗುವುದಿಲ್ಲ ಸಂಕಟ ಪಡುತ್ತಾರೆ. ಇನ್ನೊಂದು ವಿಷಯವೆಂದರೆ ಎದುರಿನವರು ಕಣ್ಣೀರು ಹಾಕಿದರೆ ಇವರು ಸಹ ಕಣ್ಣೀರು ಹಾಕಿಬಿಡುತ್ತಾರೆ.

Will a Sagittarius Man Apologize After Upsetting You? • Astrologify

ಎರಡನೇ ರಾಶಿ ಕರ್ಕಾಟಕ ರಾಶಿ ಈ ರಾಶಿಚಕ್ರದವರು ಸಹ ಬಹಳ ಭಾವನಾತ್ಮಕ ಸ್ವಭಾವದವರು ಆದರೆ ಇವರ ಈ ವ್ಯಕ್ತಿತ್ವವನ್ನು ಬಲ್ಲ ಹಲವು ಜನರು ಲಾಭವನ್ನು ಪಡೆದುಕೊಳ್ಳುತ್ತಾರೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಹೀಗಾಗಿ ಚಂದ್ರನ ಪ್ರಭಾವಕ್ಕೊಳಗಾಗಿ ಭಾವನಾತ್ಮಕವಾಗಿಬಿಡುತ್ತಾರೆ. ಇವರನ್ನು ಹೊರಗಿನಿಂದ ನೋಡಲು ಕಠಿಣ ಸ್ವಭಾವದವರು ಎಂದು ಅನಿಸಿದರೂ, ಹತ್ತಿರ ಹೋಗಿ ನೋಡಿದಾಗಲೆ ಮೃದು ಹೃದಯಿಗಳು ಎಂದು ತಿಳಿಯುತ್ತದೆ. ಇನ್ನೊಬ್ಬರಿಗೆ ಇವರಾಗಿಯೆ ನೋವು ಮಾಡುವ ಸ್ವಭಾವ ಇವರದಲ್ಲ ಇದಲ್ಲದೆ ತಮ್ಮನ್ನು ಪ್ರೀತಿಸುವವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಸಂಬಂಧಗಳಿಗೆ ಅತೀವ ಬೆಲೆ ಕೊಡುವ ಇವರು ಅವರನ್ನು ಪ್ರೊಟೆಕ್ಟ್ ಮಾಡಿಕೊಳ್ಳುತ್ತಾರೆ.ಮೂರನೆ ರಾಶಿ ಕನ್ಯಾ ರಾಶಿ.

ಈ ರಾಶಿಯ ವ್ಯಕ್ತಿಗಳು ಸಹ ಭಾವನೆಗಳೊಂದಿಗೆ ಬದುಕುತ್ತಾರೆ. ಇವರು ಹೃದಯದ, ಮನಸ್ಸಿನ ಮಾತಿಗೆ ಬೆಲೆ ಕೊಡುವವರಾಗಿದ್ದು ತೀರಾ ಬುದ್ಧಿವಂತಿಕೆಯಿಂದ ಯಾವುದೇ ನಿರ್ಣಯವನ್ನು ಕೈಗೊಳ್ಳುವುದಿಲ್ಲ. ಇವರ ಸಮಸ್ಯೆಯೆಂದರೆ ತಮ್ಮ ಭಾವನೆಯನ್ನು ಅಷ್ಟು ಅರ್ಥವಾಗುವ ಹಾಗೆ ವ್ಯಕ್ತಪಡಿಸಲು ಬರುವುದಿಲ್ಲ. ಸಣ್ಣ ಸಣ್ಣ ವಿಷಯಗಳನ್ನು ಸಹ ನೇರವಾಗಿ ಹೃದಯಕ್ಕೆ ತೆಗೆದುಕೊಳ್ಳುವ ಮನಸ್ಥಿತಿಯನ್ನು ಹೊಂದಿರುವ ಇವರು ಬೇಗ ಭಾವನಾತ್ಮಕವಾಗಿಬಿಡುತ್ತಾರೆ ಅಲ್ಲದೆ ಬಹಳ ಸಮಯದವರೆಗೆ ಇದರ ಬಗ್ಗೆ ಯೋಚಿಸುತ್ತಾ ಅಸಮಾಧಾನಗೊಳ್ಳುತ್ತಾರೆ. ಕನ್ಯಾ ರಾಶಿಯು ಬುಧನ ಪ್ರಾಬಲ್ಯವನ್ನು ಹೊಂದಿದೆ ಆದ್ದರಿಂದ ಇದು ಅವರನ್ನು ಮತ್ತಷ್ಟು ಭಾವನಾತ್ಮಕಗೊಳಿಸುತ್ತದೆ ಹೀಗಾಗಿ ಇವರು ಸಣ್ಣ ಸಣ್ಣ ವಿಷಯಗಳಿಗೂ ಯೋಚಿಸುವ, ನಿರ್ಧಾರಗಳನ್ನು ಕೈಗೊಳ್ಳುವ ಗುಣದಿಂದ ತೊಂದರೆಗೊಳಗಾಗುವ ಸಾಧ್ಯತೆಗಳು ಇರುತ್ತದೆ.

9 Keys For Fixing An Unhappy Marriage - The Good Men Project

ನಾಲ್ಕನೇ ಹಾಗೂ ಕೊನೆಯ ರಾಶಿ ಮೀನ ರಾಶಿಚಕ್ರದವರೂ ಸಹ ಬಹಳ ಎಮೋಷನಲ್ ಆಗಿದ್ದಾರೆ. ಇವರು ಒಂದು ಬಾರಿ ಯಾರದ್ದಾದರೂ ಜೊತೆ ಸ್ನೇಹ ಸಂಪಾದಿಸಿದರೆ ಅಥವಾ ಸಂಬಂಧವನ್ನು ಹೊಂದಿದರೆ ಅವರು ಬಿಟ್ಟುಹೋಗದಂತೆ ಜಾಗ್ರತೆ ವಹಿಸುತ್ತಾರೆ. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ ಆದರೆ ಅವರು ತಮ್ಮ ಜೊತೆಗಿರುವ ವ್ಯಕ್ತಿಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಮಾಡುತ್ತಾರೆ. ಮೀನ ರಾಶಿಯು ಗುರು ಗ್ರಹದ ಪ್ರಾಬಲ್ಯಕ್ಕೊಳಪಟ್ಟಿರುತ್ತದೆ ಹೀಗಾಗಿ ಬೇಗ ಸೂಕ್ಷ್ಮಮತಿಗಳಾಗುತ್ತಾರೆ. ಇವರು ಒಮ್ಮೆ ಯಾರನ್ನಾದರೂ ಪ್ರೀತಿಸಿದರೆ ಅವರ ಬಗ್ಗೆಯೆ ಸದಾ ಚಿಂತಿಸುತ್ತಿರುತ್ತಾರೆ. ಇದರಲ್ಲಿ ನಿಮ್ಮ ರಾಶಿ ಇದೆಯಾ ಎಂದು ನೋಡಿಕೊಳ್ಳಿ, ಈ ಮಾಹಿತಿಯನ್ನು ತಪ್ಪದೆ ಮೇಲೆ ಹೇಳಿದ ರಾಶಿಯವರಿಗೆ ತಿಳಿಸಿ.

You might also like

Comments are closed.