ರಮ್ಯಾ

ರಕ್ಷಿತ್ ಶೆಟ್ಟಿ-ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿತ್ತಂತೆ ನೋಡಿ…

CINEMA/ಸಿನಿಮಾ

ತ್ತೀಚಿನ ದಿನಗಳಲ್ಲಿ ರಮ್ಯಾ ಜೊತೆ ಓಡಾಡುತ್ತಿರುವ ಮತ್ತೊಂದು ಹೆಸರು ರಕ್ಷಿತ್ ಶೆಟ್ಟಿ ಅವರದ್ದು. ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿದ ಗಾಸಿಪ್ ಗೆ ಲೆಕ್ಕವಿಟ್ಟವರಿಲ್ಲ. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಹೆಸರು ಚಾಲ್ತಿಯಲ್ಲಿದೆ. ಇಬ್ಬರೂ ಪ್ರೀತಿಸ್ತಾ ಇದ್ದಾರೆ ಎನ್ನುವುದರಿಂದ ಹಿಡಿದು, ಒಟ್ಟಿಗೆ ಇನ್ನೇನು ಸಿನಿಮಾ ಮಾಡಲಿದ್ದಾರೆ ಎನ್ನುವಲ್ಲಿಗೆ ಗಾಸಿಪ್ ಹರಡಿಕೊಂಡಿತ್ತು.ಈ ಕುರಿತು ಮಾಧ್ಯಮವೊಂದರಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾತನಾಡಿದ್ದಾರೆ. ರಮ್ಯಾ ಮತ್ತು ತಮ್ಮ ಜೊತೆಗಿನ ಬಾಂಧವ್ಯವನ್ನು ಅವರು ತೆರೆದಿಟ್ಟಿದ್ದಾರೆ.

Ramya Divya Spandana: ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​ | Fans want ramya and rakshit shetty to get married mdn ...

ಅಸಲಿಯಾಗಿ ಈವರೆಗೂ ರಮ್ಯಾ ಅವರನ್ನು ರಕ್ಷಿತ್ ಮುಖತಃ ಭೇಟಿ ಆಗದೇ ಇದ್ದರೂ, ಕಾಲೇಜು ದಿನಗಳಲ್ಲಿ ರಮ್ಯಾ ಮೇಲೆ ಅವರಿಗೆ ಕ್ರಶ್ ಆಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.ರಮ್ಯಾ ಜೊತೆಗಿನ ಸಿನಿಮಾದ ಬಗ್ಗೆಯೂ ಮಾತನಾಡಿರುವ ರಕ್ಷಿತ್, ‘ಉಳಿದವರು ಕಂಡಂತೆ ಸಿನಿಮಾದಲ್ಲಿ ರಮ್ಯಾ ಅವರೇ ನಾಯಕಿ ಪಾತ್ರ ಮಾಡಬೇಕು ಎನ್ನುವುದು ನನ್ನಾಸೆ ಆಗಿತ್ತು. ಹಾಗಾಗಿ ಅವರಿಗೆ ಕಥೆ ಹೇಳಿದ್ದೆ. ಈ ಸಿನಿಮಾದ ಕಥೆಯು ನನಗೆ ಅರ್ಥವಾಗಲಿಲ್ಲ ಎಂದು ಹೇಳಿ ಒಪ್ಪಿಕೊಳ್ಳಲಿಲ್ಲ. ಆನಂತರ ಮತ್ತೆ ನಾನು ಅವರೊಂದಿಗೆ ಕೆಲಸ ಮಾಡಲಿಲ್ಲ. ಅವರ ಜೊತೆ ಕೆಲಸ ಮಾಡುವ ಆಸೆಯಿದೆ. ಆದರೆ, ಸದ್ಯಕ್ಕಲ್ಲ’ ಎಂದು ಮಾತನಾಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...