ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ತಮ್ಮ ಪಾತ್ರ ಹಾಗೂ ಕಥೆಯ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಮ್ಯಾ,ಕಾತರದಲ್ಲಿ ಅಂಭಿಮಾನಿಗಳು

ಮೋಹಕ ತಾರೆ ರಮ್ಯಾರವರು ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಮೂಲಕ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಅಕ್ಟೋಬರ್ 5 ರಂದು ಆ ಸುದ್ದಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ನಿನ್ನೆಯಷ್ಟೇ ಮೋಹಕ ತಾರೆ ರಮ್ಯಾ ಕಡೆಯಿಂದ ಗುಡ್ ನ್ಯೂಸ್ ವೊಂದು ಹೊರ ಬಿದ್ದಿದೆ. ಅದಲ್ಲದೆ, ರಮ್ಯಾ ಮತ್ತು ರಾಜ್​ ಬಿ. ಶೆಟ್ಟಿ ಕಾಂಬಿನೇಷನ್​ನ ಚಿತ್ರಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಶೀರ್ಷಿಕೆ ಇಡಲಾಗಿದ್ದು, ಈ ಸಿನಿಮಾದ ಶೀರ್ಷಿಕೆಯೂ ಎಲ್ಲರ ಗಮನ ಸೆಳೆಯುತ್ತಿದೆ. ಅಂದಹಾಗೆ, ವಿಜಯ ದಶಮಿ ಪ್ರಯುಕ್ತ ರಮ್ಯಾ ಗುಡ್​ ನ್ಯೂಸ್​ ನೀಡಿದ್ದಾರೆ. ಹೌದು, ರಮ್ಯಾ ಅವರ ಮೊದಲ ಪ್ರೊಡಕ್ಷನ್ ಸಿನಿಮಾ ಸಿದ್ಧವಾಗುತ್ತಿದ್ದು ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿ ನಟಿ ನಿರ್ಮಾಪಕಿ ಮತ್ತು ನಟಿಯಾಗಿ ಕಾಣಿಸುತ್ತಿದ್ದಾರೆ. ಇನ್ನು ನಟಿ ರಮ್ಯಾ ಮತ್ತು ರಾಜ್​ ಬಿ. ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಫೋಟೋ ಗ್ಯಾಲರಿ!

ಇನ್ನು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಬಗ್ಗೆ ಮಾತನಾಡಿರುವ ರಮ್ಯಾರವರು, ‘ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಗೂ ಹಾದಿಗೂ ಯಾವುದೇ ಸಂಭಂದವಿಲ್ಲ. ನಮಗೆ ಆ ವರ್ಡ್ಸ್ ತುಂಬಾ ಇಷ್ಟ ಆಯ್ತು. ಹೀಗಾಗಿ ಇದನ್ನು ರಾಜ್ ಆಯ್ಕೆ ಮಾಡಿರುವುದು. ಅವರು ಟೈಟಲ್ ಹೇಳಿದಾಗ ನನಗೆ ಇಷ್ಟ ಆಯ್ತು.. ಹೀಗಾಗಿ ಆ ಟೈಟಲ್ ರಿಜಿಸ್ಟರ್ ಮಾಡಿದ್ವಿ, ಆ ಸಿನಿಮಾಕ್ಕೆ ಟೈಟಲ್ ತಕ್ಕ ಹಾಗೆ ಇದೆ, ಇದೊಂದು ಪೊಯಟ್ರಿಗ್ ಫಿಲಂ. ಈ ಸಿನಿಮಾ ತುಂಬಾ ಒಳ್ಳೆಯದಿದೆ’ ಎಂದಿದ್ದಾರೆ. ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡಿರುವ ಮೋಹಕ ತಾರೆ ರಮ್ಯಾ, ಇತ್ತೀಚೆಗಷ್ಟೇ ತಮ್ಮ ಸಂಸ್ಥೆಯ ಹೆಸರನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ತಮ್ಮ ಆಪಲ್ ಬಾಕ್ಸ್ ಸಿನಿಮಾ ಸಂಸ್ಥೆಯಿಂದ ಹಲವಾರು ಚಿತ್ರಗಳನ್ನು ಮತ್ತೆ ವೆಬ್ ಸೀರಿಸ್ ಮಾಡುವುದಾಗಿಯೂ ಘೋಷಣೆ ಮಾಡಿದ್ದರು. ಆದಾದ ಬಳಿಕ, ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ನೋಡಲು ಬಂದಿದ್ದ ರಮ್ಯಾ, ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ತಿಳಿಸಿದ್ದರು. ಅವರು ಹೇಳಿದ ಮಾತಿನಂತೆ ನಿನ್ನೆ ಗುಡ್ ನ್ಯೂಸ್ ನೀಡಿದ್ದಾರೆ.

Ramya is back to Social Media

ಇತ್ತೀಚೆಗಷ್ಟೇ ಸಿನಿ ನಟ ನಟಿಯರಿಗೆ ಚಿತ್ತಾರ ಮ್ಯಾಗಜಿನ್ ಕೆಲವೊಂದು ಅವಾರ್ಡ್ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಚಿತ್ತಾರ ಅವಾರ್ಡ್ ಗೆ ಅನೇಕ ಸ್ಟಾರ್ಸ್ ಬಂದಿದ್ದು ಕಾರ್ಯಕ್ರಮಕ್ಕೆ ಬಹಳಷ್ಟು ಮೆರಗು ನೀಡಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ನಿರಂಜನ್ ದೇಶ್ ಪಾಂಡೆ ಬಹಳ ಅದ್ಭುತವಾಗಿ ನಡೆಸಿಕೊಂಡಿದ್ದಾರೆ. ಈ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರಿಗೂ ಕೂಡ ಚಿತ್ತಾರ ಸ್ಟಾರ್ ಐಕಾನ್ ಎಂಬ ಪ್ರಶಸ್ತಿಯು ಒಲಿದು ಬಂದಿತ್ತು. ಅದಲ್ಲದೆ ಚಿತ್ತಾರ ಸ್ಟಾರ್ ಐಕಾನ್ ಅವಾರ್ಡ್ ಸ್ವೀಕರಿಸಿದ ಬಳಿಕ ಮಾತನಾಡಿದ ಮೋಹಕ ತಾರೆ ರಮ್ಯಾ, ಮಾಲಾಶ್ರೀ ಮ್ಯಾಮ್ ನಿಮ್ಮ ಕೈಯಲ್ಲಿ ಅವಾರ್ಡ್ ತಕೊಂಡದ್ದಕ್ಕೆ ಬಹಳ ಖುಷಿ ಆಗ್ತಾ ಇದೆ.

ನಾನು ನಿಮ್ಮ ಅಭಿಮಾನಿ, ನಾನು ಸಿನಿಮಾಗಳನ್ನು ನಾನು ಒಂದು ದಿನ ಹೀರೋಯಿನ್ ಆಗಬೇಕು ಎಂದುಕೊಂಡಿದ್ದೆ. ಈ ದಿನ ನಾನು ತುಂಬಾ ಖುಷಿಯಾಗಿದ್ದೇನೆ. ಈ ಅವಾರ್ಡ್ ಡೆಡಿಕೇಟ್ ಮಾಡುವುದಕ್ಕೆ ದೊಡ್ಡ ಲಿಸ್ಟ್ ಇದೆ. ಮೊದಲನೇಯದಾಗಿ ಡಾ. ರಾಜ್ ಕುಮಾರ್ ಫ್ಯಾಮಿಲಿಗೆ ಡೆಡಿಕೇಟ್ ಮಾಡುತ್ತಿದ್ದೇನೆ. ಅವರಿಂದನೇ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು. ಅದರ ಜೊತೆಗೆ ನನ್ನ ಅಭಿಮಾನಿಗಳು ಇಲ್ಲಿಯ ವರೆಗೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರಿಗೂ ಕೂಡ ಧನ್ಯವಾದಗಳು ಎಂದಿದ್ದರು. ಅದಲ್ಲದೆ, ನಟಿ ರಮ್ಯಾರವರು ಸಿನಿಮಾರಂಗದಲ್ಲಿ ಕೆಲಸ ಮಾಡಿದ ಪ್ರತಿಯೊಂದು ಕ್ಷೇತ್ರದವರನ್ನು ನೆನಪಿಸಿಕೊಂಡಿದ್ದರು.







You might also like

Comments are closed.