RAMYA-MARRIAGE

ಬರೋಬ್ಬರಿ 39 ವರ್ಷ ವಯಸ್ಸು ಆಗಿದ್ದರೂ ನಟಿ ರಮ್ಯ ಇನ್ನು ಮದುವೆಯಾಗದೆ ಕನ್ಯೆಯಾಗಿ ಉಳಿದಿದ್ದೇಕೆ ಗೊತ್ತಾ? ಈ ಒಬ್ಬ ವ್ಯಕ್ತಿಗಾಗಿ ಕಾದು ಕುಳಿತಿದ್ದಾರೆ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಚಿತ್ರರಂಗದ ಅದೆಷ್ಟು ನಟ ನಟಿಯರು ಅಭಿನಯಿಸಿ ಹೋಗಿದ್ದಾರೋ ಲೆಕ್ಕವಿಲ್ಲ. ಆದರೆ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಜಾಗ ಪಡೆದುಕೊಂಡಿರುತ್ತಾರೆ. ಅವರು ಸಿನಿಮಾ ಮಾಡಲಿ ಮಾಡದೆ ಇರಲು ಅವರು ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸಿದ್ದರೆ ಯಾರು ಅವರನ್ನ ಮರೆಯೋಕೆ ಸಾಧ್ಯವೇ ಇಲ್ಲ ಅಲ್ವಾ ! ಅಂದಮೇಲೆ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಮ್ಯಾ ಅವರನ್ನ ಯಾರು ತಾನೇ ಮರೆಯಲು ಸಾಧ್ಯ. ಎರಡು ದಶಕಗಳಷ್ಟು ಸಮಯ ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ್ದ ನಟಿ ರಮ್ಯ ಕನ್ನಡಿಗರ ಅಚ್ಚುಮೆಚ್ಚಿನ ನಟಿ.

ನಟಿ ರಮ್ಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಮೊದಲ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ ‘ಅಭಿ’! ನಟಿ ರಮ್ಯಾ ಅವರು ತಮ್ಮ ಮೊದಲ ಚಿತ್ರದಲ್ಲಿಯೇ ಉತ್ತಮ ಅಭಿನಯದ ಮೂಲಕ ಜನಮನ ಸೂರೆಗೊಂಡರು. ಪುನೀತ್ ರಾಜಕುಮಾರ್ ಹಾಗೂ ರಮ್ಯಾ ಅವರ ಕಾಂಬಿನೇಷನ್ ಜನರಿಗೆ ತುಂಬಾ ಇಷ್ಟವಾಗಿತ್ತು ಅದಾದ ಬಳಿಕ ರಮ್ಯಾ ಪರ್ವ ಆರಂಭವಾಯಿತು. ಒಂದಾದ ಮೇಲಂತೆ ಒಂದು ಹಿಟ್ ಸಿನಿಮಾಗಳನ್ನ ಕೊಡ್ತಾ ಹೋದ್ರು.

ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಿ ರಮ್ಯಾ 2017ರ ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ ಮೊದಲಿಗೆ ಮಂಡ್ಯದಲ್ಲಿ ಎಲೆಕ್ಷನ್ ನಿಂತು ರಾಜಕೀಯ ಜೀವನವನ್ನು ಆರಂಭಿಸಿದರು. ನಂತರ ಐದಾರು ವರ್ಷ ರಾಜಕೀಯದಲ್ಲಿಯೇ ಸೇವೆ ಸಲ್ಲಿಸಿದರು. ಇದೀಗ ರಾಜಕೀಯವನ್ನು ಕೂಡ ತೊರೆದಿರುವ ರಮ್ಯ ಇನ್ನು ಮುಂದೆ ಮತ್ತೆ ಸಿನಿಮಾಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ಒಂದೆರಡು ವರ್ಷಗಳಿಂದ ರಮ್ಯಾ ಹೆಚ್ಚಾಗಿ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಅದಾದ ಬಳಿಕ ಮತ್ತೆ ಸಿನಿಮಾದ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿದ್ದು ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ಹೊಸ ಸಿನಿಮಾಗಳು ಹೊಸ ಪ್ರಯೋಗಗಳು ನಡೆದರು ಅದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಇನ್ನು ಆಗಾಗ ಸೆಲ್ಫಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡಬೇಕು ಎನ್ನುವುದು ಅವರ ಅಭಿಮಾನಿಗಳ ಇದ್ದಾರೆ.

ಇನ್ನು ರಮ್ಯಾ ಅವರು ಕೂಡ ತಮಗೆ ಉತ್ತಮ ಕಥೆ ಸಿಕ್ಕರೆ ಖಂಡಿತ ಮತ್ತೆ ಸಿನಿಮಾ ಮಾಡುತ್ತೇನೆ ಒಂದೊಳ್ಳೆ ಕಥೆಯ ಜೊತೆಗೆ ಮತ್ತೆ ಬರುತ್ತೇನೆ ಅಂತ ಈಗಾಗಲೇ ಹೇಳಿದ್ದಾರೆ. ರಮ್ಯಾ ಅವರಿಗೆ ಇನ್ನೇನು 40ರ ವಸಂತ ಆರಂಭವಾಗಲಿದೆ ಆದರೂ ನೋಡುವುದಕ್ಕೆ ತುಂಬಾನೇ ಫಿಟ್ ಹಾಗೂ ಸೂಪರ್ ಆಗಿರುವ ರಮ್ಯಾ ಇದುವರೆಗೆ ಯಾಕೆ ಮದುವೆಯಾಗಿಲ್ಲ ಅನ್ನೋದು ಹಲವರ ಕುತೂಹಲ.

ಇತ್ತೀಚೆಗೆ ‘ಮೇ ಬಿ ಮೈ ಸೋಲ್ ಮೇಟ್ ಡೈಡ್’ ಎನ್ನುವ ಇಂಗ್ಲಿಷ್ ಹಾಡಿಗೆ ಇನ್ ಆಕ್ಟ್ ಮಾಡಿದ್ರು. ನೀವು ಇನ್ನು ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಎಂಬಂತೆ ಈ ಪೋಸ್ಟ್ ಹಾಕಿದ್ದಾರೆ. ನನ್ನ ಸೋಲ್ಮೆಟ್ ಬಹುಶ: ಸತ್ತಿರಬಹುದು ಎನ್ನುವ ಹಾಡಿಗೆ ಲಿಪಿಸಿಂಗ್ ಮಾಡಿದ್ದಾರೆ ರಮ್ಯಾ. ಅದೇನೇ ಆಗಿರಲಿ ಸ್ಯಾಂಡಲ್ ವುಡ್ ಕ್ವೀನ್ ಆಗಿರುವ ರಮ್ಯಾ ಇವತ್ತಿಗೂ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ರೆ ನಿರ್ಮಾಪಕರು ಅವರ ಕಾಲ್ ಶೀಟ್ ಗಾಗಿ ಕ್ಯೂ ನಿಲ್ಲಬೇಕಾದೀತು!

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...