ಮೋಹಕ ತಾರೆ ರಮ್ಯಾ (Ramya) ಸಿನಿಮಾರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಿನಿಮಾದ ಕೆಲಸದ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಫ್ಯಾನ್ಸ್ ಗಳ ಗಮನ ಸೆಳೆಯುವ ನಟಿ ರಮ್ಯಾ ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ.
ಶಾಟ್ಸ್ ತೊಟ್ಟು ಡ್ಯಾನ್ಸ್ ಮಾಡಿದ ಮೋಹಕ ತಾರೆ ರಮ್ಯಾ
ರಮ್ಯಾ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ನಟಿ ಬ್ಲಾಕ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ. ಈ ವಿಡಿಯೋಗೆ ಅವರು ‘Endorphins’ (ಎಂಡೋರ್ಫಿನ್ಸ್) ಎಂದು ಕ್ಯಾಪ್ಶನ್ ನೀಡಿದ್ದಾರೆ. ಜಿಮ್ ಮುಗಿಸಿ ಈ ವಿಡಿಯೋ ಮಾಡಿದ್ದು, ಇದರಲ್ಲಿ ನಟಿ ರಮ್ಯಾ ವಾಷ್ರೂಂನ ಕನ್ನಡಿ ಎದುರು ಡಾನ್ಸ್ ಮಾಡಿದ್ದಾರೆ. ನಟಿ ರಮ್ಯಾ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳು ಮಾಡುತ್ತಿದ್ದಾರೆ. ‘ನೀವು ಯಾವಾಗಲೂ ಸುಂದರಿ’ ಎಂದು ಕೆಲವರು ಕಮೆಂಟ್ ಮಾಡಿದರೆ, ಕೆಲವರು, ‘ಸಖತ್ ಗ್ಲಾಮರಸ್ ನೀವು’ ಎಂದಿದ್ದಾರೆ.
ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ ರಮ್ಯಾ
ನಟಿ ರಮ್ಯಾರವರು ರಾಜ್ ಬಿ ಶೆಟ್ಟಿ (Raj B Shetty) ಯವರ ಸಿನಿಮಾದ ಮೂಲಕ ಮತ್ತೆ ಸಿನಿ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ 5 ರಂದು ಮತ್ತೆ ಸಿನಿ ಜರ್ನಿ ಶುರು ಮಾಡುವ ಬಗ್ಗೆ ಗುಡ್ ನ್ಯೂಸ್ ನೀಡಿದ್ದರು. ರಾಜ್ ಬಿ. ಶೆಟ್ಟಿ ಕಾಂಬಿನೇಷನ್ನ ಚಿತ್ರಕ್ಕೆ ನಿರ್ಮಾಪಕಿ (Producer) ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಡಾಲಿ ಧನಂಜಯ್ (Dali Dhanjay) ಜೊತೆ ರಮ್ಯಾ ಉತ್ತರಕಾಂಡ (Uttarakanda) ಸಿನಿಮಾ ಮಾಡುತ್ತಿದ್ದಾರೆ. ರಮ್ಯಾ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ಚಿತ್ರದ ಬಗ್ಗೆ ಬಾರಿ ನಿರೀಕ್ಷೆಯಿದೆ.
View this post on Instagram