ನಮಸ್ಕಾರ ವೀಕ್ಷಕರೇ ಕೆಲ ಸೆಲೆಬ್ರೆಟಿಗಳಿಗೋಸ್ಕರ ಆಯೋಜಿಸಿದ್ದ ತ್ರಿಬಲ್ ಸೆವೆನ್ ಚಾರ್ಲಿ ವಿಶೇಷ ಶೋನಲ್ಲಿ ರಮ್ಯಾ ಭಾಗಿಯಾಗಿದ್ದಾರೆ. ಅವರಿಗೆ ಸಿನಿಮಾ ಸಾಕಷ್ಟು ಇಷ್ಟವಾಗಿದೆ. ನಟಿ ರಮ್ಯಾ ಅವರು ನಟನೆ ಹಾಗೂ ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ.ಅವರು ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಇದನ್ನು ರಮ್ಯಾ ಅವರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಯಾವ ತಂಡದ ಮೂಲಕ ಅವರು ಕಂಬ್ಯಾಕ್ ಮಾಡಲಿದ್ದಾರೆ ಎನ್ನುವುದು ಇನ್ನೂ ಗುಟ್ಟಾಗಿಯೇ ಇದೆ .
ಈಗ ಅವರು ರಕ್ಷಿತ್ ಶೆಟ್ಟಿ ನಟನೆಯ ತ್ರಿಬಲ್ ಸೆವೆನ್ ಚಾರ್ಲಿ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ತಂಡಕ್ಕೆ ಅವರು ಶುಭಹಾರೈಸಿದ್ದಾರೆ.ರಮ್ಯಾ ಅವರು ನಟನೆಯಿಂದ ದೂರ ಉಳಿದಿದ್ದಾರೆ ನಿಜ. ಆದರೆ ಸಿನಿಮಾರಂಗದ ನಡುವಿನ ಜೊತೆಗಿನ ನಂಟನ್ನು ಕಳೆದುಕೊಂಡಿಲ್ಲ. ಅವರು ಹಲವು ಸಿನಿಮಾಗಳನ್ನು ಬೆನ್ನುತಟ್ಟಿದ್ದಾರೆ. ಮೊದಲು ಅನೇಕ ಸಿನಿಮಾಗಳಿಗೆ ಅವರು ಪ್ರೋತ್ಸಾಹ ನೀಡಿದ್ದರು. ಈಗ ತ್ರಿಬಲ್ ಸೆವೆನ್ ಚಾರ್ಲಿ ಸಿನಿಮಾ ಗೂ ಕೂಡ ಕೂಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಟಿ ರಮ್ಯಾ ಅವರಿಗೆ ಶ್ವಾನ ಎಂದರೆ ತುಂಬಾನೇ ಇಷ್ಟ. ಬೆಂಗಳೂರಿನಲ್ಲಿ ಬೀದಿಬದಿಯ ನಾಯಿಯನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದಾಗ ಇದನ್ನು ಅವರು ವಿರೋಧಿಸಿದ್ದರು. ಈ ಪ್ರತಿಭಟನೆಯಲ್ಲಿ. ಅವರು ಕೂಡ ಭಾಗಿಯಾಗಿದ್ದರು. ಈಗ ಶ್ವಾನದ ಬಗ್ಗೆ ತ್ರಿಬಲ್ ಸೆವೆನ್ ಚಾರ್ಲಿ ರೆಡಿಯಾಗಿದೆ .ಹೀಗಾಗಿ ಅವರು ತುಂಬಾನೇ ಇಷ್ಟ ಪಟ್ಟು ಸಿನಿಮಾವನ್ನು ವೀಕ್ಷಿಸಿದ್ದಾರೆ. ತ್ರಿಬಲ್ ಸೆವೆನ್ ಚಾರ್ಲಿ ಎಮೋಷನಲ್ ಸಿನಿಮಾ. ಪ್ರತಿಯೊಬ್ಬರು ನೋಡಬೇಕಾದ ಚಿತ್ರವಿದು. ಇಂಥದೊಂದು ಅದ್ಭುತ ವಿಚಾರವಿರುವ ಅಂತಹ ಸಿನಿಮಾವನ್ನು ಕೊಟ್ಟಿರುವ ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಹಾರೈಕೆ ಎಂದು ರಮ್ಯ ಹೇಳಿದ್ದಾರೆ.
ರಮ್ಯಾ ಅವರ ಧನಾತ್ಮಕ ಪ್ರತಿಭೆಯಿಂದ ಚಿತ್ರತಂಡಕ್ಕೆ ಹೊಸ ಬಲ ಸಿಕ್ಕಿದಂತೆ ಆಗಿದೆ. ರಮ್ಯಾ ಅವರ ದೊಡ್ಡ ಫ್ಯಾನ್ ನಾನು ಎಂದು ರಕ್ಷಿತ್ ಶೆಟ್ಟಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈಗ ರಮ್ಯಾ ಅವರಿಂದ ತ್ರಿಬಲ್ ಸೆವೆನ್ ಚಾರ್ಲಿ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ರಕ್ಷಿತ್ ಶೆಟ್ಟಿ ಕೊಡ ಖುಷಿಯಾಗಿದ್ದಾರೆ.ತ್ರಿಬಲ್ ಸೆವೆನ್ ಚಾರ್ಲಿ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಬಿಜಿಯಾಗಿದ್ದಾರೆ. ಜೂನ್ ಹತ್ತಕ್ಕೆ ಈ ಸಿನಿಮಾ ಕನ್ನಡ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸಾಗುತ್ತಿದೆ..ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.