ನಟಿ ರಮ್ಯಾ ಆತ್ಮೀಯವಾಗಿ ಅಪ್ಪಿಕೊಂಡಿರುವ ಈತ ನಿಜಕ್ಕೂ ಯಾರು ಗೊತ್ತಾ..

CINEMA/ಸಿನಿಮಾ

ಕನ್ನಡ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಎವರ್ ಗ್ರೀನ್ ನಟಿ ಮೋಹಕ ತಾರೆ ನಟಿ ರಮ್ಯಾ ಅವರು ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದ್ದು ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ.. ಇದೀಗ ಹುಡುಗನೊಬ್ಬನ ಜೊತೆ ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೋವೊಂದನ್ನು ಖುದ್ದು ರಮ್ಯಾ ಅವರೇ ಹಂಚಿಕೊಂಡಿದ್ದಾರೆ.. ಸಧ್ಯ ಇದೀಗ ಈ ಹುಡುಗ ಯಾರು ರಮ್ಯಾ ಅವರು ಏನಾದರೂ ಮದುವೆ ಆಗೋ ಮನಸ್ಸು ಮಾಡಿದ್ದಾರಾ ಎಂದೆಲ್ಲಾ ಕುತೂಹಲ ಅಭಿಮಾನಿಗಳಲ್ಲಿ‌ ಮೂಡಿದ್ದು ಸಧ್ಯ ಇದಕ್ಕೆಲ್ಲಾ ಉತ್ತರ ದೊರೆತಿದೆ..

ಹೌದು ನಟಿ ರಮ್ಯಾ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರೀಯರಾಗಿರುವ ಸಮಯದಲ್ಲಿಯೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಂಸದರೂ ಕೂಡ ಆಗಿ.. ಕೊನೆಗೆ ಹೆಚ್ಚು ವರ್ಷಗಳ ಕಾಲ ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗದೇ ಮರಳಿ ತಾಯ್ನಾಡಿಗೆ ಬಂದಿದ್ದಾರೆ.. ಮತ್ತೆ ಸಿ‌ನಿಮಾ ಇಂಡಸ್ಟ್ರಿ ಕಡೆ ಮುಖ ಮಾಡಿರುವ ರಮ್ಯಾ ಅವರು ಸಿನಿಮಾ ಮೂಲಕ ಮತ್ತೆ ಕಂ ಬ್ಯಾಕ್ ಮಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿದೆ.. ಅದೇ ಕಾರಣಕ್ಕೆ ಕಳೆದ ಕೆಲ ತಿಂಗಳುಗಳಿಂದ ಸಿನಿಮಾ ಸಂಬಂಧಪಟ್ಟ ಸಾಕಷ್ಟು ಕಾರ್ಯಕ್ರಮಗಳಲ್ಲಿ ರಮ್ಯಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ..

ಆಡಿಯೋ ರಿಲೀಸ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ.. ಅವಾರ್ಡ್ ಕಾರ್ಯಕ್ರಮ.. ಹೀಗೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ರಮ್ಯಾ ಅವರು ಪಾಲ್ಗೊಳ್ಳುತ್ತಿದ್ದು ಕನ್ನಡ ಸಿನಿಮಾ‌ ಇಂಡಸ್ಟ್ರಿಯ ಸ್ನೇಹಿತರಾದ ನಟಿ ಅಮೃತಾ ಐಯ್ಯಾಂಗಾರ್.. ಕೃಷಿ ತಾಪಂಡ.. ಹೀಗೆ ಆತ್ಮೀಯ ಸ್ನೇಹಿತರ ಜೊತೆ ಹುಟ್ಟುಹಬ್ಬದ ಪಾರ್ಟಿ ಸಂತೋಷ ಕೂಡಗಳು ಹೀಗೆ ಸಮಯ ಕಳೆಯುತ್ತಿದ್ದಾರೆ..ಇನ್ನು ಇದೆಲ್ಲದರ ನಡುವೆ ರಮ್ಯಾ ಅವರು ಮೊದಲ‌ಬಾರಿಗೆ ರಾಜಕೀಯಕ್ಕೆ ಎಂಟ್ರಿ ಆಗುವ ಸಮಯದಲ್ಲಿಯೇ ಅವರ ಮದುವೆ ನಿಶ್ಚಯವಾಗಿದ್ದು ರಾಜಕೀಯಕ್ಕೆ ಹೋದ ನಂತರ ಆ ಮದುವೆ ವ್ಯಯಕ್ತಿಕ ಕಾರಣಗಳಿಂದ ಮುರಿದು ಬಿದ್ದಿತ್ತು..

ಇನ್ನು ಅದಾದ ಬಳಿಕ ಮದುವೆ ಬಗ್ಗೆ ಎಲ್ಲಿಯೂ ಮಾತನಾಡದ ರಮ್ಯಾ ಅವರು ಕೆಲ ವರ್ಷದ ಹಿಂದಷ್ಟೇ ಆದ್ಯಾತ್ಮದ ಕಡೆಗೆ ಒಲವು ಮೂಡಿಸಿಕೊಂಡು ಅದನ್ನು ವ್ಯಾಸಂಗ ಮಾಡುವ ಸಲುವಾಗಿ ಆಧ್ಯಾತ್ಮದ ಕಾಲೇಜಿಗೂ ಸಹ ಸೇರಿಕೊಂಡಿದ್ದರು.. ಇನ್ನು ಇದೆಲ್ಲವನ್ನು‌‌ ನೋಡಿದ ಅಭಿಮಾನಿಗಳು ಆಧ್ಯಾತ್ಮದ ಬಗ್ಗೆ ಬಹಳ ಹತ್ತಿರವಾಗಬೇಡಿ.. ನೀವು ಸಹ ಮದುವೆಯಾಗಿ ಸಂತೋಷವಾಗಿರಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದರು.. ಇನ್ನು ಸಧ್ಯ ಇದೀಗ ಕಳೆದ ವರ್ಷ ರಮ್ಯಾ ಅವರು ಬೆಂಗಳೂರಿಗೆ ಮರಳಿದ್ದು ಚಿತ್ರರಂಗಕ್ಕೆ ಮರಳುವ ಪ್ಲಾನ್‌ ಮಾಡಿದ್ದಾರೆ ಎನ್ನಲಾಗಿದೆ.. ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಆಕ್ಟೀವ್ ಇರುವ ರಮ್ಯಾ ಅವರು ಆಗಾಗ ಪೋಸ್ಟ್ ಗಳನ್ನು ಹಾಕುತ್ತಿದ್ದು ಅಭಿಮಾನಿಗಳು ಹಾಗೂ ಸಿನಿಮಾ ಸ್ನೇಹಿತರ ಜೊತೆ ಬೆರೆಯುತ್ತಿದ್ದಾರೆ.. ಇನ್ನು ಇದೀಗ ಈ ಎಲ್ಲಾ ವಿಚಾರಗಳ ನಡುವೆ ಮತ್ತೆ ರಮ್ಯಾ ಅವರ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ..

ಹೌದು ಇದಕ್ಕೆಲ್ಲಾ ಕಾರಣ ನಟಿ ರಮ್ಯಾ ಅವರು ಹಂಚಿಕೊಂಡಿರುವ ಫೋಟೋ.. ಹೌದು ರಮ್ಯಾ ಅವರು ಮೊನ್ನೆಯಷ್ಟೇ ವ್ಯಕ್ತಿಯೊಬ್ಬರ ಜೊತೆ ಬಹಳ ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡಿದ್ದರು.. ಇನ್ನು ಈ ಫೋಟೋ ಅವರ ಅಭಿಮಾನಿ ಪುಟಗಳಲ್ಲಿಯೂ ರಾರಾಜಿಸುತಿತ್ತು.. ಫೋಟೋ ನೋಡಿದ ಅಭಿಮಾನಿಗಳು ಅವರಿಬ್ಬರ ನಡುವಿನ ಆರ್ಮೀಯತೆಯನ್ನು ನೋಡಿ ಇದೇ ಹುಡುಗನನ್ನು‌ ಮದುವೆಯಾಗಬಹುದು ಎನ್ನುತ್ತಿದ್ದು ಕೆಲವರು ಶುಭಾಶಯವನ್ನೂ ತಿಳಿಸಿದ್ದಾರೆ..

ಇದನ್ನೂ ಓದಿ >>>  ಸೊಸೆಯನ್ನು ಮ-ಗಳ ತರಹ ನೋಡಿಕೊಳ್ಳುತ್ತಿರುವ ಈ ಆತ್ತೆಗೆ ಒಂದು ಮೆಚ್ಚುಗೆ ನೀಡಿ ಗೌರವಿಸಿ,ವೀಡಿಯೊ ನೋಡಿ...

ಆದರೆ ಅಷ್ಟಕ್ಕೂ ಈ ಹುಡುಗ ಯಾರು.. ಹೌದು ಈತನ ಹೆಸರು ಕರಣ್ ಜೋಷಿ ಎಂದು ತಿಳಿದು ಬಂದಿದೆ.. ಈತ ರಮ್ಯಾ ಅವರ ಆಪ್ತ ಗೆಳೆಯರಲ್ಲಿ‌ ಒಬ್ಬರಾಗಿದ್ದು ರಮ್ಯಾ ಅವರು ಈ ಫೋಟೋ ಹಂಚಿಕೊಳ್ಳುವುದರ ಹಿಂದಿನ ಉದ್ದೇಶ ಏನೆಂಬುದನ್ನು ಸಧ್ಯ ರಮ್ಯಾ ಅವರೇ ಸ್ಪಷ್ಟ ಪಡಿಸಬೇಕಿದೆ.. ಯಾವುದೇ ಕ್ಯಾಪ್ಶನ್ ನೀಡದೇ ಫೋಟೋ ಹಂಚಿಕೊಂಡಿದ್ದು.. ಕರಣ್ ಜೋಷಿ ಅವರ ಜೊತೆ ಮದುವೆಯ ನಿರ್ಧಾರವೇನಾದರೂ ಮಾಡಿದ್ದಾರ ಎಂಬ ಕುತೂಹಲ ಮೂಡಿಸಿದ್ದಾರೆ.. ಒಟ್ಟಿನಲ್ಲಿ ಯಾರೇ ಇರಲಿ ಯಾರೇ ಬರಲಿ ರಮ್ಯನಂತೆ ಮತ್ತೊಬ್ಬರಿಲ್ಲ ಎನ್ನುತ್ತಾ ದಶಕದ ಕಾಲ ಚಿತ್ರರಂಗದಲ್ಲಿ ಮೋಹಕ ತಾರೆಯಾಗಿ ಕಾಣಿಸಿಕೊಂಡ ರಮ್ಯಾ ಅವರು ಸಧ್ಯ ಈ ಸಮಯದಲ್ಲಿ ಇದೀಗ ಮದುವೆ ಮನಸ್ಸು ಮಾಡಿದ್ದರೆ ಆ ಹುಡುಗ ಈ ಕರಣ್ ಜೋಷಿ ಅವರೇನಾ ಎನ್ನುವುದನ್ನು ಬಹಿರಂಗ ಪಡಿಸಬೇಕಿದೆ..




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...