ಬಿಗ್ ಬಾಸ್ ಕೊಟ್ಟ ಸ್ಪಲ್ಪ ಹಣವನ್ನು ದಾನ ಮಾಡಿದ್ರಾ ರಕ್ಷಕ್,ಏನಿದು ಬಿಸಿಬಿಸಿ ಸುದ್ದಿ

ಕಾಮಿಡಿ ನಟ ಬುಲೆಟ್ ಪ್ರಕಾಶ್  ತನ್ನ ವಿಭಿನ್ನ ಆ್ಯಕ್ಟ್ ಮೂಲಕ ಮನ ರಂಜಿಸಿದವರು, ಅದರೆ ಅವರು ಇಂದು ನಮ್ಮನ್ನು ಆಗಲಿದ್ದಾರೆ. ಬುಲೆಟ್ ಪ್ರಕಾಶ್  ಅವರು ಈ ಮೊದಲೇ ತಮ್ಮ ಮಗನನ್ನು ಸಿನಿಮಾ ರಂಗಕ್ಕೆ ತರಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಅದರೆ ಮಗನ ಸಿನಿಮಾ ನೋಡುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ರಕ್ಷಕ್ ಬುಲೆಟ್ ಅವರು ಬಿಗ್ ಬಾಸ್ ಗೆ‌ಎಂಟ್ರಿ ನೀಡಿದ್ದರು.

ರಕ್ಷಕ್ ಅಂದ್ರೆ ತುಂಬಾ ಕೋಪಿಷ್ಟ, ನೇರವಾಗಿ ಮಾತನಾಡುತ್ತೇನೆ ಅಂದುಕೊಂಡಿದ್ದಾರೆ ಅದರೆ ನಾನು ಇನ್ನೊಂದು ಸೈಡ್ ಹೇಗೆ ಎಂದೆನೆ ಎಂದು ಜನರಿಗೆ‌ ತಿಳಿದಿಲ್ಲ. ಜನರಿಗೆ ತಿಳಿಸಬೇಕು ಅಂತ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಟ್ಟಿದ್ದೇನೆ ಎಂದಿದ್ದರು.
ಬುಲೆಟ್‌ನಂಥ ಡೈಲಾಗ್‌ಗಳಿಂದಲೇ ಗಮನಸೆಳೆದಿದ್ದ ಬುಲೆಟ್‌ ರಕ್ಷಕ್‌ ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರಬಿದ್ದಿದ್ದಾರೆ.

ಮನೆಯಿಂದ ಹೊರಗೆ ಹೋಗುತ್ತಿರುವುದಕ್ಕೆ ಅವರಲ್ಲಿ ಯಾವ ಬೇಸರವೂ ಇಲ್ಲವಂತೆ. ಹಾಗೆ ನೋಡಿದರೆ, ಪರಿಸ್ಥಿತಿ ಇನ್ನಷ್ಟು ಕೆಡುವ ಮೊದಲೇ ಹೊರಬಂದಿದ್ದಕ್ಕೆ ಖುಷಿಯೇ ಇದೆಯಂತೆ. ಇನ್ನು ಬಿಗ್ ಬಾಸ್ ಗೆ  ಎಂಟ್ರಿ‌ಕೊಟ್ಟ ರಕ್ಷಕ್ ಬುಲೆಟ್  ಗೆ ಎಷ್ಟು ಸಂಭಾವನೆ ‌ಕೊಡ್ತಾರೆ, ಎನ್ನುವ ಪ್ರಶ್ನೆ‌ಎಲ್ಲರಲ್ಲೂ ಸಹ ಇದೆ. ಕೆಲವೊಂದು ಮೂಲಗಳ ಪ್ರಕಾರ ರಕ್ಷಕ್‌ ಬುಲೆಟ್‌  ಒಂದು ದಿನಕ್ಕೆ ಸುಮಾರು 15 ರಿಂದ 20 ಸಾವಿರ ರೂಪಾಯಿ ಹಣ ಗಳಿಸುತ್ತಾರೆ.

ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. 4 ವಾರಗಳ ಕಾಲ ಆಟ ಆಡಿದ್ದರು ಈ ಕಾರಣದಿಂದ ಸರಿ ಸುಮಾರು 4ಲಕ್ಷ ರೂಪಾಯಿ ಇವರು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಆ ಹಣವನ್ನು ಮನೆಯಿಂದ ಹೊರ ಬರುತ್ತಿದ್ದಂತೆ ಆಶ್ರಮ ವೊಂದಕ್ಕೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

You might also like

Comments are closed.