ರಕ್ಕಮ್ಮನಂತೆಯೇ ಕಾಸ್ಟೂಮ್ ಧರಿಸಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ ಹುಡುಗಿಯ ವಿಡಿಯೊ ವೈರಲ್ ಆಗುತ್ತಲೇ ಇದೆ! ವಿಡಿಯೊ ನೋಡಿ…

ಕಳೆದ ತಿಂಗಳು ಯೂಟ್ಯೂಬ್ನಲ್ಲಿ ರಿಲೀಸ್ ಆದ ಈ ಹಾಡು ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಿದೆ. ರಾರಾ ರಕ್ಕಮ್ಮ ಎನ್ನುವ ಈ ಹಾಡಿಗೆ ಸಿನಿಮಾದಲ್ಲಿ ಸುದೀಪ್ ಮತ್ತು ಜಾಕ್ಲಿನ್ ಅವರು ಸಕ್ಕತ್ತಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಅನುಪ್ ಬಂಡಾರಿ ಅವರು ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ನೀಡಿದ್ದಾರೆ ಮತ್ತು ನಕಾಶ್ ಅಝೀಝ್ ಹಾಗೂ ಸುನಿಧಿ ಚೌಹಾಣ್ ಅವರು ಧ್ವನಿಯನ್ನು ನೀಡಿದ್ದಾರೆ ಮತ್ತು ಜಾನಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಹಾಡು ಅದ್ಭುತವಾಗಿ ಮೂಡಿ ಬರುವುದಕ್ಕೆ ಇವರೆಲ್ಲರೂ ಕಾರಣವಾಗಿದ್ದಾರೆ. ಎಲ್ಲಕ್ಕಿಂತ ವಿಶೇಷ ಎಂದರೆ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದರು. ಕಿಚ್ಚ ಸುದೀಪ್ ಅವರಿಗೆ ಜಾಕ್ಲಿನ್ ಅವರು ಈ ಟಾಸ್ಕ್ ನೀಡಿದ್ದರು. ಕಿಚ್ಚ ಸುದೀಪ್ ಅವರು ಕೂಡ ಜಾಕ್ಲಿನ್ ಅವರಿಗೆ ಒಂದು ವಾಕ್ಯ ಕನ್ನಡದಲ್ಲಿ ಮಾತನಾಡುವಂತೆ ಸವಾಲು ನೀಡಿದ್ದರು. ಜಾಕ್ಲಿನ್ ಅವರು ಕನ್ನಡದಲ್ಲಿ ಮಾತನಾಡಿದ ಬಳಿಕ ಸುದೀಪ್ ಅವರು ಕೂಡ ರಾ ರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ಸಖತ್ ಸ್ಟೆಪ್ ಹಾಕಿದ್ದಾರೆ. ಅವರು ಮಾಡಿದ್ದೇ ತಡ ಈಗ ಕಿರುತೆರೆ ಹಾಗೂ ಚಿತ್ರರಂಗದ ಕಲಾವಿದರುಗಳು ಮತ್ತು ಅಭಿಮಾನಿಗಳು ಎಲ್ಲರೂ ಕೂಡ ಸುದೀಪ್ ಅವರು ಹಾಕಿದ್ದ ಹೆಜ್ಜೆಗಳನ್ನೇ ಫಾಲೋ ಮಾಡುತ್ತಾ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಸದ್ಯಕ್ಕೆ ಈ ಹಾಡಿನ ಹವಾ ಕ್ರಿಯೇಟ್ ಆಗಿದೆ. ಕನ್ನಡ ಅಲ್ಲದೆ ಬೇರೆ ಭಾಷೆ ಕಲಾವಿದರುಗಳು ಕೂಡ ರಾ ರಾ ರಕ್ಕಮ್ಮ ಹಾಡಿಗೆ ಕುಣಿಯುತ್ತಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿನ ರೀಲ್ಸ್ ಹೊಸದೊಂದು ದಾಖಲೆ ಬರೆಯುತ್ತಿದೆ. ದಿನಕ್ಕೆ ನೂರಾರು ಜನ ಈ ಹಾಡಿಗೆ ರೀಲ್ಸ್ ಮಾಡಿ ತಾವುಗಳು ಮುನ್ನೆಲೆಗೆ ಬರುವುದರ ಜೊತೆಗೆ ಸಿನಿಮಾಗೂ ಪ್ರಚಾರ ನೀಡುತ್ತಿದ್ದಾರೆ. ಕಿರುತೆರೆಯ ಕಲಾವಿದರುಗಳಾದ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ, ವೈಷ್ಣವಿ ಗೌಡ, ಪ್ರಿಯಾಂಕ ಮತ್ತು ಗೌತಮಿ, ಗಿಚ್ಚ ಗಿಲಿಗಿಲಿ ಕಾರ್ಯಕ್ರಮದ ಕಲಾವಿದರುಗಳು, ಚಂದನ ಮತ್ತು ವಾಸುಕಿ ವೈಭವ್ ಜೊತೆಗೆ ಇನ್ನು ಅನೇಕ ಕಲಾವಿದರುಗಳು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.

ಮೊದಲಿಗೆ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ ಎರಡೇ ದಿನದ ಒಳಗಡೆ ಐದು ಸಾವಿರಕ್ಕಿಂತಲೂ ಹೆಚ್ಚು ಜನರು ಇದೇ ಹಾಡಿಗೆ ಕಿಚ್ಚ ಸುದೀಪ್ ಅವರ ಹೆಜ್ಜೆಗಳನ್ನು ಅನುಸರಿಸಿದ್ದರು. ಈಗ ಈ ಹಾಡಿಗೆ ಕೂಡ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು ಸಾಕಷ್ಟು ಜನ ಈ ವಿಡಿಯೋಗೆ ಮೆಚ್ಚುಗೆ ನೀಡಿದ್ದಾರೆ. ಈ ಹಿಂದೆ ಕೂಡ ಬರ್ಷಾಜ್ಯೋತಿ ಸಾಕಷ್ಟು ಟ್ರೆಂಡ್ ಆದ ಹಾಡಿಗೆ ಸ್ಟೆಪ್ ಹಾಕಿ ಆ ಮೂಲಕವೇ ಪ್ರಸಿದ್ಧಿ ಪಡೆದವರು. ಅವರು ಮಾಡಿದ ಹಲವು ವಿಡಿಯೊ ವೈರಲ್ ಆಗಿದ್ದವು.

ಕಿರುತೆರೆ ನಟಿಯರು – ಹಿರೋಯಿನ್ ಗಳು ಜೊತೆಗೆ ಸಾಕಷ್ಟು ಜನ ನೃತ್ಯ ಪಟುಗಳು ಸಹ ಈ ಹಾಡಿಗೆ ರೀಲ್ಸ್ ಮಾಡುತ್ತಿರುವುದು ಸುದೀಪ್ ಅಭಿಮಾನಿಗಳಿಗೆ ಖುಷಿಯಾಗಿದೆ. ಇಂಥ ಸಾಕಷ್ಟು ಕಲಾವಿದರು ರೀಲ್ಸ್ ಮಾಡುತ್ತಾ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಚಿತ್ರಕ್ಕೆ ಆನ್ ಲೈನ್ ಪ್ರಚಾರ ನೀಡುತ್ತವೆ, ಕನ್ನಡ ಸಿನೆಮಾಗಳಿಗೆ ಇಂಥದೊಂದು ಟ್ರೆಂಡ್ ಸುರುವಾಗಿರೋದು ನಿಜಕ್ಕೂ ಖುಷಿಯ ಸಂಗತಿ.

ಇನ್ನು ಇಲ್ಲಿ ಡ್ಯಾನ್ಸ್ ಮಾಡಿರುವ ಹುಡುಗಿಯ ಬಗ್ಗೆ ಹೇಳಬೇಕೆಂದರೆ, ಇವರು ನೈನಿಕಾ ಮತ್ತು ಥನಯಾ ಅಂತ ಇಬ್ಬರು ಸಹೋದರಿಯರು. ಇಬ್ಬರೂ ಅದ್ಭುತ ನೃತ್ಯಪಟುಗಳು, ಕ್ಯಾರಿ, NC, USA ನಲ್ಲಿ ವಾಸಿಸುತ್ತಿರುವ ಇವರ ಕುಟುಂಬ ಭಾರತದ ಸಂಸ್ಕೃತಿಯ ಜೊತೆ ನಿರಂತರ ಸಂಬಂಧ ಇಟ್ಟುಕೊಂಡವರು. ನೈನಿಕಾ 5ನೇ ತರಗತಿ ಹಾಗೂ ಥನಯಾ 3ನೇ ತರಗತಿ ಓದುತ್ತಿದ್ದಾರೆ. ಅವರು ವಿವಿಧ ಭಾಷೆಗಳಲ್ಲಿ ಪ್ರಾಥಮಿಕವಾಗಿ ತೆಲುಗು, ಹಿಂದಿ ಮತ್ತು ತಮಿಳು ಹಾಡುಗಳಿಗೆ ನೃತ್ಯ ಕವರ್‌ ಗಳನ್ನು ತಯಾರಿಸುತ್ತಾರೆ. ಇಬ್ಬರಲ್ಲಿ ಇಲ್ಲಿ ನೃತ್ಯ ಮಾಡಿರುವ ನೈನಿಕಾ ಶೀಘ್ರ ಕಲಿಯುವವಳು ಮತ್ತು ತನ್ನ ತಂದೆಯ ಸಹಾಯದಿಂದ ತನ್ನದೇ ಆದ ಸ್ಟೆಪ್ ಗಳನ್ನು ಸಂಯೋಜಿಸಲು ಪ್ರಾರಂಭಿಸಿದಳು.

ಥಾನಯಾ ಅಕ್ಕನ ಹೆಜ್ಜೆಗಳನ್ನು ಅನುಸರಿಸುತ್ತಾಳೆ, ಕೆಲವೊಮ್ಮೆ ಥನಯಾ ಕೂಡ ಹೊಸ ಸ್ಟೆಪ್ ಗಳನ್ನು ಸೃಷ್ಟಿಸುತ್ತಾಳೆ. ಚಿತ್ರ ಬಿಡಿಸುವುದು, ಹಾಡುವುದು ಮತ್ತು ಹೊರಾಂಗಣ ಆಟಗಳನ್ನು ಆಡುವುದರಲ್ಲಿ ಇಬ್ಬರಿಗೂ ಆಸಕ್ತಿ. ಅವರ ವೀಡಿಯೊಗಳಿಗೆ ನೃತ್ಯ ಸಂಯೋಜನೆಯನ್ನು ನೈನಿಕಾ ಮತ್ತು ತಂದೆ ಮಾಡಿದ್ದಾರೆ. ವೇಷಭೂಷಣಗಳನ್ನು ಅವರ ತಾಯಿ ವಿನ್ಯಾಸಗೊಳಿಸಿದ್ದಾರೆ ಮತ್ತು ಕಸ್ಟಮೈಸ್ ಮಾಡಿದ್ದಾರೆ. ವೀಡಿಯೋಗ್ರಫಿ ಮತ್ತು ಎಡಿಟಿಂಗ್ ಅನ್ನು ಅವರ ಅಪ್ಪ ಮಾಡಿದ್ದಾರೆ. ಇವರದೇ ಫೇಸ್ಬುಕ್ ಪೇಜ್, ಯೂಟ್ಯೂಬ್ ಚಾನೆಲ್, ಟ್ವಿಟರ್ ಅಕೌಂಟ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಕೂಡ ಇದೆ. ಅವೆಲ್ಲದರ ಮೂಲಕ ಇವರಿಬ್ಬರೂ ಲಕ್ಷಾಂತರ ಫಾಲೊವರ್ಸ್ ಹೊಂದಿದ್ದಾರೆ.

ನೈನಿಕಾ ಮಾಡಿರುವ ಡ್ಯಾನ್ಸ್ ವಿಡಿಯೊ ಕೆಳಗಿದೆ ನೋಡಿ…

You might also like

Comments are closed.