ನಟಿ ರಾಖಿ ಸಾವಂತ್ (Rakhi Sawant) ಯಾರಿಗೆ ಗೊತ್ತಿಲ್ಲ ಹೇಳಿ. ದಿನಕೊಂದು ಹೊಸ ನಾಟಕಗಳ ಮೂಲಕವೇ ಒಂದಲ್ಲೊಂದು ಸುದ್ದಿಯಲ್ಲಿರುವ ರಾಖಿ ಸಾವಂತ್ ಶೋ ಪೇಜಿನ ಫೇಮಸ್ ಮುಖವಾಗಿದ್ದಾರೆ. ತಮ್ಮ ಕೆಲಸಗಳಿಗಿಂತರ ಹೆಚ್ಚು ವಿವಾದಗಳಿಂದಲೇ ಗಮನ ಸೆಳೆಯುವ ರಾಖಿ ಮತ್ತು ಬಾಯ್ಫ್ರೆಂಡ್ ಅದಿಲ್ ಜೊತೆಯ ಮದುವೆಯ ಡ್ರಾಮಾ ಕೆಲವು ದಿನಗಳಿಂದ ಸಾಕಷ್ಟು ಮನರಂಜನೆ ಒದಗಿಸಿದೆ ಎಂದರೆ ತಪ್ಪಿಲ್ಲ. ಈಗ ರಾಖಿ ಅವರಿಗೆ ಇನ್ನೊಂದು ಸುದ್ದಿ ಹೊರ ಬಂದಿದೆ. ಹರಡುತ್ತಿರುವ ವಿಷಯದ ಪ್ರಕಾರ ರಾಖಿ ಸಾವಂತ್ ಪತಿ ಅದಿಲ್ ಖಾನ್ ಅವರ ಮಗುವಿನ ತಾಯಿಯಾಗಲಿದ್ದಾರಂತೆ. ಹೌದು ರಾಖಿ ಪ್ರೆಗ್ನೆಂಟ್ ಎಬ್ಬ ಸುದ್ದಿ ಸದ್ಯಕ್ಕೆ ವರದಿಯಾಗುತ್ತಿದೆ. ಅಷ್ಷಕ್ಕೂ ಇದು ನಿಜನಾ?
ಏಳು ತಿಂಗಳ ಹಿಂದೆ ತನ್ನ ಗೆಳೆಯ ಆದಿಲ್ ದುರಾನಿಯನ್ನು ರಹಸ್ಯವಾಗಿ ಮದುವೆಯಾಗಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ರಾಖಿ ಸಾವಂತ್ ಏಳು ತಿಂಗಳ ಹಿಂದೆ ಅದಿಲ್ ಖಾನ್ ದುರಾನಿ ಅವರನ್ನು ರಹಸ್ಯವಾಗಿ ವಿವಾಹವಾದರು. ಅವರ ನ್ಯಾಯಾಲಯದ ವಿವಾಹ ಸಮಾರಂಭದ ಛಾಯಾಚಿತ್ರಗಳು ವೈರಲ್ ಆಗಿದ್ದವು.
ಮೊದಲು ರಾಖಿ ಜೊತೆಯ ಮದುವೆಯನ್ನು ನಿರಾಕರಿಸಿದರೆ ಆದಿಲ್ ಅಂತಿಮವಾಗಿ ತಮ್ಮ ಮದುವೆಯನ್ನು ಸಾರ್ವಜನಿಕವಾಗಿ ಸ್ವೀಕರಿಸಿದ್ದಾರೆ.
ಈ ಜೋಡಿಯ ಮದುವೆಯ ನಾಟಕ ಸಾಕಷ್ಟು ಪ್ರಚಾರ ಪಡೆದ ನಂತರ ಈಗ ರಾಖಿ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವದಂತಿಗಳು ಅಂತರ್ಜಾಲದಲ್ಲಿ ಹರಡಲು ಪ್ರಾರಂಭಿಸಿದವು.
ತನ್ನ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಲು ಹೆಸರುವಾಸಿಯಾಗಿರುವ ರಾಖಿ, ಮಾಧ್ಯಮ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಗರ್ಭಧಾರಣೆಯ ವದಂತಿಗಳನ್ನು ತಿಳಿಸಲು ನಿರಾಕರಿಸಿದರು.
ಸುಳಿದಾಡುತ್ತಿರುವ ಪ್ರೆಗ್ನೆಂಸಿ ವದಂತಿಗಳ ಬಗ್ಗೆ ಪ್ರಶ್ನಿಸಿದಾಗ, 44 ವರ್ಷ ವಯಸ್ಸಿನ ರಾಖಿ ಸಾವಂತ್ ಅವರು ‘ ನೋ ಕಾಮೆಂಟ್ಸ್’ ಎಂದು ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...